More

    ಮಾತ್ರೆಯಿಂದ ಹೋದ ಜೀವ ಬಂದಂತಾಯಿತು

    ಕರಜಗಿ: ಲಾಕ್ಡೌನ್ನಿಂದಾಗಿ ನಾಲ್ಕೈದು ದಿನಗಳಿಂದ ಮಾತ್ರೆ ಸಿಗದೆ ರಕ್ತ ಹೀನತೆಯಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರಿಗೆ ಅಜಲಪುರ ಶಾಸಕ ಎಂ.ವೈ. ಪಾಟೀಲ್, ಡಿಎಚ್ಒ ಜಬ್ಬಾರ ಹಾಗೂ ಕಾರ್ ಚಾಲಕ ಗುರುನಾಥ ಹ್ಯಾಳಕರ ಅವರ ಮಾನವಿಯ ಕಳಕಳಿಗೆ ಹೋದ ಜೀವ ಮರಳಿ ಬಂದಂತಾಗಿದೆ ಎಂದು ನಿವೃತ್ತ ಶಿಕ್ಷಕ ಅಶೋಕ ದೇಸಾಯಿ ತಿಳಿಸಿದ್ದಾರೆ.
    ಅಫಜಲಪುರ ತಾಲೂಕಿನ ಹಿರೆಜೇವರ್ಗಿ ಗ್ರಾಮದ ನಿವೃತ್ತ ಶಿಕ್ಷಕ ಅಶೋಕ ದೇಸಾಯಿ ಸಧ್ಯ ಅಪಜಲಪುರದ ಆದರ್ಶ ನಗರದಲ್ಲಿ ವಾಸಿಸುತ್ತಿದ್ದು ಇವರು ಹಲವು ವರ್ಷಗಳಿಂದ ರಕ್ತಹೀನತೆ(ನ್ಯೂಮೊನಿಯಾ)ಯಿಂದ ಬಳಲುತ್ತಿದ್ದಾರೆ. ಇವರಿಗೆ 2 ತಿಂಗಳಿಗೆ 26 ಸಾವಿರ ರೂಪಾಯಿಗಳ ರಕ್ತಹೀನತೆ ನಿವಾರಣೆ ಮಾತ್ರೆಗಳು ಬೇಕೇಬೇಕು. ತಪ್ಪಿದರೆ ಜೀವಕ್ಕೆ ಅಪಾಯ. ಕಳೆದ ನಾಲ್ಕೈದು ದಿನಗಳ ಹಿಂದೆ ಮಾತ್ರೆಗಳು ಖಾಲಿಯಾಗಿದ್ದವು.
    ಈ ಮಾತ್ರೆಗಳನ್ನು ತರಲು ಬೆಂಗಳೂರಿಗೆ ಹೋಗಲೇಬೇಕು. ಅಲ್ಲಿಗೆ ಹೋಗಲು ಎಷ್ಟೇ ಖರ್ಚಾದರೂ ಸರಿ ವಾಹನಗಳಿಗಾಗಿ ಅಲೆದಾಡಿದರು. 15-20 ಸಾವಿರ ಬಾಡಿಗೆ ಕೊಡುತ್ತೆವೆಂದರೂ ವಾಹನ ಸವಾರರು ಒಪ್ಪಲಿಲ್ಲ. ಆಗ ಅವರಿಗೆ ಹೊಳೆದದ್ದು ಕೊನೆಯ ಪ್ರಯತ್ನವೆಂಬಂತೆ ಸ್ಥಳೀಯ ಶಾಸಕ ಎಂ.ವೈ.ಪಾಟೀಲ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅವರು ತಕ್ಷಣ ಸ್ಪಂದಿಸಿ, ಡಿಎಚ್ಒ ಜಬ್ಬಾರ್ ಅವರಿಗೆ ಕರೆ ಮಾಡಿ ಸಹಾಯ ಮಾಡಲು ಸೂಚಿಸಿದರು. ಜಬ್ಬಾರ ಅವರು ತಮ್ಮ ವಾಹನವನ್ನು ಚಾಲಕ ಗುರುನಾಥ ಹ್ಯಾಳಕಾರ ಅವರಿಗೆ ನೀಡಿ ಬೆಂಗಳೂರಿಗೆ ಕಳುಹಿಸಿದರು. ದಿಗ್ಬಂಧನ ಇರುವುದರಿಂದ ಬೆಂಗಳೂರಿನಲ್ಲಿ ಗುರುನಾಥ ಹ್ಯಾಳಕರ ಅವರು 4 ಕಿ.ಮೀ ನಡೆದುಕೊಂಡು ಹೋಗಿ ಮಾತ್ರೆಗಳನ್ನು ತಂದಿದ್ದಾರೆ. ಈ ಮಾತ್ರೆಗಳಿಂದ ಹೋದ ಜೀವ ಮರಳಿ ಬಂದಂತಾಯಿತು ಎಂದು ಉಚಿತವಾಗಿ ಮಾತ್ರೆ ತರಲು ಸಹಾಯ ಮಾಡಿರುವ ಶಾಸಕರಿಗೂ, ಡಿಎಚ್ಒ ಹಾಗೂ ವಾಹನ ಚಾಲಕ ಹ್ಯಾಳಕಾರ ಅವರಿಗೆ ದೇಸಾಯಿ ಧನ್ಯವಾದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts