More

    ಮುಂಡಗೋಡ ಗಡಿಯಲ್ಲಿ ಹುಲಿ ಪ್ರತ್ಯಕ್ಷ

    ಮುಂಡಗೋಡ: ಮುಂಡಗೋಡ ಹಾಗೂ ಕಲಘಟಗಿ ಗಡಿಭಾಗದಲ್ಲಿ ಹುಲಿ ಕಾಣಿಸಿಕೊಂಡಿರುವುದು ಹುನಗುಂದ ಮತ್ತು ಅತ್ತಿವೇರಿ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಮಧ್ಯೆ ಎಚ್ಚರಿಕೆಯಿಂದ ಇರುವಂತೆ ಗ್ರಾಮದ ಮುಖ್ಯಸ್ಥರು ಡಂಗುರ ಹೊಡೆಸಿದ್ದಾರೆ.

    2-3 ದಿನಗಳ ಹಿಂದೆ ಕಲಘಟಗಿ ತಾಲೂಕಿನ ಬೆಂಡ್ಲಗಟ್ಟಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿತ್ತು. ಅದನ್ನು ಸೆರೆ ಹಿಡಿಯುವ ಪ್ರಯತ್ನ ವಿಫಲವಾಗಿತ್ತು. ಒಬ್ಬಂಟಿಯಾಗಿ ಕಾಡಿಗೆ ತೆರಳದಂತೆ ಹಾಗೂ ಹೊಲಗದ್ದೆಗಳಲ್ಲಿ ಸಂಜೆಯ ನಂತರ ಬಿಡಾರ ಹೂಡದಂತೆ ಗ್ರಾಮದ ಮುಖ್ಯಸ್ಥರು ಸೂಚಿಸಿದ್ದಾರೆ.

    ಹೆಜ್ಜೆ ಗುರುತು: ಮುಂಡಗೋಡ ಗಡಿಭಾಗದ ಬೆಂಡ್ಲಗಟ್ಟಿ, ಬೀರವಳ್ಳಿ, ಗುಡ್ಡದ ಹುಲಿಕಟ್ಟಿ ಗ್ರಾಮಗಳ ಸನಿಹ ಹುಲಿಯ ಹೆಜ್ಜೆ ಗುರುತು ಕಂಡು ಬಂದಿವೆ. ಮುಂಡಗೋಡ ಹಾಗೂ ಕಲಘಟಗಿ ತಾಲೂಕಿನ ಅರಣ್ಯ ಸಿಬ್ಬಂದಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದೆ. ಮೂರು ತಂಡಗಳು ಸದ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ ಎಂದು ಕಲಘಟಗಿ ಆರ್​ಎಫ್​ಒ ಶ್ರೀಕಾಂತ ಪಾಟೀಲ ತಿಳಿಸಿದ್ದಾರೆ. ಹುಲಿಯು ಅಕ್ಕ-ಪಕ್ಕದ ಗ್ರಾಮಗಳಲ್ಲಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

    ಕಲಘಟಗಿಯ ಬೆಂಡಲಗಟ್ಟಿ ಅರಣ್ಯ ಪ್ರದೇಶದಲ್ಲಿ ಫೆ. 9ರಂದು ರಾತ್ರಿ ಹುಲಿ ಕಾಣಿಸಿಕೊಂಡಿದ್ದು ನಿಜ. ಅಲ್ಲಿಂದ ಅದು ಬೇರೆ ಕಡೆಗೆ ಹೋಗಿದ್ದು, ಅಲ್ಲಿ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಒಂದೇ ಜಾಗದಲ್ಲಿ ಅದು ಇರುವುದಿಲ್ಲ. ಅತ್ತಿವೇರಿ ಪಕ್ಷಿಧಾಮದ ಅರಣ್ಯ ಪ್ರದೇಶ ಹತ್ತಿರವಿರುವುದರಿಂದ ಅತ್ತಿವೇರಿ, ಹುನಗುಂದ ಮತ್ತು ಸುತ್ತಮುತ್ತಲಿನ ಜನರಿಗೆ ಅರಣ್ಯಕ್ಕೆ ಹೋಗದಂತೆ ಮತ್ತು ದನಕರುಗಳನ್ನು ಅರಣ್ಯಕ್ಕೆ ಬಿಡದಂತೆ ಜಾಗೃತಿ ಮೂಡಿಸಿ ಡಂಗುರ ಸಾರಲಾಗಿದೆ. | ಸುರೇಶ ಕುಳ್ಳೊಳ್ಳಿ, ಆರ್​ಎಫ್​ಒ ಮುಂಡಗೋಡ

    ಅರಣ್ಯ ಸಮಿತಿ ವತಿಯಿಂದ ಡಂಗುರ ಸಾರಿ ಈಗಾಗಲೇ ಗ್ರಾಮಸ್ಥರಲ್ಲಿ ಹುಲಿ ಸುಳಿದಾಟದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಸಚಿವ ಶಿವರಾಮ ಹೆಬ್ಬಾರ ಅವರು ಈ ಬಗ್ಗೆ ಗಮನ ಹರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಕ್ರಮ ವಹಿಸಲು ಸೂಚಿಸಿ ಜನರಿಗೆ ಮತ್ತು ಜಾನುವಾರುಗಳಿಗೆ ರಕ್ಷಣೆ ಒದಗಿಸಬೇಕು. | ಸಿದ್ದಣ್ಣ ಹಡಪದ, ಹುನಗುಂದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts