More

    ಮಾಸಿಕ ಗೌರವಧನ ಹೆಚ್ಚಳ ಮಾಡಿ


    ಯಾದಗಿರಿ: ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳಕ್ಕೆ ಒತ್ತಾಯಿಸಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

    ರಾಜ್ಯಾದ್ಯಂತ 4 ಸಾವಿರ ಅತಿಥಿ ಉಪನ್ಯಾಸಕರು ಸಕರ್ಾರಿ ಪದವು ಪೂರ್ವ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಕಡಿಮೆ ಗೌರವಧನ ಪಡೆದು ವಿದ್ಯಾಥರ್ಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮಗೆ ಅತ್ಯಂತ ಕಡಿಮೆ ಗೌರವಧನದ ನೀಡಲಾಗುತ್ತಿದೆ ಎಂದು ಪದಾಧಿಕಾರಿಗಳು ಅಳಲು ತೋಡಿಕೊಂಡರು.

    ಸರಕಾರ ಕೇವಲ 8 ತಿಂಗಳಿಗಾಗಿ ನಮ್ಮನ್ನು ನೇಮಕ ಮಾಡಿಕೊಳ್ಳುತ್ತದೆ. ಗೌರವಧನ ಸಹ ಮೂರು ತಿಂಗಳೂ ಇಲ್ಲವೆ ಆರು ತಿಂಗಳಿಗೊಮ್ಮೆ ಮಂಜೂರಾಗುತ್ತದೆ. ಇದರಿಂದಾಗಿ ಕುಟುಂಬ ನಿರ್ವಹಣೆಗೆ ಬಹಳ ತೊಂದರೆಯಾಗುತ್ತಿದೆ. ಸಕರ್ಾರದ ಆದೇಶದ ಪ್ರಕಾರ ವಾರದಲ್ಲಿ 10 ಗಂಟೆಯ ಕಾಲ ಕಾರ್ಯಭಾರ ನೀಡಬೇಕು. ಆದರೆ ನಾವು 20 ಗಂಟೆ ಕೆಲಸ ಮಾಡುತ್ತಿದ್ದೇವೆ ಎಂದರು.

    ಇಷ್ಟೆಲ್ಲಾ ಕಾರ್ಯವನ್ನು ಮಾಡಿದರೂ ಸಹ ನಮಗೆ ಸೇವಾ ಭದ್ರತೆಯಾಗಲಿ, ಗುರುತಿನ ಚೀಟಿಯಾಗಲಿ, ಸೇವಾ ಪ್ರಮಾಣ ಪತ್ರವಾಗಲಿ ಇಲ್ಲ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸೇವೆಯನ್ನು ಸಲ್ಲಿಸಲು ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಕಾಲ ಕಳೆಯಬೇಕಾಗಿದೆ. ಹೀಗಾಗಿ ಸಕರ್ಾರ ನಮಗೆ ಕನಿಷ್ಟ 25 ಸಾವಿರ ರೂ.ಮಾಸಿಕ ಗೌರವ ಸಂಭಾವನೆ ಹೆಚ್ಚಿಸಬೇಕು. ಶೈಕ್ಷಣಿಕ ವರ್ಷದ ಮಾಚರ್್ವರೆಗೆ ಸೇವೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts