More

    ಮಹನೀಯರ ಜಯಂತಿ ಎಲ್ಲರ ಆಚಣೆಯಾಗಲಿ

    ಶ್ರೀರಂಗಪಟ್ಟಣ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
    ಉಪ ತಹಸೀಲ್ದಾರ್ ರೇಖಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನ ಯಾವುದೇ ಮಹನೀಯರ ಜಯಂತಿಯನ್ನು ಆಯಾಯ ಸಮುದಾಯದ ಜನರೇ ಆಚರಿಸಿಕೊಂಡರೆ ಅದು ಆಚರಣೆಯಲ್ಲ. ಬದಲಾಗಿ ಎಲ್ಲ ಸಮುದಾಯಗಳ ಜನರು ಸಮಾನ ಮನಸ್ಸಿನಿಂದ ಆಚರಿಸಿದರೆ ಅದು ಸಮಾಜದ ಏಕತೆಯ ಸಂಭ್ರಮ ಎಂದರು.
    ಚಿಂತಕ ದೇವದತ್ತ ಅವರು ವಾಲ್ಮೀಕಿ ಮಹರ್ಷಿ ಹಾಗೂ ರಾಮಾಯಣ ಕುರಿತು ಪ್ರಧಾನ ಭಾಷಣ ಮಾಡಿದರು. ಸಮುದಾಯದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವನ್ನು ಸಾರೋಟಿನಲ್ಲಿ ಜಾನಪದ ಕಲಾ ತಂಡಗಳೊಂದಿಗೆ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
    ಪುರಸಭೆ ಉಪಾಧ್ಯಕ್ಷ ಗಂಜಾಂ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಎಂ.ಎಲ್.ದಿನೇಶ್, ಎಸ್.ಪ್ರಕಾಶ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts