More

    ಮಹಿಳಾ ಸಬಲೀಕರಣಕ್ಕೆ ಆದಾಯದ ಮೂಲ ಸೃಜಿಸಿ

    ಯಾದಗಿರಿ: ಗ್ರಾಮೀಣ ಪ್ರದೇಶದ ಅಕುಶಲ ಕೃಷಿ ಕೂಲಿ ಕಾಮರ್ಿಕ ಹಾಗೂ ರೈತ ಮಹಿಳೆಯರು ಆಥರ್ಿಕ ಸ್ವಾವಲಂಬಿಗಳಾಗಿ ಜೀವನ ನಿರ್ವಹಣೆಗೆ ಪೂರಕವಾಗುವಂತೆ ನರೇಗಾ ಯೋಜನೆಯಡಿ ಆದಾಯ ತರುವ ಮೂಲಗಳ ಸೃಜನೆಗೆ ಅಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಆಯುಕ್ತೆ ಶಿಲ್ಪಾನಾಗ್ ಸಲಹೆ ನೀಡಿದರು.

    ಸೋಮವಾರ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ನಿಮರ್ಿಸಿದ ಸಂಜೀವಿನಿ ಮಹಿಳಾ ಸ್ವ-ಸಹಾಯ ಸಂಘಗಳಿಂದ ನಿರ್ವಹಣೆ ಮಾಡುತ್ತಿರುವ ಸಸ್ಯಕ್ಷೇತ್ರಕ್ಕೆ (ನರ್ಸರಿ) ಭೇಟಿ ನೀಡಿ, ಗ್ರಾಮೀಣ ಭಾಗದಲ್ಲಿ ಕಂಡು ಬರುವ ಅಪ್ಟೌಕತೆ ನಿಮರ್ೂಲನೆ ಮಾಡುವ ಹಿನ್ನೆಯಲ್ಲಿ ಸರಕಾರ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿನ 101 ಫಲಾನುಭವಿಗಳಿಗೆ ಕೃಷಿ ಪೌಷ್ಠಿಕ ಕೈತೋಟ ನಿಮರ್ಿಸಲು ಸಹಾಧನ ನೀಡುತ್ತಿದೆ. ಕುರಿ, ಕೊಳಿ, ಹಂದಿ, ಹಸು ಹಾಗೂ ಮೀನು ಸಾಕಾಣಿಕೆ ಮಾಡಲು ಆಸಕ್ತಿ ಇರುವ ಗ್ರಾಮೀಣ ಮಹಿಳೆಯರು ಹಾಗೂ ನೋಂದಾಯಿತ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಈ ಯೋಜನೆಯ ವೈಯಕ್ತಿಕ ಕಾಮಗಾರಿಗಳಡಿ ಗ್ರಾಪಂಗಳಿಂದ ಕುರಿ, ದನ, ಕೋಳಿ ಶಡ್ಗಳನ್ನು ನಿಮರ್ಿಸಿಕೊಂಡು ಆಥರ್ಿಕವಾಗಿ ಸಬಲರಾಗುವಂತೆ ಕಿವಿಮಾತು ಹೇಳಿದರು.

    ಬಳಿಚಕ್ರದಲ್ಲಿ ಹೊಸದಾಗಿ ಆರಂಭಿಸಿದ ಶಿಶುಪಾಲನ ಕೇಂದ್ರವನ್ನು ಉದ್ಘಾಟಿಸಿದ ಅವರು, ಅಲ್ಲಿನ ಮಕ್ಕಳಿಗೆ ಸಿಹಿ ತಿನ್ನಿಸಿದರು. ಕಾಮಗಾರಿಯಲ್ಲಿ ಕೂಲಿ ಕೆಲಸಕ್ಕೆ ಹೊಗುವ ಪೋಷಕರು ತಮ್ಮ ಮಕ್ಕಳನ್ನು ಆರೈಕೆ ಮಾಡಲು ಈ ಕೇಂದ್ರದಲ್ಲಿ ಬಿಟ್ಟು ಹೊಗಬೇಕು. ಶಿಶುಪಾಲನ ಕೇಂದ್ರದಲ್ಲಿರುವ ಮಕ್ಕಳನ್ನು ಆರೈಕೆ ಮಾಡುವರಿಗೆ ಶಿಶು ಅಭಿವೃದ್ಧಿ ಇಲಾಖೆಯಿಂದ ತರಬೇತಿ ನೀಡಿ, ದಿನಕ್ಕೆ 309 ರೂ.ಗಳಂತೆ ಎನ್ಎಂಆರ್ ತೆಗೆದು ಕೂಲಿ ಹಣ ಪಾವತಿಸಬೇಕು ಎಂದು ಹೇಳಿದರು.

    ಇಲಾಖೆಯಶ್ರೀಶೈಲ್ ದಿಡ್ಡಿಮನಿ, ಜಿಪಂ ಸಿಇಒ ಅಮರೇಶ ನಾಯ್ಕ್, ಯೋಜನಾ ನಿದರ್ೇಶಕರಾದ ವೆಂಕಟೇಶ ಚಟ್ನಳ್ಳಿ, ತಾಪಂ ಇಒ ಬಸವರಾಜ ಶರಬೈ, ಸೋಮಶೇಖರ ಬಿರದಾರ, ಎಸ್.ಎಸ್.ಖಾದ್ರೋಳಿ, ಖಾಲಿದ್ ಅಹ್ಮದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts