More

    ಮಾವು ಇಳುವರಿಗೆ ಈ ಬಾರಿ ಕತ್ತರಿ

    ಶಶಿಧರ ಕುಲಕರ್ಣಿ ಮುಂಡಗೋಡ

    ಪ್ರಸಕ್ತ ವರ್ಷದ ಅತಿವೃಷ್ಟಿ ಪ್ರಭಾವ ಹಾಗೂ ಒಣ ಹವೆಯ ಅಭಾವದ ಕಾರಣದಿಂದಾಗಿ ಮಾವಿನ ಫಸಲು ಕುಂಠಿತಗೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ.

    ತಾಲೂಕಿನಲ್ಲಿ ಸುಮಾರು 850 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಶೇ. 50ರಷ್ಟು ಪ್ರದೇಶದ ಗಿಡಗಳು ಮಾತ್ರ ಹೂ ಬಿಟ್ಟಿವೆ. ಬಿಟ್ಟಿರುವ ಹೂವಿನಿಂದ ಮಾವಿನ ಫಲ ಚೆನ್ನಾಗಿ ಬರಬಹುದು. ಆದರೆ, ಇಳುವರಿ ಮಾತ್ರ ಕಡಿಮೆಯಾಗಲಿದೆ. ಇದರಿಂದ ರೈತರಿಗೆ ನಷ್ಟವಾಗುವ ಸಾಧ್ಯತೆ ಇದೆ. ಕೆಲವೊಂದು ಕಡೆ ಒಂದು ತೋಟದ ಗಿಡದಲ್ಲಿ ಹೂವು ಬಿಟ್ಟಿದ್ದರೆ ಪಕ್ಕದ ತೋಟದ ಗಿಡದಲ್ಲಿ ಹೂ ಬಿಟ್ಟಿಲ್ಲ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

    ಆಪೂಸ್ ಮತ್ತು ಪೈರಿ ಜಾತಿಯ ಬೆಳೆ ಎರಡು ವರ್ಷಕ್ಕೊಮ್ಮೆ ಬರುತ್ತದೆ. ತೋತಾಪುರಿ, ನೀಲಂ ಮತ್ತು ರಾಜಗಿರಿ ಇವು ಪ್ರತಿ ವರ್ಷ ಬೆಳೆಯುತ್ತವೆ. ಆದರೆ, ಇಲ್ಲಿನ ಎಲ್ಲ ರೈತರು ಸಾಮಾನ್ಯವಾಗಿ ಆಪೂಸ್ ಮಾವನ್ನೇ ಹೆಚ್ಚಾಗಿ ಬೆಳೆಯುತ್ತಾರೆ. ಹಾಗಾಗಿ ವಾತಾವರಣದ ಪರಿಣಾಮ ಒಂದು ಕಡೆಯಾದರೆ ಎರಡು ವರ್ಷಕ್ಕೊಮ್ಮೆ ಬಿಡುವ ಏಕ ಮುಖ ಗುಣ ಧರ್ಮವಿರುವ ಗಿಡವನ್ನು ಹೆಚ್ಚಾಗಿ ನಾಟಿ ಮಾಡಿರುವುದರಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.

    ನನ್ನ ಮಾವಿನ ತೋಟದಲ್ಲಿ ಕೆಲವು ಗಿಡಗಳು ಹೂವು ಬಿಟ್ಟರೆ ಇನ್ನು ಕೆಲವು ಹೂವು ಬಿಟ್ಟಿಲ್ಲ. ಈ ಬಾರಿ ಮಳೆ ಜಾಸ್ತಿಯಾಗಿದ್ದರಿಂದ ಭತ್ತವೂ ಕೈಗೆ ಸಿಗಲಿಲ್ಲ. ಮಾವಿನ ಬೆಳೆಯಲ್ಲಿ ಲಾಭ ತೆಗೆಯುವುದೂ ಕಷ್ಟವಾಗಿದೆ. | ರವಿ ರಾವಳ, ಮಾವು ಬೆಳೆದ ರೈತ

    ತಾಲೂಕಿನಲ್ಲಿ ಎಲ್ಲ ಕಡೆ ಮಾವಿನ ಗಿಡಗಳಲ್ಲಿ ಹೂ ಬಿಟ್ಟಿಲ್ಲ. ಮುಂದೆ ಹೂ ಬಿಡುವ ಸಾಧ್ಯತೆ ಇದೆ. ಕೆಲ ದಿನಗಳಿಂದ ಬೀಳುತ್ತಿರುವ ಇಬ್ಬನಿಗೆ ಹೂವು ಉದುರುತ್ತಿವೆ. ಬೂದು ರೋಗವೇನೂ ಇಲ್ಲ. ಶೇ. 50ಕ್ಕಿಂತ ಹೆಚ್ಚು ಇಳುವರಿ ಬರುವ ನಿರೀಕ್ಷೆ ಇದೆ. | ಬಿ.ನಾಗಾರ್ಜುನಗೌಡ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts