More

    ಮುಂಗಾರು ಮಳೆ ಮುನ್ನ ಕಾಮಗಾರಿ ಮುಗಿಸಿ

    ಹಾನಗಲ್ಲ: ಕೆಲ ದಿನಗಳಲ್ಲೇ ಮುಂಗಾರು ಮಳೆ ಆರಂಭವಾಗಲಿದ್ದು, ಶೀಘ್ರವಾಗಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು. ಮಳೆ ಬಂದು ನೀರು ನಿಂತರೆ ಕಾಮಗಾರಿಗೆ ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ತಾಲೂಕಿನ ಕೆಲವರಕೊಪ್ಪ ಗ್ರಾಪಂ ವ್ಯಾಪ್ತಿಯ ಮಾಳಾಪುರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ವಡ್ಡರಕಟ್ಟಿ ಕೆರೆ ಹೂಳೆತ್ತುವ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    45 ಎಕರೆ ವಿಸ್ತಾರದ ಕೆರೆ ಹೂಳೆತ್ತುವುದರಿಂದ ಮಳೆ ನೀರು ಸಂಗ್ರಹವಾಗಿ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.

    ಕೆಲವರಕೊಪ್ಪ ಗ್ರಾಪಂ ಅಧ್ಯಕ್ಷೆ ಜಾನಕಮ್ಮ ಲಮಾಣಿ, ತಾಲೂಕು ಬಿಜೆಪಿ ಅಧ್ಯಕ್ಷ ರಾಜು ಗೌಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ, ತಾಪಂ ಮಾಜಿ ಉಪಾಧ್ಯಕ್ಷ ಶಿದ್ದಲಿಂಗಪ್ಪ ಶಂಕ್ರಿಕೊಪ್ಪ, ಭೂನ್ಯಾಯ ಮಂಡಳಿ ಸದಸ್ಯ ಶಿವಲಿಂಗಪ್ಪ ತಲ್ಲೂರ, ಡಾ.ಸುನೀಲ ಹಿರೇಮಠ, ಸಂತೋಷ ಟೀಕೋಜಿ, ಗಣೇಶ ಮೂಡ್ಲಿಯವರ, ರವಿರಾಜ ಕಲಾಲ ಇತರರು ಇದ್ದರು.

    ಪಿಪಿಇ ಕಿಟ್, ಮಾಸ್ಕ್ ವಿತರಣೆ

    ತಾಲೂಕಿನ ತಿಳವಳ್ಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಪಿಪಿಇ ಕಿಟ್ ಹಾಗೂ ಮಾಸ್ಕ್​ಗಳನ್ನು ಶಾಸಕ ಸಿ.ಎಂ. ಉದಾಸಿ ವಿತರಿಸಿದರು. ಕರೊನಾ ತಪಾಸಣೆ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದದು ಮುಖ್ಯವಾಗಿದೆ. ತಮ್ಮ ಸೇವೆ ಈಗ ಅಮೂಲ್ಯವಾಗಿದೆ. ಸೇವಾ ಭಾವನೆಯಿಂದ ಹಗಲಿರುಳೂ ಸೇವೆ ಸಲ್ಲಿಸಿ ಸರ್ಕಾರದ ಪ್ರಯತ್ನಕ್ಕೆ ಕೈ ಜೋಡಿಸಬೇಕು ಎಂದು ವೈದ್ಯರು ಹಾಗೂ ಸಿಬ್ಬಂದಿಗೆ ಮನವಿ ಮಾಡಿದರು. ಡಾ. ರಾಘವೇಂದ್ರ, ಡಾ.ವಿ.ಎನ್. ಹುದ್ದಾರ, ಡಾ.ಸುನೀಲ ಹಿರೇಮಠ ಆರೋಗ್ಯ ಮೇಲ್ವಿಚಾರಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts