More

    ಮಹಾವೀರರ ತತ್ವಾದರ್ಶ ಇಂದಿಗೂ ದಾರಿದೀಪ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಜೈನ ಧರ್ಮದ ಕೊನೆಯ ತೀರ್ಥಂಕರರಾಗಿದ್ದ ಭಗವಾನ ಶ್ರೀ ಮಹಾವೀರರು ತಮ್ಮ ಜೀವನದಲ್ಲಿ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಮನುಷ್ಯ ಹುಟ್ಟಿನಿಂದ ಶೇಷ್ಠನಾಗುವುದಿಲ್ಲ, ಬದುಕಿನಲ್ಲಿ ಸತ್ಯದ ಹಾದಿಯಲ್ಲಿ ದಾರ್ಶನಿಕರ ತತ್ವ ಸಿದ್ದಾಂತಗಳನ್ನು ನಂಬಿ ನಡೆದಲ್ಲಿ ಮನುಷ್ಯನ ಜೀವನ ಶ್ರೇಷ್ಠವಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಎಸ್. ಕೌಜಲಗಿ ಅಭಿಪ್ರಾಯಪಟ್ಟರು.

    ಭಗವಾನ ಶ್ರೀ ಮಹಾವೀರರ 2621ನೇ ಜಯಂತಿ ನಿಮಿತ್ತ ಬೈಲಪ್ಪನವರನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಶನಿವಾರ ಶ್ರೀಮಹಾವೀರರ ಜೀವನ ಚರಿತ್ರೆ ಮತ್ತು ಅಹಿಂಸಾ ತತ್ವಗಳ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿದರು.

    ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಜಗತ್ತಿಗೆ ಶಾಂತಿ ಸಂದೇಶ ಸಾರಿದ ಭಗವಾನ ಶ್ರೀ ಮಹಾವೀರರ ತತ್ವ ಸಿದ್ಧಾಂತಗಳು ಪ್ರಸ್ತುತ ಕಾಲಘಟ್ಟಕ್ಕೆ ಬೇಕಾಗಿವೆ ಎಂದರು.

    ಕಸಾಪ ಧಾರವಾಡ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಲೋಕದ ಜನತೆಗೆ ಸದ್ವಿಚಾರ, ಸತ್ಯ ಭೋಧನೆ ಮಾಡಿದ ಮಹಾವೀರರ ತತ್ವಾದರ್ಶಗಳು ಇಂದಿನ ಬದುಕಿಗೆ ಅಗತ್ಯ ಎಂದರು.

    ಕರಾನಿನೌ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ವಿಮಲಕೀರ್ತಿ ತಾಳಿಕೋಟಿ, ಸಿಬಿಎಲ್ ಹೆಗಡೆ, ದೇವೇಂದ್ರಪ್ಪ ಕಾಗೆನವರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಎಸ್. ಧರಣೆಪ್ಪನವರ, ರಾಜೇಂದ್ರ ಬೀಳಗಿ, ವಿನಯ ಜವಳಿ, ಆರ್.ಟಿ. ಅಣ್ಣಿಗೇರಿ, ಆರ್.ಟಿ. ತವನಪ್ಪನವರ, ಧರಣೇಂದ್ರ ಜವಳಿ, ಅಶೋಜ ಕುರಕುರಿ, ಎಸ್.ಆರ್. ಮಲ್ಲಸಮುದ್ರ, ನಾಗರಾಜ ಪಾತ್ರೆಅಂಗಡಿ, ಬಿ.ಟಿ. ರಾಜಮಾನೆ, ಬಿ.ಎಸ್. ಬೀಳಗಿ, ಎ.ಸಿ. ನವಲೂರ, ಸುಹಾಸ ಜವಳಿ, ಸಂತೋಷ ಮುರಗಿಪಾಟೀಲ, ಎಸ್.ಆರ್. ಹಿರೇಗೌಡರ, ವಿಮಲ ಸಂಗಮಿ, ಪ್ರಶಾಂತ ಬಿಶೆಟ್ಟಿ, ರವಿ ಸಾಬಣ್ಣವರ, ಲೋಹಿತ ಸರ್ಜನ್, ಡಾ. ಸುಜಾತಾ ನಲವಡಿ, ಭಾಗ್ಯ ಬತ್ತುಲ್ಲಾ, ಶೋಭಾ ಯಾವಗಲ್, ಮಹಾವೀರ ಮಣಕಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts