More

    ಮಾರ್ಚ್​ಗೆ ಆಧಾರ್​ ಜೋಡಣೆ ಮುಗಿಸಿ

    ಬೆಳಗಾವಿ: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮುಂದಿನ 2023ರ ಮಾರ್ಚ್​ ಅಂತ್ಯಕ್ಕೆ ಮತದಾರರ ಪಟ್ಟಿಗೆ ಆಧಾರ್​ ಸಂಖ್ಯೆಯನ್ನು ಜೋಡಿಸುವ ಕಾರ್ಯವನ್ನು ಶೇ.100 ಪೂರ್ಣಗೊಳಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಡಳಿತ, ಭಾರತ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಹಯೋಗದಲ್ಲಿ ಜಿಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮತದಾರರ ಆಧಾರ ಸಂಖ್ಯೆಗಳನ್ನು ಮತದಾರರ ಪಟ್ಟಿಗೆ ಜೋಡಣೆ ಕಾರ್ಯದ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಬಿಎಲ್​ಒಗಳು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಫಾಮ್​ರ್ 6,7 ಹಾಗೂ 8 ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ನಂತರ ಆನ್​ಲೈನ್​ ಹಾಗೂ ಆಫ್​ಲೈನ್​ ಮೂಲಕ ಫಾಮ್​ರ್ 6(ಬಿ) ಯಲ್ಲಿ ಮತದಾರರ ಆಧಾರ್​ ಸಂಖ್ಯೆಯನ್ನು ಜೋಡಿಸುವ ಕಾರ್ಯಕ್ಕೆ ಅಣಿಯಾಗಬೇಕು ಎಂದು ತಿಳಿಸಿದರು.

    ಆಧಾರ್​ ಸಂಖ್ಯೆಯನ್ನು ಜೋಡಿಸುವ ಕಾರ್ಯದಲ್ಲಿ ಯಾವುದೇ ರೀತಿ ಮಾಹಿತಿ, ದಾಖಲಾತಿ ಬಹಿರಂಗವಾದರೆ ಅಧಿಕಾರಿ, ಸಿಬ್ಬಂದಿ ಕಾನೂನು ರೀತಿಯಲ್ಲಿ ಶಿೆಗೂ ಒಳಗಾಗಬೇಕಾಗುತ್ತದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಮುತುವರ್ಜಿಯಿಂದ ಆಧಾರ್​ ಸಂಖ್ಯೆ ಜೋಡಿಸುವ ಕಾರ್ಯ ಯಶಸ್ವಿಗೊಳಿಸಬೇಕಾಗಿದೆ ಎಂದರು.

    ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದ ಕಾನೂನು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ, ಪಾರದರ್ಶಕ ಚುನಾವಣಾ ಪ್ರಕ್ರಿಯೆ ನಡೆಸಲು ಮತದಾರರ ಪಟ್ಟಿಗೆ ಆಧಾರ್​ ಸಂಖ್ಯೆ ಜೋಡಿಸುವುದು ಉತ್ತಮ ಕಾರ್ಯವಾಗಿದೆ. ಚುನಾವಣೆ ಹೊತ್ತಿನಲ್ಲಿ ಮತದಾರರ ಗುರುತಿನ ಚೀಟಿ ರದ್ದಾಗಿದೆ ಎಂದು ದೂರುವುದಕ್ಕಿಂತ ಈ ಹೊತ್ತಿನಲ್ಲಿಯೇ ಚುನಾವಣಾ ಆಯೋಗದ ಸೂಚನೆಯಂತೆ ಸಾರ್ವಜನಿಕರು ನಿಯಮಾನುಸಾರ ಅಧಿಕೃತ ಮತ ಚೀಟಿ ಹೊಂದಬೇಕು ಎಂದು ತಿಳಿಸಿದರು.

    ಬೆಳಗಾವಿ ಜಿಲ್ಲಾ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಮಹಾನಂದ ನಂದಗಾವಿ ಮಾತನಾಡಿ, ಮತದಾರರ ಗುರುತಿನ ಚೀಟಿಗೆ ಆಧಾರ್​ ಸಂಖ್ಯೆ ಜೋಡಿಸುವ ಕಾರ್ಯ ಉತ್ತಮವಾಗಿದೆ. ಅಧಿಕೃತ ವೋಟರ್​ ಐಡಿಯೊಂದಿಗೆ ಮತದಾರರು ಮತ ಚಲಾಯಿಸಲು ಈ ಪ್ರಕ್ರಿಯೆ ಸಹಾಯಕವಾಗಲಿದೆ ಎಂದರು. ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಮತದಾರರ ಪಟ್ಟಿಗೆ ಆಧಾರ್​ ಸಂಖ್ಯೆಯನ್ನು ಸೇರಿಸುವ ಮೂಲಕ ನಕಲಿ ವೋಟರ್​ ಐಡಿಗಳನ್ನು ತಡೆಗಟ್ಟಬಹುದು ಎಂದರು.

    ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತ ಮಹಾವೀರ ಗಣಿ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಮಹಾನಗರ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ಸ್ವಾಗತಿಸಿದರು. ಸುನೀತಾ ದೇಸಾಯಿ ನಿರೂಪಿಸಿದರು. ಮಹಾನಗರ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಪ್ರಶಾಂತ ಹನಗಂಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts