More

    ಮಹಿಳೆಯರು ಜೀವನ ರೂಪಿಸಲು ಆದ್ಯತೆ

    ನಿಪ್ಪಾಣಿ: ಮಹಿಳಾ ಉದ್ಯೋಗಿನಿ ಯೋಜನೆಯಿಂದ ಅನೇಕ ಮಹಿಳೆಯರು ಸ್ವಾವಲಂಬಿಯಾಗಿದ್ದು, ಅವರು ಬದುಕು ರೂಪಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ತಾಲೂಕಿನ ಜತ್ರಾಟ ಗ್ರಾಮದ ಹಜರತ್ ಜಂಗಲಿಪೀರ ದರ್ಗಾದ ಆವರಣದಲ್ಲಿ 46 ಲಕ್ಷ ರೂ. ವೆಚ್ಚದ ಶಾದಿಮಹಲ್, 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಿಠ್ಠಲ ಬಿರದೇವ ಕುರಿ ಮತ್ತು ಸಂಗೋಪನ ಕೇಂದ್ರದ ಭವನ ಲೋಕಾರ್ಪಣೆ ಹಾಗೂ ಮಹಿಳಾ ಉದ್ಯೋಗಿನಿಯಡಿ ರೂ.2.89 ಲಕ್ಷದಲ್ಲಿ ಗ್ರಾಮದ ದೀಪಾಲಿ ಪಾಟೀಲ ಆರಂಭಿಸಿರುವ ಬಿಸ್ಕಿಟ್ ಕಾರ್ಖಾನೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ಉದ್ಯೋಗಿನಿ ಯೋಜನೆಯಡಿ ಸುಮಾರು ಎರಡು ಸಾವಿರಕ್ಕೂ ಅಧಿಕ ಯೋಜನೆಗಳಿವೆ. ಆಸಕ್ತಿಯಿರುವ ಉದ್ಯೋಗ ಕೈಗೊಂಡು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸಹ ಕಲ್ಪಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಕ್ಷೇತ್ರದ ಮೂಲೆಮೂಲೆಗೂ ತಲುಪಿಸುತ್ತಿದ್ದೇವೆ ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಒಂದೇ ವೇದಿಕೆಯಡಿ ಬಂದು ಸಹಕರಿಸುತ್ತೇವೆ. ಇಂತಹ ವಿಷಯಗಳಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು.

    ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಲಗೊಂಡ ಪಾಟೀಲ ಮಾತನಾಡಿ, ಜತ್ರಾಟ ಗ್ರಾಮದ ಅಭಿವೃದ್ಧಿಯಲ್ಲಿ ಜೊಲ್ಲೆ ದಂಪತಿ ಕಾರ್ಯ ಹೆಚ್ಚಿದೆ. ಅವರ ನೇತೃತ್ವದಲ್ಲಿ ಕೆಲಸ ಮಾಡಲು ಎಲ್ಲರೂ ಉತ್ಸುಕರಾಗಿರುತ್ತಾರೆ ಎಂದರು.

    ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಭಿವಶೆ ಮಾತನಾಡಿದರು. ಹಾಲಶುಗರ್ಸ್ ಕಾರ್ಖಾನೆ ಸಂಚಾಲಕ ಆರ್.ವೈ. ಪಾಟೀಲ, ಸಾಗರ ಪಾಟೀಲ, ಗ್ರಾಪಂ ಅಧ್ಯಕ್ಷ ಶಿವಾಜಿ ರಾನಮಳೆ, ಪಿಎಲ್‌ಡಿ ಬ್ಯಾಂಕ್ ಚೇರ್ಮನ್ ಎಸ್.ಎಸ್. ಢವನೆ, ದಿಲೀಪ ಚವಾಣ, ದಸ್ತಗೀರ್ ಮುಜಾವರ, ಗಣಿ ಮುಜಾವರ, ಸವಿತಾ ಖೋಕಾಟೆ, ಬಿಸ್ಮಿಲ್ಲಾ ಮುಜಾವರ್, ಜಿಪಂ ಮಾಜಿ ಸದಸ್ಯ ಸಿದ್ದು ನರಾಟೆ, ರಾಜು ಕಲ್ಲೋಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts