More

    ಮಾಸಿಕ ಸಹಾಯಧನ ಹೆಚ್ಚಿಸಲು ಒತ್ತಾಯ-  ವಿಮುಕ್ತ ದೇವದಾಸಿಯರ ಪ್ರತಿಭಟನೆ 

    ದಾವಣಗೆರೆ: ವಿಮುಕ್ತ ದೇವದಾಸಿಯರ ಮಾಸಿಕ ಸಹಾಯಧನ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿಯರ ವಿಮೋಚನಾ ಸಂಘದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿಮುಕ್ತ ದೇವದಾಸಿಯರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಿದರು.
    ವಿಮುಕ್ತ ದೇವದಾಸಿಯರಿಗೆ 1500 ರೂ.ನಿಂದ 3 ಸಾವಿರ ರೂ.ಗಳಿಗೆ ಮಾಸಿಕ ಸಹಾಯಧನ ಹೆಚ್ಚಿಸಬೇಕು. ಅವರ ಪರಿತ್ಯಕ್ತ ಹೆಣ್ಣುಮಕ್ಕಳಿಗೂ ಅದನ್ನು ವಿಸ್ತರಿಸಬೇಕು. ಸ್ವಯಂ ಉದ್ಯೋಗಕ್ಕೆ ವೃತ್ತಿ ತರಬೇತಿ ಶಿಬಿರ ನಡೆಸಬೇಕು ಎಂದು ಆಗ್ರಹಿಸಿದರು.
    ಗಣತಿಯಲ್ಲಿ ಬಿಟ್ಟುಹೋದ ವಿಮುಕ್ತ ದೇವದಾಸಿಯರನ್ನು ಗಣತಿ ಪಟ್ಟಿಯಲ್ಲಿ ಸೇರಿಸಿ ಅಗತ್ಯ ನೆರವು ಒದಗಿಸಬೇಕು. ಅವರ ಮಕ್ಕಳ ಮತ್ತು ಕುಟುಂಬದ ಸದಸ್ಯರನ್ನು ಗಣತಿ ಮಾಡಿ ಸಹಾಯ ಒದಗಿಸಬೇಕು. ಮಕ್ಕಳ ಮದುವೆಗೆ ಷರತ್ತುರಹಿತವಾಗಿ 5 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಬೇಕು. ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಬೇಕು.
    ವಿಮುಕ್ತ ದೇವದಾಸಿಯರು ಮತ್ತು ಅವರ ಮಕ್ಕಳಿಗೆ ಉಚಿತವಾಗಿ ತಲಾ 5 ಎಕರೆ ನೀರಾವರಿ ಜಮೀನು, ಕೃಷಿ ಮತ್ತಿತರ ಫಾರಂಗಳ ಜಮೀನುಗಳನ್ನೂ ಬೇಸಾಯಕ್ಕೆ ಒದಗಿಸಬೇಕು. ನಿವೇಶನ ರಹಿತರಿಗೆ 7 ಲಕ್ಷ ರೂ. ಮೌಲ್ಯದ ಮನೆಗಳನ್ನು ನಿರ್ಮಿಸಿಕೊಡಬೇಕು. ಸ್ವಉದ್ಯೋಗಕ್ಕೆ ವೃತ್ತಿ ತರಬೇತಿ ಶಿಬಿರ ನಡೆಸಬೇಕು. ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
    ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ವಿ.ರೇಣುಕಮ್ಮ, ಜಿಲ್ಲಾಧ್ಯಕ್ಷೆ ಚನ್ನಮ್ಮ, ಜಿಲ್ಲಾ ಕಾರ್ಯದರ್ಶಿಗಳಾದ ಕರಿಬಸಮ್ಮ, ಆನಂದರಾಜು, ಸದಸ್ಯರಾದ ದೇವೀರಮ್ಮ, ಹೊನ್ನಮ್ಮ, ಮೈಲಮ್ಮ, ಮಂಜುಳಾ, ಹುಚ್ಚಮ್ಮ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts