More

    `ಮಹಾ’ ಕಾರ್ಮಿಕರಿಂದ ಆಪತ್ತಾಗದಿರಲಿ

    ವಿಜಯವಾಣಿ ವಿಶೇಷ ಕಲಬುರಗಿ
    ಅನ್ಯ ರಾಜ್ಯಗಳಲ್ಲಿರುವ ಕಾರ್ಮಿಕರನ್ನು ತವರಿಗೆ ಕರೆಸುವ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕರೊನಾ ಸೋಂಕಿನ ಮತ್ತಷ್ಟು ಸಂಕಷ್ಟ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆಯೇ? ಹೌದು, ಮಹಾರಾಷ್ಟ್ರದಿಂದ ಸಹಸ್ರಾರು ಕಾರ್ಮಿಕರು ನಗರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶ್ನೆ ಉದ್ಭವವಾಗಿದೆ.
    ದೇಶದಲ್ಲಿ ಕರೊನಾದಿಂದ ಮೊದಲ ಸಾವು ಕಂಡ ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ 72 ಜನರಿಗೆ ಕರೊನಾ ಸೋಂಕು ತಗುಲಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. 44 ಸೋಂಕಿತರು ರೋಗದಿಂದ ಗುಣಮುಖರಾಗಿದ್ದಾರೆ. ಇನ್ನೂ 22 ಜನ ಚಿಕಿತ್ಸೆಯಲ್ಲಿದ್ದಾರೆ. ಈ ಮಧ್ಯೆ ಹೊಸ ಪಾಸಿಟಿವ್ ಪ್ರಕರಣ ದಾಖಲಾಗುತ್ತಿವೆ. ಇಂಥದರಲ್ಲಿ ಕರೊನಾ ಹಾಟ್ಸ್ಪಾಟ್ ಎನಿಸಿದ ಮಹಾರಾಷ್ಟ್ರದಿಂದ ಕಾರ್ಮಿ ಕರನ್ನು ಕರೆಸಿಕೊಳ್ಳುವುದು ಆಪತ್ತು ಸೃಷ್ಟಿಸಬಹುದೆಂಬ ಆತಂಕಕ್ಕೆ ಕಾರಣವಾಗಿದೆ.
    ಲಾಕ್ಡೌನ್ನಿಂದ ಉದ್ಯೋಗವಿಲ್ಲದೆ ದಿಕ್ಕು ತೋಚದಂತಾಗಿರುವ ಕಾರ್ಮಿಕರನ್ನು ಜಿಲ್ಲೆಗೆ ಕರೆಸಿಕೊಳ್ಳುವುದು ಒಂದು ರೀತಿಯಿಂದ ಉತ್ತಮ. ಆದರೆ ಇಲ್ಲಿ ವ್ಯಾಪಕ ಮುಂಜಾಗ್ರತೆ ವಹಿಸುವ ದೊಡ್ಡ ಸವಾಲು ಇದೆ. ಸ್ವಲ್ಪ ಎಡವಿದರೆ ಕಲಬುರಗಿ ಕರೊನಾ ಹಾಟ್ಸ್ಪಾಟ್ ಆದರೂ ಅಚ್ಚರಿ ಪಡಬೇಕಾಗಿಲ್ಲ. ಈ ವಿಷಯವನ್ನು ಆಡಳಿತ ಮತ್ತು ಜನಪ್ರತಿನಿಧಿಗಳು ಅತೀ ಸೂಕ್ಷ್ಮವಾಗಿ ಪರಿಗಣಿಸಬೇಕು. ಮಹಾರಾಷ್ಟ್ರ ಕರೊನಾದಿಂದ ಅಕ್ಷರಶಃ ತತ್ತರಿಸಿದೆ. ಸೋಂಕಿತರ ಸಂಖ್ಯೆ 13 ಸಾವಿರ ಗಡಿ ದಾಟಿದ್ದು ಹಲವರು ಪ್ರಾಣ ಕಳೆದು ಕೊಂಡಿದ್ದರಿಂದ ಇವು ಡೇಂಜರ್ ವಲಯವಾಗಿವೆ. ಇಂಥದರಲ್ಲಿ ಕಳೆದ 50 ದಿನಗಳಿಂದ ಅಲ್ಲಿ ಸಿಕ್ಕಿಬಿದ್ದು ನರಳುತ್ತಿರುವ ಸುಮಾರು 1250 ಕಾರ್ಮಿಕರನ್ನು ಹೊತ್ತುಕೊಂಡು ವಿಶೇಷ ರೈಲು ಸೋಮವಾರ ತಡರಾತ್ರಿ ನಗರಕ್ಕೆ ಬಂದಿದೆ. ಬಂದವರಲ್ಲಿ ಸೋಂಕು ಪೀಡಿತರು ಇಲ್ಲ. ಹಾಗಂತ ನಿರ್ಲಕ್ಷೃ ಸಲ್ಲ.

    ಕ್ವಾರಂಟೈನ್ ಕೇಂದ್ರಗಳು ಸಿದ್ಧ

    ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಇರಿಸಲು ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಕ್ವಾರಂಟೈನ್ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ನಗರದ ಜತೆಗೆ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿಯೂ ಈ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಬಂದವರೆಲ್ಲರಿಗೂ ಇಲ್ಲಿ 14 ದಿನಗಳ ಕಾಲ ಊಟ-ಉಪಹಾರದ ವ್ಯವಸ್ಥೆಯನ್ನು ರಾಜ್ಯ ಸಕರ್ಾರದಿಂದ ಮಾಡಲಾಗಿದೆ. ಕ್ವಾರಂಟೈನ್ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಿ ನಿಗಾ ಇರಿಸಲು ಸೂಚಿಸಲಾಗಿದೆ. ತಬ್ಲಿಘಿಗಳ ಸಂಪರ್ಕದವರಿಂದ ಸೋಂಕು ವ್ಯಾಪಿಸಿ ಜಿಲ್ಲೆ ಒದ್ದಾಡುತ್ತಿದೆ. ಶನಿವಾರ ಮತ್ತು ಭಾನುವಾರವಷ್ಟೇ ಮುಂಬೈನಿಂದ ಬಂದಿದ್ದ ವ್ಯಕ್ತಿಗೂ ಕರೊನಾ ಸೋಂಕು ದೃಢಪಟ್ಟಿರುವುದು ಆತಂಕದ ಸಂಗತಿ. ಇನ್ನು ಚಿತ್ತಾಪುರಕ್ಕೆ ಅಮರಾವತಿಯಿಂದ 14 ಜನ ಬಂದಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಇಂಥದರಲ್ಲಿ ಈ ಕಾಮರ್ಿಕರು ಬರುತ್ತಿರುವುದರಿಂದ ಹೆಚ್ಚಿನ ಮುತುವಜರ್ಿ ವಹಿಸುವ ಅಗತ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts