More

    ಮಾದಕ ದ್ರವ್ಯ ಸೇವನೆ ಯಾರು ಮಾಡಿದರೂ ತಪ್ಪೇ

    ನರೇಗಲ್ಲ: ಸಮೀಪದ ಕೋಡಿಕೊಪ್ಪದ ಶ್ರೀ ಹಠಯೋಗಿ ಹುಚ್ಚಿರೇಶ್ವರ ಮಠಕ್ಕೆ ಚಲನಚಿತ್ರ ನಟ ಮಾಸ್ಟರ್ ಆನಂದ ಅವರು ಮಂಗಳವಾರ ಭೇಟಿ ನೀಡಿ ದರ್ಶನ ಪಡೆದರು.

    ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣಗಳಲ್ಲಿ ಸಾಕಷ್ಟು ಚಲನಚಿತ್ರ ನಟ, ನಟಿಯರ ಹೆಸರು ಕೇಳಿಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಾದಕ ದ್ರವ್ಯ ಸೇವನೆ ಯಾರು ಮಾಡಿದರೂ ಅದು ತಪ್ಪೇ. ಡಗ್ಸ್ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಚಿತ್ರರಂಗ ವರ್ಣರಂಜಿತವಾಗಿರುವುದರಿಂದ ಮಾದಕ ದ್ರವ್ಯ ಪ್ರಕರಣ ಹೆಚ್ಚು ಪ್ರಚಾರಗೊಳ್ಳುತ್ತಿದೆ. ನಟ, ನಟಿಯರು ಸಭೆ-ಸಮಾರಂಭಗಳಲ್ಲಿ ಭಾಗಿಯಾಗಿರುತ್ತೇವೆ. ಅಲ್ಲಿ ಸಾಕಷ್ಟು ಜನರು ಸೇರುತ್ತಾರೆ. ಅವರೆಲ್ಲರೂ ನಮಗೆ ಪರಿಚಯವಿರುವುದಿಲ್ಲ. ಅವರ ಹಿನ್ನೆಲೆಯೂ ತಿಳಿದಿರುವುದಿಲ್ಲ. ಆದರೂ ನಮ್ಮ ಎಚ್ಚರಿಕೆಯಲ್ಲಿರುವುದು ಅವಶ್ಯ. 8 ವರ್ಷಗಳ ಹಿಂದೆ ಗದಗದಲ್ಲಿ ‘ಬನ್ನಿ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಹಠಯೋಗಿ ಹುಚ್ಚಿರೇಶ್ವರ ಅಜ್ಜನವರ ಪವಾಡಗಳ ಬಗ್ಗೆ ಕೇಳಿದ್ದೆ. ಮಠಕ್ಕೆ ಭೇಟಿ ನೀಡಬೇಕೆಂದಿದ್ದೆ. ಆಗಿರಲಿಲ್ಲ. ಈಗ ‘ಭಾವೈಕ್ಯ ಬ್ರಹ್ಮ’ ಚಿತ್ರದ ಚಿತ್ರೀಕರಣಕ್ಕಾಗಿ ಬಂದಿದ್ದರಿಂದ ಶ್ರೀ ಹುಚ್ಚಿರೇಶ್ವರ ಮಠಕ್ಕೆ ಬರಲು ಸಾಧ್ಯವಾಯಿತು. ಅಜ್ಜನ ವಾಣಿಯಾದ ‘ಯಾವುದು ಹೌದು ಅದು ಅಲ್ಲ. ಯಾವುದು ಅಲ್ಲ ಅದು ಹೌದು’ ಅದರಿಂದ ಪ್ರಭಾವಿತನಾಗಿದ್ದೇನೆ ಎಂದರು. ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಅಂಕಲಿ ಮಠದ ಪೂಜ್ಯರ ಜೀವನ ಆಧಾರಿತ ‘ಭಾವೈಕ್ಯ ಬ್ರಹ್ಮ’ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದೆ. ಹಠಯೋಗಿ ವೀರಪ್ಪಜ್ಜನ ಜೀವನ ಆಧಾರಿತ ಚಲನಚಿತ್ರ ಮಾಡುವ ಯೋಜನೆ ಹೊಂದಿದ್ದೇವೆ. ನಿರ್ವಪಕರು ಆಸಕ್ತಿ ತೋರಿದ್ದಾರೆ ಎಂದರು. ಡಾ. ಸಂಜೀವ ರಡ್ಡೇರ, ಗೌಡಪ್ಪಗೌಡ ಗೌಡಪ್ಪಗೌಡ್ರ, ಬಿ.ಎಂ. ಪಾಟೀಲ, ಡಾ. ಕಿರಣ ಮುಂಡಗೋಡ, ಸಂತೋಷ ಕೆ, ಮಲ್ಲಯ್ಯ ಗುಂಡಗೋಪುರಮಠ, ಮರಿಯಪ್ಪ ಶಿರಗುಂಪಿ, ವಿನಾಯಕ ಜೋಶಿ, ಅಮರೇಶ ಬಡಿಗೇರ, ಹನುಮಂತಪ್ಪ ಬಂಡಿವಡ್ಡರ, ಮೋಹನ ಬಡಿಗೇರ, ಮುತ್ತಪ್ಪ ಜಂತ್ಲಿ, ಬಸವರಾಜ ಕಡೇತೋಟದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts