More

    ಮಹಾ ನೆಲದಲ್ಲಿ ಕನ್ನಡತಿಯರಿಗೆ ಅಭಯ

    ಎ.ಪಿ.ಮಠಪತಿ ಕಮಲನಗರ
    ಕೆಲಸ ಅರಸಿಕೊಂಡು ಹೋಗಿ ಮಹಾರಾಷ್ಟ್ರದ ಲಾತೂರಿನಲ್ಲಿ ಲಾಕ್ಡೌನ್ನಿಂದ ಸಿಲುಕಿಕೊಂಡಿರುವ ರಾಜ್ಯದ ವಿವಿಧ ಜಿಲ್ಲೆಗಳ 15 ಯುವತಿಯರಿಗೆ ರಕ್ಷಿಸಿ, ಪೋಷಿಸುವ ಕೆಲಸವನ್ನು ಕಮಲನಗರ ಮೂಲದ ಉದ್ಯಮಿ ಸತೀಶ ಮಿರ್ಚೆ ಮಾಡುತ್ತಿದ್ದಾರೆ.
    ಗ್ಲೆಸ್ಟೀಯರಿಂಗ್ ಎಂಬ ನೆಟ್ವರ್ಕ್​ ಮಾರ್ಕೆಟಿಂಗ್​ ಕಂಪನಿಯಲ್ಲಿ ಕೆಲಸ ಮಾಡುವ ರಾಜ್ಯದ 15 ಯುವತಿಯರು ಲಾಕ್ಡೌನ್ ಹಿನ್ನೆಲೆಯಲ್ಲಿ ಲಾತೂರಿನಲ್ಲಿ ಸಿಲುಕಿಕೊಂಡಿದ್ದಾರೆ. ಇರುವ ಸ್ವಲ್ಪ ಹಣದಲ್ಲಿ ಕೆಲವು ದಿನ ದೂಡಿದ್ದಾರೆ. ಬಳಿಕ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿತ್ತು. ಈ ವಿಷಯ ತಿಳಿದ ಸತೀಶ ಮಿರ್ಚೆ ಅವರು ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿ ಪೂರೈಸಿದ್ದಾರೆ. ನಿತ್ಯ ಬೆಳಗ್ಗೆ ಹಾಲು, ಬಿಸ್ಕಿಟ್, ತರಕಾರಿಗಳನ್ನು ಸ್ವತಃ ಒಯ್ದು ಕೊಟ್ಟು ಎಲ್ಲರ ಆರೋಗ್ಯ ವಿಚಾರಿಸುತ್ತಿದ್ದಾರೆ.
    ಲಾಕ್ಡೌನ್ ಮುಗಿಯುವವರೆಗೂ ನೀವು ನಮ್ಮ ಅತಿಥಿಗಳು. ಇಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನಾನು ನಿಮ್ಮ ಕುಟುಂಬದ ಸದಸ್ಯನೆಂದೇ ತಿಳಿಯಿರಿ. ನಿಮಗೇನಾದರೂ ಬೇಕಿದ್ದಲ್ಲಿ ಸಂಕೋಚವಿಲ್ಲದೆ ಕೇಳಿ ಎಂದು ಯುವತಿಯರಲ್ಲಿ ಧೈರ್ಯ ತುಂಬುವ ಕೆಲಸ ಸತೀಶ ಮಾಡಿದ್ದಾರೆ. ಬಿಇ, ಬಿಕಾಂ, ಎಂಎಎಸ್​ಡಬ್ಲ್ಯೂ, ಎಂಎಸ್ಸಿ ಪದವೀಧರರಾದ ಯುವತಿಯರು ಶಿವಮೊಗ್ಗ, ತುಮಕೂರು, ಚಿಂತಾಮಣಿ, ಮಂಡ್ಯ, ಕೋಲಾರ, ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದಾರೆ.
    ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ ಎನ್ನುವ ಸ್ನೇಹ ಜೀವಿಯಾಗಿ ಬಡವರು, ಕಷ್ಟದಲ್ಲಿರುವವರು, ಅಸಹಾಯಕರಿಗೆ ಮಿಡಿಯುತ್ತಿರುವಂಥ ಸತೀಶ ಮಿರ್ಚೆ ಅವರು ಕನ್ನಡದ ಯುವತಿಯರಿಗೆ ಮಾಡುತ್ತಿರುವ ಸಹಾಯ ಇತರರಿಗೆ ಮಾದರಿಯಾಗಿದೆ. ಈ ಎಲ್ಲ ಯುವತಿಯರನ್ನು ಅವರವರ ಊರಿಗೆ ಕಳಿಸಲು ಪ್ರಯತ್ನಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts