More

    ಮಾರಿಕಾಂಬಾ ಜಾತ್ರೆಗೆ ತುರ್ತು ಅಗತ್ಯ ಕ್ರಮ

    ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆ ಫೆ.18ರಿಂದ ಆರಂಭವಾಗಲಿದ್ದು ಈ ಬಗ್ಗೆ ಕೆಲವು ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಮಾಹಿತಿ ನೀಡಿದರು.

    ಭಕ್ತರು ಮತ್ತು ಸಾರ್ವಜನಿಕರು ಶ್ರದ್ಧಾಭಕ್ತಿಯೊಂದಿಗೆ ಮನರಂಜನೆಯನ್ನು ಸಹ ಬಯಸಿ ಜಾತ್ರೆಗೆ ಬಂದಿರುತ್ತಾರೆ. ಆದರೆ ಅಮ್ಯೂಸ್​ವೆುಂಟ್ ಪಾರ್ಕ್ ಸೇರಿ ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ವಿಧಿಸುವ ದುಬಾರಿ ಶುಲ್ಕದಿಂದಾಗಿ ಅವರು ಶೋಷಣೆಗೆ ಒಳಗಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಜಾತ್ರೆ ಸಂದರ್ಭದಲ್ಲಿ ಬರುವ ಜಾಯಿಂಟ್ ವ್ಹೀಲ್, ಟೊರ್ರಾಟೊರ್ರಾ, ಕೋಲಂಬಸ್, ದೋಣಿ ಇನ್ನಿತರೆಗೆ 50ಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ. ಗುತ್ತಿಗೆ ಹಿಡಿದವರು ಹೆಚ್ಚು ಶುಲ್ಕ ವಿಧಿಸಿದರೆ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ಆಟಿಕೆಗಳನ್ನು ಹಾಕಿ ಕಡಿಮೆ ದರ ಪಡೆದು ಹೆಚ್ಚು ಜನ ಆಟವಾಡಲು ಅವಕಾಶ ಕಲ್ಪಿಸಬೇಕು ಎಂದರು.

    ಸಾಗರ ಮಾರಿಕಾಂಬಾ ಜಾತ್ರೆಗೆ ತನ್ನದೆ ಆದ ಇತಿಹಾಸವಿದೆ. ನಾನು ವಿದ್ಯಾರ್ಥಿ ದೆಸೆಯಿಂದಲೂ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು ಸಾರ್ವಜನಿಕ ವಲಯದಲ್ಲಿ ದರ ಹೆಚ್ಚು ವಿಧಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳಿರುವುದರಿಂದ ಈ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಮಾರಿಕಾಂಬಾ ಜಾತ್ರೆಯಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಆದರೆ ಜಾತ್ರೆ ಜನ ಸಾಮಾನ್ಯ ಜಾತ್ರೆ ಆಗಬೇಕು ಎಂದು ಹೇಳಿದರು.

    ಜಾತ್ರೆಗೆ ಬರುವ ಭಕ್ತರಿಗೆ ಮೊಬೈಲ್ ಟಾಯ್ಲೆಟ್, ರ್ಪಾಂಗ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಬಗ್ಗೆ ಶೀಘ್ರ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ಸಮಿತಿ ಜತೆ ರ್ಚಚಿಸುತ್ತೇನೆ. ವ್ಯವಸ್ಥಾಪಕ ಸಮಿತಿ ಸಹ ಪಾರದರ್ಶಕವಾಗಿ ಜಾತ್ರೆ ನಡೆಸುವತ್ತ ಗಮನ ಹರಿಸಬೇಕು ಎಂದರು.

    16,638 ಜನರಿಗೆ ಆಯುಷ್ಮಾನ್ ಕಾರ್ಡ್: ಡಿ.25ರಿಂದ ಜಿಲ್ಲಾದ್ಯಂತ ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನ ಅತ್ಯಂತ ವೇಗದಿಂದ ನಡೆಯುತ್ತಿದೆ ಎಂದು ಹಾಲಪ್ಪ ಹೇಳಿದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಯೋಜನೆಗೆ ಚಾಲನೆ ನೀಡಿದ ಮೇಲೆ ಹೆಚ್ಚೆಚ್ಚು ಜನರು ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್ ಪಡೆಯುತ್ತಿದ್ದಾರೆ. ಸಾಗರದ ನನ್ನ ಕಚೇರಿಯಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸುವ ಉಚಿತ ಸೇವಾ ಕೇಂದ್ರ ತೆರೆದಿದ್ದು ಈಗಾಗಲೆ ಸಾಗರ ತಾಲೂಕಿನಲ್ಲಿ 9,424 ಮತ್ತು ಹೊಸನಗರ ತಾಲೂಕಿನಲ್ಲಿ 7,214 ಕಾರ್ಡ್ ಸೇರಿ 16,638 ಜನರು ಕಾರ್ಡ್​ಗಳನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

    ಬಿಜೆಪಿ ನಗರಾಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ನಗರಸಭಾ ಸದಸ್ಯರಾದ ಟಿ.ಡಿ.ಮೇಘರಾಜ್, ಆರ್.ಶ್ರೀನಿವಾಸ್, ವೈತ್ರಿ ವಿ. ಪಾಟೀಲ್, ಪ್ರೇಮಾ ಕಿರಣ್​ಸಿಂಗ್, ಬಿಜೆಪಿ ಪ್ರಮುಖರಾದ ಪ್ರಸನ್ನ ಕೆರೆಕೈ, ಬಿ.ಟಿ.ರವೀಂದ್ರ, ಯಶೋದಮ್ಮ, ದೀಪಕ್ ಮರೂರು, ವಿನಾಯಕ ರಾವ್ ಮನೆಘಟ್ಟ ಇತರರಿದ್ದರು.</p>

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts