More

    ಮಹಾತ್ಮರ ತತ್ವಾದರ್ಶಗಳ ಆಚರಣೆಯಿಂದ ವ್ಯಕ್ತಿತ್ವ ವಿಕಸನ

    ಚಿತ್ರದುರ್ಗ: ಮಹಾತ್ಮರ ತತ್ವಾದರ್ಶಗಳ ಅನುಸರಣೆಯಿಂದ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿ ದರು.
    ನಗರದ ಡಯಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮಗಾಂಧೀಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ದಾರ್ಶನಿಕರ ಚಿಂತನೆ,ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.
    ಶಾಲಾ ಹಂತದಲ್ಲಿ ಮಕ್ಕಳಿಗೆ ಮಹಾತ್ಮರ ಜೀವನ ಸಾಧನೆ ತಿಳಿಸುವುದರ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ನೆರವಾಗಬೇಕು.ಅಹಿಂಸಾ ಅಸ್ತ್ರದ ಮೂಲಕ ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿ ಮಾನವೀಯತೆ ಮತ್ತು ಅಹಿಂಸೆಯ ಪಾಠವನ್ನು ಗಾಂಧೀಜಿ ಜಗತ್ತಿಗೆ ಪರಿಚಯಿ ಸಿದರು. ಅವರಿಗೆ ಸತ್ಯ,ಪ್ರಾಮಾಣಿಕತೆ,ಬದ್ಧತೆ ಮತ್ತು ಸ್ವಾಭಿಮಾನವೇ ಉಸಿರಾಗಿತ್ತು.
    ನಡೆ-ನುಡಿ ಒಂದಾಗಿಸಿಕೊಂಡು ದೇಶ ಸೇವೆಯಲ್ಲಿ ತೊಡಗಿಸಿಕೊಂಡು ಮಾಜಿ ಪ್ರಧಾನಿಲಾಲ್‌ಬಹದ್ದೂರ್ ಶಾಸ್ತ್ರಿ ಅವರು ದೇಶದ ರೈತರಿಗೆ ಮತ್ತು ಯೋಧರಿಗೆ ಮೊದಲ ಆದ್ಯತೆ ನೀಡಿದ್ದರು. ಸತ್ಯ,ಸರಳತೆ,ಅಹಿಂಸೆ ಮತ್ತು ಪ್ರಾಮಾಣಿಕತೆ ಮತ್ತು ಉದಾತ್ತ ಚಿಂತನೆಗಳನ್ನೊಳಗೊಂಡ ಇವರಿಬ್ಬರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಕವಾಗಿವೆ ಎಂದರು.
    ಉಪಪ್ರಾಂಶುಪಾಲ ಸಿ.ಎಸ್.ವೆಂಕಟೇಶಪ್ಪ,ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್,ಎಸ್.ಜ್ಞಾನೇಶ್ವರ,ಎಚ್.ಗಿರಿಜಾ,ಉಪನ್ಯಾಸಕರಾದ ಆರ್.ನಾಗರಾಜು,ಎಸ್.ಬಸವರಾಜು,ಎನ್.ರಾಘವೇಂದ್ರ,ಕೆ.ಜಿ.ಪ್ರಶಾಂತ್,ಯು.ಸಿದ್ದೇಶಿ,ಬಿ.ಎಸ್.ನಿತ್ಯಾನಂದ,ಸಿ.ಎಸ್.ಲೀಲಾವತಿ, ವಿ. ಕನಕಮ್ಮ,ಎನ್.ಮಂಜುನಾಥ್,ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್,ಆರ್.ಲಿಂಗರಾಜು, ಕಚೇರಿ ಅಧೀಕ್ಷಕರಾದ ಗೀತಾ,ಕವಿತಾ, ಸಹಾಯಕ ಸಾಂಖಿಕ ಅಧಿಕಾರಿ ರೂಪಾ,ಪ್ರಥಮ ದರ್ಜೆ ಸಹಾಯಕರಾದ ಮಹೇಂದ್ರ,ಮಂಜುನಾಥ,ದ್ವಿತೀಯ ದರ್ಜೆ ಸಹಾಯಕರಾದ ಶ್ರೀ ನಿವಾಸ್,ಶಿವಕುಮಾರ್,ಸೌಭಾಗ್ಯ,ನಿರ್ಮಲಾ ಪುರುಷೋತ್ತಮ ಮತ್ತಿತರರು ಇದ್ದರು.
    (ಸಿಟಿಡಿ 2 ಡಯಟ್)
    ಚಿತ್ರದುರ್ಗದ ಡಯಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮಗಾಂಧೀಜಿ ಮತ್ತು ಲಾಲ್‌ಬಹದ್ದೂರ್‌ಶಾಸ್ತ್ರಿ ಅವರ ಜಯಂತಿ ಕಾರ‌್ಯಕ್ರಮ ದಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್,ಸಿ.ಎಸ್.ವೆಂಕಟೇಶಪ್ಪ,ಎಸ್.ಸಿ.ಪ್ರಸಾದ್,ಎಸ್.ಜ್ಞಾನೇಶ್ವರ,ಎಚ್.ಗಿರಿಜಾ,ಆರ್.ನಾಗರಾಜು, ಎಸ್. ಬಸವರಾಜು,ಎನ್.ರಾಘವೇಂದ್ರ,ಕೆ.ಜಿ.ಪ್ರಶಾಂತ್,ಯು.ಸಿದ್ದೇಶಿ,ಬಿ.ಎಸ್.ನಿತ್ಯಾನಂದ,ಸಿ.ಎಸ್.ಲೀಲಾವತಿ,ವಿ.ಕನಕಮ್ಮ,ಗೀತಾ, ಕವಿತಾ,ರೂಪಾ, ಸೌಭಾಗ್ಯ,ನಿರ್ಮಲಾ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts