More

    ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ



    ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ 13.96 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲು ಉದ್ದೇಶಿಸಿರುವ ಹೈಟೆಕ್ ಮಾರ್ಕೆಟ್ ಯೋಜನೆ ಅವೈಜ್ಞಾನಿಕವಾಗಿದ್ದು, ಈ ಕೂಡಲೆ ಅದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸ್ಥಳೀಯ ವ್ಯಾಪಾರಸ್ಥರು ಅಂಬೇಡ್ಕರ್ ಮೈದಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಮಾರುಕಟ್ಟೆ ಸ್ಥಳಾಂತರಿಸದಂತೆ ಆಗ್ರಹಿಸಿದರು.

    ಈ ಮಾರುಕಟ್ಟೆಯಲ್ಲಿ 60 ಮಳಿಗೆಗಳಿವೆ. ಇಲ್ಲಿಂದ ಹೆಗ್ಗೇರಿಯ ಅಂಬೇಡ್ಕರ್ ಮೈದಾನಕ್ಕೆ ಮಾರುಕಟ್ಟೆ ಸ್ಥಳಾಂತರಿಸಿ 5 ಅಂತಸ್ತಿನ ಹೈಟೆಕ್ ಮಾರ್ಕೆಟ್ ನಿರ್ವಿುಸಲು ಪಾಲಿಕೆ ತರಾತುರಿಯಲ್ಲಿದೆ. ಜಿ 1 ಮತ್ತು ಜಿ 2 ಮಹಡಿಗಳಲ್ಲಿ ವಾಹನ ರ್ಪಾಂಗ್​ಗೆ ಉಳಿದ ಮಹಡಿಗಳಲ್ಲಿ ಕೇವಲ 25 ಮಳಿಗೆ ನಿರ್ವಿುಸಲು ಪಾಲಿಕೆ ಸಿದ್ಧತೆ ನಡೆಸಿದೆ. 2, 3ನೇ ಮಹಡಿ ಮೇಲೆ ಕಿರಾಣಿ, ತರಕಾರಿ ಮಳಿಗೆ ನಿರ್ವಿುಸಲು ಉದ್ದೇಶಿಸಲಾಗಿದೆ.

    ಹಳೇ ಹುಬ್ಬಳ್ಳಿ ಮಾರುಕಟ್ಟೆಯನ್ನು ಹೆಗ್ಗೇರಿಯ ಡಾ. ಬಿ.ಆರ್. ಅಂಬೇಡ್ಕರ್ ಮೈದಾನಕ್ಕೆ ಸ್ಥಳಾಂತರಿಸುವಂತೆ ಜೂ. 12ರಂದೇ ಎಲ್ಲರಿಗೂ ನೋಟಿಸ್ ನೀಡಿರುವುದಾಗಿ ಅಧಿಕಾರಿಗಳು ಸುಳ್ಳು ಹೇಳಿ ನ್ಯಾಯಾಲಯಕ್ಕೆ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ. ಮೊದಲೇ ಲಾಕ್​ಡೌನ್​ನಿಂದ ಕಂಗೆಟ್ಟಿರುವ ತಮಗೆ ಮತ್ತಷ್ಟು ಸಮಸ್ಯೆ ಉಂಟಾಗಿದೆ. ಹಾಗಾಗಿ, ಈ ಯೋಜನೆ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಹಳೇಹುಬ್ಬಳ್ಳಿ ಕಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಮಹಮ್ಮದ ಯುನುಸ್ ಸವಣೂರ, ಉಪಾಧ್ಯಕ್ಷ ದಿಲಾವರಸಾಬ ಹೊಸೂರ, ರಂಗನಾಥ ಬದ್ದಿ, ಹಲಗುಂಜಿ ಕಲಾಲ, ಕಿರಣಕುಮಾರ ಭಂಡಾರಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts