More

    ಮಹರ್ಷಿ ಚಿಂತನೆಗಳು ಸಮಾಜಕ್ಕೆ ದಾರಿದೀಪ

    ಜೇವರ್ಗಿ: ಮಹರ್ಷಿ ವಾಲ್ಮೀಕಿ ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕ್ಷಕಿ ಭಾಗ್ಯ ದೊರೆ ಹೇಳಿದರು.

    ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಉಪನ್ಯಾಸ ನೀಡಿ, ಪ್ರತಿಯೊಬ್ಬರೂ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜೀವನ- ಸಾಧನೆಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡಬೇಕು. ಮಹರ್ಷಿ ಹಿಂದು ಧರ್ಮದ ಮಹಾನ್ ಗುರುವಾಗಿದ್ದು, ಜೀವನದುದ್ದಕ್ಕೂ ಉತ್ತಮ ಸಂದೇಶ ನೀಡಿದ್ದಾರೆ ಎಂದು ಬಣ್ಣಿಸಿದರು.

    ತಹಸೀಲ್ದಾರ್ ಗಜಾನನ ಬಾಲೆ ಕಾರ್ಯಕ್ರಮ ಉದ್ಘಾಟಿಸಿದರು. ಗ್ರೇಡ್-2 ತಹಸೀಲ್ದಾರ್ ಪ್ರಸನ್ನ ಮೋಘೇಕರ್, ಪ್ರಮುಖರಾದ ಮಹೇಶ ನಾಯಕ, ಸುರೇಶಕುಮಾರ ಚವ್ಹಾಣ್, ಅಂಬರೀಶ, ಸಾಹೇಬಗೌಡ ಮಾಲಿಪಾಟೀಲ್, ಸುರೇಶ ಬಿ.ಹವಾಲ್ದಾರ್, ಸಂಗಪ್ಪ ಸೇದಿಮನಿ, ಸೋಮಶೇಖರ, ಗೌಡಪ್ಪಗೌಡ, ಸಾಯಬಣ್ಣ ಕಲ್ಯಾಣಕರ್, ದೇವು ಚನ್ನೂರ, ಮರೆಪ್ಪ ನಾಯಕ, ಗುರುರಾಜ ಸೂಲಹಳ್ಳಿ ಇತರರಿದ್ದರು. ಹಳೇ ತಹಸಿಲ್ ಕಚೇರಿಯಿಂದ ಮಿನಿ ವಿಧಾನಸೌಧವರೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts