More

    ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯ

    ತಾಳಿಕೋಟೆ : ಪರಿಶಿಷ್ಟ ಪಂಗಡದ ಜನಾಂಗದವರಿಗೆ ಶೈಕ್ಷಣಿಕ ಹಾಗೂ ಔಧ್ಯೋಗಿಕವಾಗಿ ಮೀಸಲಾತಿ ಪ್ರಮಾಣ ಶೇ. 3 ರಿಂದ 7.5 ಕ್ಕೆ ಹೆಚ್ಚಳಮಾಡಬೇಕೆಂದು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
    ನ್ಯಾ. ನಾಗಮೋಹನದಾಸ ವರದಿಯಂತೆ ವಾಲ್ಮೀಕಿ ಜನಾಂಗಕ್ಕೆ ಶೇ. 7.5 ಮೀಸಲಾತಿ ಒದಗಿಸುವಲ್ಲಿ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಅ.31ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿಯವರ ಜಯಂತಿ ಪೂರ್ವದಲ್ಲಿ ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಅನೀಲಕುಮಾರ ಢವಳಗಿ ಅವರಿಗೆ ಮನವಿ ಸಲ್ಲಿಸಿದರು.
    ನೌಕರರ ಸಂಘದ ಮುಖಂಡರಾದ ಪ್ರಕಾಶ ಪಾಟೀಲ, ಎಸ್.ಎಲ್. ಕೊಡೇಕಲ್ಲ, ಎಚ್.ಬಿ. ನಾಯಕ, ಜಗದೀಶ ನಾಲತವಾಡ, ವೇಂಕಟೇಶ ದಾನ್ನೂರ, ವೆಂಕೋಬಾ ನಾಯ್ಕೋಡಿ, ಕುಮಾರ ಅಸ್ಕಿ, ಕಾಶಿನಾಥ ವಡಗೇರಿ, ಮುತ್ತುರಾಜ ಕೊಡೇಕಲ್ಲ, ಬಸವರಾಜ ದೇವದುರ್ಗ, ಎಸ್.ವೈ. ಬರದೇನಾಳ, ಹಣಮಂತ ಮೇಲಿನಮನಿ, ಹಣಮಂತ ಬಾಗೇವಾಡಿ, ಸದಾನಂದ ಅಂಬಳನೂರ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts