More

    ಮೀಸಲಾತಿ ಹೋರಾಟ ನಿರಂತರ

    ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆಯುವುದಕ್ಕಾಗಿ ದಶಕಗಳಿಂದಲೂ ಕಾನೂನು ಹೋರಾಟ ಮಾಡುತ್ತಿದ್ದೇವೆ. ಮೀಸಲಾತಿ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಪಂಚಮಸಾಲಿ ರಾಷ್ಟ್ರೀಯ ಕಾನೂನು ಸಲಹೆಗಾರ ದಿನೇಶ ಪಾಟೀಲ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ದಶಕಗಳಿಂದಲೂ ಕಾನೂನು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಕೆಲವರು ಇದು ರಾಜಕೀಯ ಪ್ರೇರಿತ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ, ನಮ್ಮ ಕಾನೂನು ಹೋರಾಟಕ್ಕೆ ರಾಜಕೀಯ ನಾಯಕರು ಬೆಂಬಲವಾಗಿ ನಿಂತಿದ್ದಾರೆ ಎಂದರು.

    ಹಿಂದುಳಿದ ಆಯೋಗದ ವರದಿ ತರಿಸಿಕೊಳ್ಳುವಂತೆ ಸರ್ಕಾರಕ್ಕೆ ಹೇಳಿದರೂ ಅಲಕ್ಷ್ಯ ಮಾಡಿತ್ತು. 1985-93ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಸರ್ವೇ ಮಾಡಿ ವರದಿ ಸಿದ್ಧಪಡಿಸಿ ಪ್ರವರ್ಗದ ವಸಂತಕುಮಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ, ಆ ಕಾಯ್ದೆ ಕರ್ನಾಟಕದಲ್ಲಿ 1995ರಲ್ಲಿ ಕಾನೂನು ಜಾರಿಗೆ ಬಂತು ಎಂದು ಹೇಳಿದರು.

    ಹಿಂದುಳಿದ ಆಯೋಗದ ಪ್ರ ವರ್ಗ ಕಾನೂನನ್ನು ಕೇವಲ ಬಿಜೆಪಿ ಸರ್ಕಾರ ಮಾತ್ರವಲ್ಲ. 2002ರಿಂದ ಬಂದ ಎಲ್ಲ ಸರ್ಕಾರಗಳು ಉಲ್ಲಂಘನೆ ಮಾಡಿವೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಬದಲಾವಣೆ ಮಾಡಬೇಕು. ಇದನ್ನು ಹಿಂದುಳಿದ ಆಯೋಗ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿತ್ತು. 1995ರ ಕಾನೂನು ಪ್ರಕಾರ ನೀಡಬೇಕಿತ್ತು. ಆದರೆ ಅದನ್ನು ಉಲ್ಲಂಘಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸಮುದಾಯದವರು ಹೋರಾಡುತ್ತಿದ್ದಾರೆ. ಹಿಂದುಳಿದ ಆಯೋಗದ ಮುಂದೆ 2ಎ ಮೀಸಲಾಗತಿಗಾಗಿ ಅರ್ಜಿ ನೀಡಿದಾಗಿನಿಂದಲೂ ಸರ್ಕಾರ ಮುಂದೆ ಹಾಕಿಕೊಂಡು ಬಂದಿದೆ. 2022-23ರಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ಸಭೆ ಕರೆಯಲಾಯಿತು. ಆದರೂ, ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ ಹಿನ್ನೆಲೆಯಲ್ಲಿ ಕಾನೂನು ಹೋರಾಟ ನಡೆಸಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಆರ್. ಸಿ.ಪಾಟೀಲ, ಆರ್.ಎಸ್.ಕಮತ, ಶಿವಪುತ್ರ ಪಟ್ಕಳ, ಆರ್.ಎಸ್.ಕಮತ, ರಾಜೇಂದ್ರ ದರೇಗೌಡರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts