More

    ಮಹಾವೀರ್ ಜೈನ್ ವಿವಿ ಮಾನ್ಯತೆ ರದ್ದುಗೊಳಿಸಿ

    ನಂಜನಗೂಡು: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮೀಸಲಾತಿಯಡಿ ಸವಲತ್ತು ಪಡೆದಿರುವ ತಳಸಮುದಾಯಗಳನ್ನು ಗುರಿಯಾಗಿಸಿಕೊಂಡು ಅವಮಾನಿಸಿರುವ ಬೆಂಗಳೂರಿನ ಮಹಾವೀರ್ ಜೈನ್ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಗೊಳಿಸುವಂತೆ ಒತ್ತಾಯಿಸಿ ಬಿ.ಹರ್ಷವರ್ಧನ್ ಯುವ ಬ್ರಿಗೇಡ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

    ನಗರದ ಮಿನಿ ವಿಧಾನಸೌಧದ ಮುಂದೆ ಸಮಾವೇಶಗೊಂಡ ಕಾರ್ಯಕರ್ತರು ಮಹಾವೀರ್ ಜೈನ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಅಲ್ಲಿನ ವಿದ್ಯಾರ್ಥಿಗಳ ವಿರುದ್ಧ ಘೋಷಣೆ ಕೂಗಿದರು.

    ಮಹಾವೀರ್ ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾಲೇಜು ಫೆಸ್ಟ್‌ನಲ್ಲಿ ಕಿರುನಾಟಕ ಪ್ರದರ್ಶನ ಮಾಡಿದ ಅಲ್ಲಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಬಗ್ಗೆ ಹಾಗೂ ಮೀಸಲಾತಿಯಡಿ ಸೌಲಭ್ಯ ಪಡೆಯುತ್ತಿರುವ ಸಮುದಾಯಗಳ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಅವಮಾನಿಸಿದ್ದಾರೆ. ಹಾಗಾಗಿ ವಿಶ್ವವಿದ್ಯಾಲಯದ ಮಾನ್ಯತೆ ರದ್ದುಗೊಳಿಸಬೇಕು. ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯಪಾಲರಿಗೆ ಬರೆದಿರುವ ಮನವಿ ಪತ್ರವನ್ನು ತಹಸೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಸಲ್ಲಿಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಿದರು.

    ಪ್ರತಿಭಟನೆಯಲ್ಲಿ ಬಿ.ಹರ್ಷವರ್ಧನ್ ಯುವ ಬ್ರಿಗೇಡ್‌ನ ದೇವಪ್ರಕಾಶ್, ಹುಲ್ಲಹಳ್ಳಿ ಸಣ್ಣಯ್ಯ, ರಂಗಸ್ವಾಮಿ, ಮಹದೇವಸ್ವಾಮಿ, ಧನರಾಜ್ ಬೂಲ, ವಿಷ್ಣುವರ್ಧನ್, ವಕೀಲ ಸುನಿಲ್, ನಟೇಶ್, ನವೀನ್, ಮಹದೇವಸ್ವಾಮಿ, ಪ್ರದೀಪ್, ಕುಮಾರ್, ಪ್ರಸನ್ನ, ಚಂದ್ರು, ಶಿವು, ಭರತ್, ಬಾಬು, ಜ್ಯೋತಿ, ರತ್ನಾಕರ, ಜಗ್ಗು, ಚರಣ್, ಮಹದೇವಸ್ವಾಮಿ, ರಾಜೇಶ್, ಕುಮಾರ್ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts