More

    ಮಾವಳ್ಳಿಯ ಹೈದನೀಗ ಜರ್ಮನಿಯಲ್ಲಿ ವಿಜ್ಞಾನಿ

    ಕುಮಟಾ: ಕತಗಾಲ ಸನಿಹದ ಮಾವಳ್ಳಿ ಪುಟ್ಟ ಊರು. ಈ ಊರಿನ ಕೃಷಿಕ ಹಾಲಕ್ಕಿ ಕುಟುಂಬದ ಮಹೇಶ ಮಂಜುನಾಥ ಗೌಡ ಜರ್ಮನಿಯಲ್ಲಿ ಸಂಶೋಧನಾ ವಿಜ್ಞಾನಿಯಾಗಿ ದೇಶಕ್ಕೆ, ಊರಿಗೆ ಕೀರ್ತಿ ತಂದಿದ್ದಾರೆ.

    ಡಾ. ಮಹೇಶ ಗೌಡ ಅವರ ತಂದೆ ಮಂಜುನಾಥ ತಿಮ್ಮಣ್ಣ ಗೌಡ ಹಾಗೂ ತಾಯಿ ಪರಮೇಶ್ವರಿ ಗೌಡ ಕೃಷಿಕರಾಗಿದ್ದಾರೆ. ಮಹೇಶ ಗೌಡ ಮನೆಯಿಂದ 4 ಕಿ.ಮೀ. ದೂರದ ಕೊಡಂಬಳೆಯ ಸರ್ಕಾರಿ ಶಾಲೆಗೆ ಕಾಲ್ನಡಿಗೆಯಲ್ಲಿಯೇ ಹೋಗಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರು. ಬಳಿಕ ಕುಮಟಾದ ಗಿಬ್ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಕಲಿತು ಡಾ. ಬಾಳಿಗಾ ಕಾಲೇಜಿನಲ್ಲಿ ಬಿಎಸ್​ಸಿ ಪದವಿ ಪಡೆದಿದ್ದರು. ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಪಡೆದು ಅಲ್ಲಿಯೇ ಸಂಶೋಧನಾ ವಿದ್ಯಾರ್ಥಿಯಾಗಿ 2020ರ ಘಟಿಕೋತ್ಸದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಡಾಕ್ಟರೇಟ್ ಬಳಿಕ ಕೆಲ ಕಾಲ ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗ ಆರಂಭಿ ಸಿದ್ದರು. ಇವರ ಪ್ರತಿಭೆ ಗುರುತಿಸಿ ಜರ್ಮನಿಯ ಸಂಸ್ಥೆ ಯೊಂದಕ್ಕೆ ವಿಜ್ಞಾನಿ

    ಅವಕಾಶ ಅರಸಿ ಬಂದಿದೆ. ಡಾ. ಮಹೇಶ ಗೌಡ ಇತ್ತೀಚೆಗಷ್ಟೇ ಜರ್ಮ ನಿಗೆ ಪ್ರಯಾಣ ಬೆಳೆಸಿ ಕರ್ತವ್ಯ ಆರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts