More

    ಮಹಿಳಾ ಸತ್ಯಾಗ್ರಹ ಸ್ಮಾರಕ ಸಂರಕ್ಷಿಸಿ

    ಸಿದ್ದಾಪುರ: ತಾಲೂಕಿನ ವೀರ ಮಹಿಳೆಯರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಸ್ಮರಣಾರ್ಥ ಮಾವಿನಗುಂಡಿಯಲ್ಲಿ ನಿರ್ವಿುಸಿರುವ ಮಹಿಳಾ ಸತ್ಯಾಗ್ರಹ ಸ್ಮಾರಕವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

    ದೊಡ್ಮನೆ ಮಹಾದೇವಿ ಅಮ್ಮ, ಕೆಳಗಿನಮನೆಯ ಹಸಲರ ದೇವಿ, ಕುಳಿಬೀಡಿನ ಗಣಪಮ್ಮ, ಹೊಸಕೊಪ್ಪ ಸೀತಮ್ಮ, ಹೆಮಗಾರಿನ ದೇವಮ್ಮ, ಭುವನೇಶ್ವರಮ್ಮ, ಲಕ್ಷ್ಮಮ್ಮ, ಮಹದೇವಮ್ಮ ದೊಡ್ಮನೆ, ದುಗ್ಗಮ್ಮ ಹಣಜೀಬೈಲ್, ಕಾವೇರಮ್ಮ ಕಲ್ಲಾಳ ಮತ್ತಿತರ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಲ್ಲೂ ಮಾವಿನಗುಂಡಿಯಲ್ಲಿ ನಡೆಸಿದ ಸತ್ಯಾಗ್ರಹ ಎಲ್ಲರ ಗಮನ ಸೆಳೆದಿತ್ತು.

    ಸತ್ಯಾಗ್ರಹಿಗಳನ್ನು ಬಂಧಿಸಿಡುತ್ತಿದ್ದ ಸೆರೆಮನೆಯು ಮಾವಿನಗುಂಡಿಯ ಗುಡ್ಡದ ಮೇಲಿತ್ತು. ಮೂರ್ನಾಲ್ಕು ಪೊಲೀಸರಿರುತ್ತಿದ್ದ ಈ ಠಾಣೆಯಲ್ಲಿ ಮುಖ್ಯವಾಗಿ ಮಹಿಳಾ ಕೈದಿಗಳನ್ನು ಇಡಲಾಗುತ್ತಿತ್ತು.

    ಮಣ್ಣಿನಿಂದ ಮಾಡಿದ ಕಲಾಕೃತಿ: ಮಣ್ಣಿನಿಂದ ಮಾಡಿದ ಮಹಿಳಾ ಕೈದಿಗಳ ಪ್ರತಿಕೃತಿಯನ್ನು ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ ಒಳಗೊಂಡಿದೆ. ದೇಶಕ್ಕಾಗಿ ಬಲಿದಾನ ಮಾಡಿದ ಹಿರಿಯರಿಗೆ ನೀಡಿದ ಗೌರವ ಇದಾಗಿದೆ. ಆದರೆ, ಇಲ್ಲಿನ ಕಲಾಕೃತಿಯು ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದೆ. ಮುಂದೊಂದು ದಿನ ಈ ಸತ್ಯಾಗ್ರಹ ಸ್ಮಾರಕವು ಇತಿಹಾಸದ ಪುಟ ಸೇರುವ ಲಕ್ಷಣ ಕಾಣುತ್ತಿದೆ. ಹಾಗಾಗಿ, ತಾಲೂಕು ಆಡಳಿತ ಇತ್ತ ಗಮನಹರಿಸಿ ಸ್ಮಾರಕವನ್ನು ಜೀವಂತವಾಗಿಡುವುದಕ್ಕೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

    —-

    ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು ಯಾವತ್ತೂ ಸ್ಮರಣೀಯರು. ಅವರ ನೆನಪಿಗಾಗಿ ಮಾವಿನಗುಂಡಿಯಲ್ಲಿರುವ ಮಹಿಳಾ ಸತ್ಯಾಗ್ರಹವು ಸ್ಮಾರಕ ತಾಲೂಕಿನ ಘನತೆಯನ್ನು ಹೆಚ್ಚಿಸುವಂತಹುದಾಗಿದೆ. ಅದನ್ನು ಸುಸ್ಥಿತಿಯಲ್ಲಿಡುವುದು ಮುಖ್ಯ. ಈ ಕುರಿತು ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ಮಂಜುಳಾ ಎಸ್.ಭಜಂತ್ರಿ

    ತಹಸೀಲ್ದಾರ್ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts