More

    ಮಾಸ್ಕ್, ಸ್ಯಾನಿಟೈಸರ್​ನಲ್ಲಿ ಹಣ ಮಾಡುವ ಸರ್ಕಾರ

    ತೀರ್ಥಹಳ್ಳಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ತಾಲೂಕು ಯೂತ್ ಕಾಂಗ್ರೆಸ್ ಮತ್ತು ಎನ್​ಎಸ್​ಯುುಐ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಸೈಕಲ್ ಜಾಥಾ ನಡೆಸಿ ಬಳಿಕ ತಾಲೂಕು ಕಚೇರಿ ಎದುರು ಪ್ರತಿಭಟನೆ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

    ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 15 ರೂ.ಗೆ ಸಿಗುವ ಪೆಟ್ರೋಲ್, ಡೀಸೆಲ್ ಅನ್ನು 85 ರೂ.ಗೆ ಏರಿಸಿರುವ ಕೇಂದ್ರ ಸರ್ಕಾರ ಜನಪರ ಆಡಳಿತ ನಡೆಸಲಾರದ ಸ್ಥಿತಿ ತಲುಪಿದೆ. ರಾಜ್ಯದಲ್ಲಿ ಕರೊನಾದಿಂದ ಮೃತಪಟ್ಟವರನ್ನು ಪ್ರಾಣಿಗಳಂತೆ ಜೆಸಿಬಿ ಮೂಲಕ ಶವ ತಂದು ಎಸೆಯುತ್ತಿರುವುದು ಖಂಡನೀಯ ಎಂದು ದೂರಿದರು.

    ಯುದ್ಧ ಭೂಮಿಯಿಂದ 400 ಕಿಮೀ ದೂರದಲ್ಲಿ ನಿಂತು ಭಾಷಣ ಮಾಡಿ ಪ್ರಚಾರ ಪಡೆಯುವ ಪ್ರಧಾನಿ ಮೋದಿ ಅವರ ವಿದೇಶ ನೀತಿ ಆತಂಕಕಾರಿ. ಚೀನಾ, ರಷ್ಯಾ, ನೇಪಾಳ, ಮ್ಯಾನ್ಮಾರ್ ಸೇರಿ ನೆರೆಯ ದೇಶಗಳು ಭಾರತದ ವಿರುದ್ಧ ಸಡ್ಡು ಹೊಡೆಯುತ್ತಿವೆ ಎಂದರು.

    ದೇಶದ ಆರ್ಥಿಕ ಸ್ಥಿತಿಯೂ ಶೋಚನೀಯವಾಗಿದೆ. ಜಾತಿ ಧರ್ಮದ ಆಧಾರದಲ್ಲಿ ರಾಜಕೀಯ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಾಸ್ಕ್, ಸ್ಯಾನಿಟೈಸರ್​ನಲ್ಲಿ ಹಣ ಮಾಡುತ್ತಿದ್ದು ಆಡಳಿತ ನಡೆಸಲು ತಾನು ಅಸಮರ್ಥ ಎಂಬುದನ್ನು ಸಾಬೀತುಪಡಿಸಿದೆ. ಶಾಸಕ ಆರಗ ಜ್ಞಾನೇಂದ್ರ ಕಾಮಗಾರಿಗಳ ಉದ್ಘಾಟನೆ ನಿಲ್ಲಿಸಿ ಜನರ ಸಂಕಷ್ಟಗಳಿಗೆ ನೆರವಾಗಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.

    ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕೆಳಕೆರೆ, ಎನ್​ಎಸ್​ಯುುಐ ಅಧ್ಯಕ್ಷ ಅಜಿತ್, ಮುಖಂಡರಾದ ಜಿ.ಎಸ್.ನಾರಾಯಣರಾವ್, ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಹಾರೋಗುಳಿಗೆ ಪದ್ಮನಾಭ್, ಬಾಳೆಹಳ್ಳಿ ಪ್ರಭಾಕರ್, ಅಮ್ರಪಾಲಿ ಸುರೇಶ್, ಕೇಳೂರು ಮಿತ್ರಾ ಇತರರಿದ್ದರು.

    ಪ್ರಸ್ತುತ ಕರೊನಾ ವೈರಸ್ ಸಂಕಷ್ಟದಲ್ಲಿಯೂ ಬಡವರ ಮಕ್ಕಳು ಕನಿಷ್ಠ ಗಂಜಿ ಕುಡಿಯುತ್ತಿದ್ದಾರೆಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ ಮತ್ತು ನರೇಗಾ ಕಾರಣ. ಇಂದು ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಧಾರಣೆ ಗಗನಕ್ಕೇರಿದೆ. ಆದರೆ ಮೋದಿಯ ಅಂಧ ಭಕ್ತರು ಪೆಟ್ರೋಲ್ ಬೆಲೆ 100ಕ್ಕೆ ತಲುಪಲಿ ಎಂದು ಹೇಳುತ್ತಿರುವುದು ಹಾಸ್ಪಾಸ್ಪದ.

    | ಶ್ವೇತಾಬಂಡಿ, ಜಿಪಂ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts