More

    ಮಾನವೀಯತೆಯಿಂದ ಕೆಲಸ ಮಾಡಿ

    ಮುಂಡಗೋಡ: ಅಧಿಕಾರಿಗಳು ಕಾನೂನಿನ ಜತೆ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ನಿಮಗೆ ಏನೇ ಸಮಸ್ಯೆ ಇದ್ದರೂ ನಮ್ಮ ಮುಂದೆ ಹೇಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಿಮ್ಮ ನಡವಳಿಕೆಯಿಂದ ನನ್ನ ಮೇಲೆ ಆರೋಪ ಬರುವುದನ್ನು ಸಹಿಸುವುದಿಲ್ಲ’ ಎಂದರು.

    ಚಿಕ್ಕ ನೀರಾವರಿ ಇಲಾಖೆ ಎಇಇ ಗಿರೀಶ ಜೋಶಿ ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ತಾಲೂಕಿನ ಅಧಿಕಾರಿಗಳಿಗೆ ಕೆಲಸ ಮಾಡುವ ಇಚ್ಛೆಯಿದ್ದರೆ ಉಳಿಯಿರಿ. ಇಲ್ಲವಾದರೆ ಬೇರೆ ಕಡೆ ವರ್ಗಾವಣೆ ಮಾಡಲು ನಾನು ಸಹಾಯ ಮಾಡುತ್ತೇನೆ ಎಂದರು. ಮೇ 31ರ ನಂತರ ಸಭೆ, ಸಮಾರಂಭ ಮತ್ತು ಶಾಲೆಗಳನ್ನು ಹೊರತುಪಡಿಸಿ ಲಾಕ್​ಡೌನ್ ಸಡಿಲಗೊಳಿಸುವ ಮಾಹಿತಿ ಇದೆ. ಅಧಿಕಾರಿಗಳು ಕೋವಿಡ್-19 ವಿಷಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕರ್ತವ್ಯವನ್ನು ಸರಿಯಾಗಿ ಮಾಡಬೇಕು ಎಂದರು.

    ಪಿಡಬ್ಲು್ಯಡಿ ಎಇಇ ದಯಾನಂದ ಬಿ.ಆರ್. ಅವರಿಂದ ಶಿಡ್ಲಗುಂಡಿ ಸೇತುವೆ ಕಾಮಗಾರಿಯ ಮಾಹಿತಿ ಪಡೆದು ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಲು ಸೂಚಿಸಿದರು.

    ಎರಡು ತಂಡಗಳನ್ನು ರಚಿಸಿ ಪಟ್ಟಣದ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಲು ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ ಅವರಿಗೆ ತಿಳಿಸಿದರು. ಇದೇ ವೇಳೆ ಡಿವೈಎಸ್​ಪಿಯಾಗಿ ಬಡ್ತಿಯಾದ ಸಿಪಿಐ ಶಿವಾನಂದ ಚಲವಾದಿ ಅವರನ್ನು ಅಭಿನಂದಿಸಿದರು.

    ಇದಕ್ಕೂ ಮುನ್ನ ಟಿಎಪಿಎಂಎಸ್​ನಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಅಧ್ಯಕ್ಷರ ಸಭೆಯಲ್ಲಿ ಸಚಿವರು ಪಾಲ್ಗೊಂಡು ಸಲಹೆ-ಸೂಚನೆಗಳನ್ನು ನೀಡಿದರು. ಜಿ.ಪಂ. ಸದಸ್ಯ ರವಿಗೌಡ ಪಾಟೀಲ, ಎಲ್.ಟಿ. ಪಾಟೀಲ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಬಾಬಣ್ಣ ಕೋಣನಕೇರಿ, ಗುಡ್ಡಪ್ಪ ಕಾತೂರ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಇಒ ಪ್ರವೀಣ ಕಟ್ಟಿ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಬೈಪಾಸ್ ರಸ್ತೆ, ಆಸ್ಪತ್ರೆ ನಿರ್ವಣಕ್ಕೆ ಮನವಿ

    ಯಲ್ಲಾಪುರ: ಯಲ್ಲಾಪುರಕ್ಕೆ ಬೈಪಾಸ್ ರಸ್ತೆ, ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಬೇಕು ಹಾಗೂ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಸಾರ್ವಜನಿಕರು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದರು.

    ಯಲ್ಲಾಪುರಕ್ಕೆ ಬೈಪಾಸ್ ರಸ್ತೆ ಬೇಕೆಂಬುದು ಬಹುವರ್ಷಗಳ ಬೇಡಿಕೆಯಾಗಿದ್ದು, ಅದನ್ನು ಮಂಜೂರು ಮಾಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಯಲ್ಲಾಪುರ ಭಾಗದ ಜನತೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಅಥವಾ ಶಿರಸಿ ಭಾಗಕ್ಕೆ ಹೋಗಬೇಕಾಗಿದ್ದು, ಅದನ್ನು ತಪ್ಪಿಸಲು ಸುಸಜ್ಜಿತ ಆಸ್ಪತ್ರೆಯೊಂದನ್ನು ಯಲ್ಲಾಪುರದಲ್ಲೇ ನಿರ್ವಿುಸಲು ಕ್ರಮ ಕೈಗೊಳ್ಳಬೇಕು. ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಉಂಟಾಗಿರುವ ತೊಡಕುಗಳನ್ನು ಪರಿಹರಿಸಿ, ಶೀಘ್ರ ಯೋಜನೆ ಆರಂಭಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

    ಮನವಿ ಸ್ವೀಕರಿಸಿದ ಸಚಿವರು, ಸಂಬಂಧಿಸಿದವರೊಂದಿಗೆ ರ್ಚಚಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಗಜಾನನ ನಾಯ್ಕ, ಸಿ. ಡಿ. ಭಟ್ಟ, ಗಿರೀಶ ಭಾಗ್ವತ, ಶ್ರೀಕೃಷ್ಣ ಪಟೇಲ, ವಿಶಾಲ ವಾಳಂಬಿ, ಲಕ್ಷ್ಮೀನಾರಾಯಣ ತೋಟ್ಮನೆ, ಕೇಬಲ್ ನಾಗೇಶ, ಆದರ್ಶ ಭಾಗ್ವತ, ಡಿಶ್ ಕೃಷ್ಣ, ಮಧುಕೇಶವ ಭಾಗ್ವತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts