More

    ಮಾವಿನಕಟ್ಟೆ ಶಾಲೆ ವಿಭಾಗ ವಿಜ್ಞಾನ ನಾಟಕ ಸ್ಪರ್ಧೆಗೆ ಆಯ್ಕೆ 

    ದಾವಣಗೆರೆ: ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಚನ್ನಗಿರಿ ತಾಲೂಕು ಮಾವಿನಕಟ್ಟೆ ಸರ್ಕಾರಿ ಪ್ರೌಢಶಾಲೆ ಮಕ್ಕಳ ತಂಡ ಪ್ರಥಮ ಬಹುಮಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

    ವ್ಯಾಕ್ಸಿನ್ ಕಥೆಗಳು ಉಪವಿಷಯದಡಿ ಡಾ. ರಾಜಪ್ಪ ದಳವಾಯಿ ರಚಿಸಿದ ‘ವ್ಯಾಕ್ಸಿನ್ ಪೈಲ್ವಾನ್’ ನಾಟಕವನ್ನು ಈ ತಂಡ ಅಭಿನಯಿಸಿತ್ತು. ಶಾಲೆಯ ರಂಗಕಲಾ ಶಿಕ್ಷಕ ಕೆ. ವೆಂಕಟೇಶ್ವರ ನಿರ್ದೇಶನ ಮಾಡಿದ್ದರು.
    ಸತತ ಮೂರು ಬಾರಿ ದಕ್ಷಿಣ ಭಾರತ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಏಕೈಕ ಸರ್ಕಾರಿ ಶಾಲೆ ಇದಾಗಿದೆ. ಸತತ ಆರನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿನಿಯರಾದ ನಯನಾ, ಆರ್. ಲಕ್ಷ್ಮೀ, ಅಮೂಲ್ಯ, ಲಕ್ಷ್ಮೀ, ಮಮತಾ, ಸ್ವಾತಿ, ಭೂಮಿಕಾ ನಾಟಕ ಅಭಿನಯಿಸಿದ್ದರೆ, ವಿದ್ಯಾರ್ಥಿ ದರ್ಶನ್ ಬೆಳಕು ಹಾಗೂ ಸಂಗೀತ ನಿರ್ವಹಣೆ ಮಾಡಿದ್ದನು.
    ದಾವಣಗೆರೆ, ಚಿತ್ರದುರ್ಗ, ಹಾವೇರಿ, ಮಧುಗಿರಿ, ತುಮಕೂರು, ಬಳ್ಳಾರಿ, ಕೊಪ್ಳಳ ಜಿಲ್ಲೆ ಒಳಗೊಂಡ ಚಿತ್ರದುರ್ಗ ವಿಭಾಗಕ್ಕೆ ಈ ತಂಡ ಆಯ್ಕೆಯಾಗಿದೆ. ಕೆ. ವೆಂಕಟೇಶ್ವರ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಡಯಟ್ ಕಾಲೇಜಿನ ಪ್ರಾಚಾರ್ಯೆ ಗೀತಾ, ಕಂಪ್ಲಿ ರಾಮನಗೌಡ ಬಹುಮಾನ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts