More

    ಮಾರಮ್ಮದೇವಿ ಶಿಲೆ ಮರು ಪ್ರತಿಷ್ಠಾಪನೆ

    ಶ್ರೀರಂಗಪಟ್ಟಣ: ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಮಾರಮ್ಮದೇವಿಯ ಶಿಲೆ ಮರು ಪ್ರತಿಷ್ಠಾಪನೆ ಹಾಗೂ ದೇಗುಲದ ಜೀರ್ಣೋದ್ಧಾರ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನಡೆಯಿತು.

    ಮುಂಜಾನೆ 5.30ಕ್ಕೆ ಅಮ್ಮನವರ ಪ್ರತಿಷ್ಠಾಪನೆ, ಪ್ರಧಾನ ಹೋಮ, ಬೆಳಗ್ಗೆ 10.30ಕ್ಕೆ ವಿಮಾನ ಕಲಶಕ್ಕೆ ಕುಂಭಾಭಿಷೇಕ, ಅಲಂಕಾರ, ನಿರೀಕ್ಷಣೆ, ಮಹಾನೈವೇದ್ಯ 12.15ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಪೀಠಾಧಿಪತಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾರಮ್ಮ ದೇವಿಗೆ ಪೂಜೆ ಕಾರ್ಯಗಳನ್ನು ನೆರವೇರಿಸುವ ಮೂಲಕ ದೇವಾಲಯವನ್ನು ಉದ್ಘಾಟಿಸಿದರು. ಇದರೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಪುತ್ಥಳಿಯನ್ನೂ ಉದ್ಘಾಟಿಸಲಾಯಿತು.

    ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದೆ ಸುಮಲತಾ ಅಂಬರೀಶ್, ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯ ಸಂದೇಶ್ ನಾಗರಾಜು, ದಿ.ಎನ್.ಶಂಕರೇಗೌಡ ಟ್ರಸ್ಟ್ ಸಂಸ್ಥಾಪಕ ಎಸ್.ಸಚ್ಚಿದಾನಂದ, ಪಾಂಡವಪುರ ತಹಸೀಲ್ದಾರ್ ನಯನಾ ಸಚ್ಚಿದಾನಂದ ಇತರರು ದೇವಾಲಯಕ್ಕೆ ಪೂಜೆ ಸಲ್ಲಿಸಿದರು.

    ಇದಕ್ಕೂ ಮುನ್ನ ಗ್ರಾಮ ಪ್ರದಕ್ಷಿಣೆ, ಯಾಗಶಾಲ ಪ್ರವೇಶ, ಪುಣ್ಯಾಃಹ, ಪಂಚಗವ್ಯ, ಪ್ರೋಕ್ಷಣೆ, ಪ್ರವೇಶ ಬಲಿ, ರಕ್ಷಾಪೂಜೆ, ಗಣಹೋಮ, ಜಲಾಧಿವಾಸ, ಸಂಜೆ ವಾಸ್ತುಹೋಮ, ಪರ‌್ಯಗ್ನೀಕರಣ, ಕಲಶಾಧಿವಾಸ ಪೂಜೆ ನೆರವೇರಿತು.

    ಕೆ.ಶೆಟ್ಟಹಳ್ಳಿ, ಗೌರಿಪುರ, ಗರುಡನ ಉಕ್ಕಡ, ಎಂ.ಶೆಟ್ಟಹಳ್ಳಿ, ಸಬ್ಬನಕುಪ್ಪೆ, ಬಾಬುರಾಯನಕೊಪ್ಪಲು, ಶ್ರೀನಿವಾಸ ಅಗ್ರಹಾರ, ಗೌಡಹಳ್ಳಿ, ಗಣಂಗೂರು, ಟಿ.ಎಂ.ಹೊಸೂರು ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳ ಭಕ್ತರು ದೇವಿಯ ದರ್ಶನ ಪಡೆದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts