More

    ಮಹಿಳಾ ಸಬಲೀಕರಣಕ್ಕೆ ನಾನಾ ಯೋಜನೆಗಳು ಜಾರಿ

    ಚಿತ್ರದುರ್ಗ: ದೇಶದಲ್ಲಿ ಅನಾದಿ ಕಾಲದಿಂದಲೂ ಮಹಿಳೆಯರನ್ನು ಗೌರವಿಸಿಕೊಂಡು ಬರಲಾಗುತ್ತಿದೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
    ಬಿಜೆಪಿಯಿಂದ ವಿಶ್ವ ಮಹಿಳಾ ದಿನಾಚರಣೆ ಪೂರ್ವಭಾವಿಯಾಗಿ ಸೋಮವಾರ ಆಯೋಜಿಸಿದ್ದ ‘ನಾರಿ ವಂದನಾ ಶಕ್ತಿ’ ಮಹಿಳಾ ಮ್ಯಾರಥಾನ್ ಸಮಾರೋಪದಲ್ಲಿ ಮಾತನಾಡಿದರು.
    ಮಹಿಳೆ ಸದೃಢವಾಗಿದ್ದರೆ ದೇಶ ಬಲಿಷ್ಠವಾಗುತ್ತದೆ. ಮಹಿಳಾ ಸಬಲೀಕರಣಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
    ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.33 ಮೀಸಲು ಕಲ್ಪಿಸುವ ಮಸೂದೆ ಅಂಗೀಕರಿಸಲಾಗಿದೆ. ಇದರಿಂದಾಗಿ ಮಹಿಳೆಯರಿಗೆ ರಾಜಕಾರಣದಲ್ಲಿ ಇನ್ನಷ್ಟು ಅವಕಾಶಗಳು ದೊರಲಿದೆ. ಇದಕ್ಕಾಗಿ ಪ್ರಧಾನಿ ಅವರಿಗೆ ಜಿಲ್ಲೆಯ ಮಹಿಳೆಯರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
    ದುರ್ಗದ ವೀರ ವನಿತೆ ಓನಕೆ ಒಬವ್ವ ಮಹಿಳಾ ಕುಲಕ್ಕೆ ಮಾದರಿಯಾಗಿದ್ದಾಳೆ. ಮಹಿಳಾ ಸುರಕ್ಷತೆ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಮ್ಯಾರಥಾನ್ ಜಿಲ್ಲಾ ಸಂಚಾಲಕಿ ರತ್ನಮ್ಮ, ಶಾಂತಮ್ಮ, ಶೀಲಾ, ಎನ್.ವೀಣಾ, ಕಾಂಚನಾ, ಬಸಮ್ಮ, ಸಿದ್ದವ್ವನಹಳ್ಳಿ ಕವಿತಾ, ಮಂಜುಳಮ್ಮ, ಸಂಪತ್‌ಕುಮಾರ್, ವೆಂಕಟೇಶ್ ಯಾದವ್, ಡಿ.ಕೆ.ಜಯಣ್ಣ, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ನಂದಿನಾಗರಾಜ್, ಕಿರಣ್‌ಕುಮಾರ್, ಶಂಭು, ನಾಗರಾಜ್, ಸಂತೋಷ್ ಹಾಗೂ ವಿದ್ಯಾಥಿನಿಯರು ಇದ್ದರು. ನಗರದ ನೀಲಕಂಠೇಶ್ವರ ದೇವಾಲಯದಿಂದ ಒನಕೆ ಓಬವ್ವ ವೃತ್ತದವರೆಗೆ ಮ್ಯಾರಥಾನ್ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts