More

    ಮಾನವ ಕುಲದ ಏಳಿಗೆಗೆ ಶ್ರಮಿಸಿದ ಗುರುಗಳು

    ರಿಪ್ಪನ್​ಪೇಟೆ: ಜನಾಂಗೀಯ ಸಂಘರ್ಷದ ಕಾಲಘಟ್ಟದಲ್ಲಿ ಶಿಕ್ಷಣದಿಂದಲೇ ಸ್ವಾತಂತ್ರ್ಯ ಸಂಘಟನೆಯಿಂದಲೇ ಶಕ್ತಿ ಎಂಬ ಧ್ಯೇಯೋದ್ದೇಶಗಳೊಂದಿಗೆ ಸಮಸ್ತ ಮಾನವ ಕುಲದ ಏಳಿಗೆಗೆ ಶ್ರಮಿಸಿದವರು ಮೌನಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರುಗಳು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಸಮೀಪದ ಗರ್ತಿಕೆರೆ-ನಿಟ್ಟೂರು ಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠದಲ್ಲಿ ಭಾನá-ವಾರ ಬ್ರಹ್ಮಶ್ರೀ ನಾರಾಯಣಗುರುಗಳ 166ನೇ ಜಯಂತ್ಯುತ್ಸವ ಹಾಗೂ ಎರಡು ಕೋಟಿ ರೂ. ಅನುದಾನದಲ್ಲಿ ನೂತನವಾಗಿ ನಿರ್ವಿುಸಲು ಉದ್ದೇಶಿಸಿರುವ ಸಭಾಭವನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ನಾರಾಯಣಗುರುಗಳು ಕೇರಳದಲ್ಲಿ ಒಂದು ಸೀಮಿತ ಜನಾಂಗದಲ್ಲಿ ಹುಟ್ಟಿದ್ದರೂ ಅವರ ವಿಚಾರಗಳು ಜಾತಿ ಮೀರಿದ ಸರ್ವರ್ಸ³ ಎನ್ನಿಸಿದ್ದವು. ವರ್ಗ ಸಂಘರ್ಷವನ್ನು ತೊಡೆದು ಹಾಕಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಅವರ ವಿಚಾರಗಳು ಎಂದಿನ ಕಾಲಕ್ಕೂ ಪ್ರಸ್ತುತವಾಗಿರುತ್ತದೆ ಎಂದರು.

    ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಿತ ಯಾವುದೇ ಒಂದು ಜಾತಿಗೆ ಸೀಮಿತರಾಗದೆ ಎಲ್ಲ ಜನಾಂಗದ ಅಭ್ಯುದಯವನ್ನು ಬಯಸುವವರಾಗಿದ್ದಾರೆ. ಈಡಿಗ ಸಮಾಜಕ್ಕೆ ಸಂಬಂಧಿಸಿ ಮಂಗಳೂರಿನಲ್ಲಿ ಕೋಟಿ ಚನ್ನಯ್ಯ ಥೀಮ್ ಪಾರ್ಕ್, ಸೋಲೂರು ಮಠದ ಅಭಿವೃದ್ಧಿ ಹಾಗೂ ಅನುದಾನ, ಶಿವಮೊಗ್ಗ ಹೃದಯ ಭಾಗದಲ್ಲಿ ಅತ್ಯಧಿಕ ಬೆಲೆಬಾಳುವ ಸ್ಥಳವನ್ನು ಮಂಜೂರು ಮಾಡುವುದರೊಂದಿಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬುವುದನ್ನು ಸಾಕಾರಗೊಳಿಸುತ್ತಿದ್ದಾರೆ. ಈಗ ಸದರಿ ಮಠಕ್ಕೆ ಎರಡು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು ಇದನ್ನು ಬಳಸಿಕೊಂಡು ಸಮಾಜದ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಿ ಎಂದರು.

    ಎಂಎಸ್​ಐಎಲ್ ಅಧ್ಯಕ್ಷ, ಶಾಸಕ ಹರತಾಳು ಹಾಲಪ್ಪ ಅವರು ನಾರಾಯಣಗುರು ಜೀವನಚರಿತ್ರೆ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ನಾರಾಯಣಗುರುಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ಮಹತ್ವ ಬರುತ್ತದೆ. ಸಮಾಜದ ಜನಾಂಗಗಳ ಸಂಘರ್ಷದಲ್ಲಿ ನನಗೆ ನಂಬಿಕೆಯಿಲ್ಲ. ಬದಲಾಗಿ ಉತ್ಕರ್ಷದಲ್ಲಿ ನಂಬಿಕೆಯಿದೆ. ಹಗೆತನವನ್ನು ತೊರೆದು ಲಭ್ಯವಿರುವ ಅವಕಾಶವ ಸದ್ಬಳಕೆ ಮಾಡಿಕೊಂಡು ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಜನರ ಪ್ರಯತ್ನಗಳಿದ್ದರೆ ಯಾರಿಗೂ ಕೆಡಕುಂಟಾಗುವುದಿಲ್ಲ ಎಂದರು.

    ಸಾನ್ನಿಧ್ಯ ವಹಿಸಿದ್ದ ಶ್ರೀ ರೇಣುಕಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಮಠಗಳು ಸರ್ಕಾರದ ಕೆಲಸವನ್ನು ಮಾಡುತ್ತವೆ ಎಂಬ ಉದ್ದೇಶದಿಂದ ಯಡಿಯೂರಪ್ಪನವರು ಮಠಗಳಿಗೆ ಅನುದಾನ ನೀಡುತ್ತಿದ್ದಾರೆ. ಆ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧಿಸಬಹುದು ಎಂದು ಹೇಳಿದರು.

    ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ನಾರಾಯಣಗುರುಗಳ ಭಾವಚಿತ್ರ ಬಿಡುಗಡೆ ಮಾಡಿದರು. ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ, ತಾಪಂ ಅಧ್ಯಕ್ಷ ವೀರೇಶ ಆಲುವಳ್ಳಿ, ಜಿಪಂ ಸದಸ್ಯರಾದ ಕಲಗೋಡು ರತ್ನಾಕರ್, ಸುರೇಶ್ ಸ್ವಾಮಿರಾವ್, ಅಪೂರ್ವಾ ಶರಧಿ ಪೂರ್ಣೆಶ್, ಶ್ವೇತಾಬಂಡಿ, ಉದ್ಯಮಿಗಳಾದ ಬೇಗುವಳ್ಳಿ ಸತೀಶ್, ಅಂಬರೀಷ್, ಬಿ.ಪಿ.ರಾಮಚಂದ್ರ, ಸತ್ಯನಾರಾಯಣ, ಪ್ರದೀಪ್, ಬಂಡಿ ದಿನೇಶ್, ಕೃಷ್ಣಪ್ಪ, ವೀರಭದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts