More

    ಮಸಾಲೆ ಬೆಳೆಯಿಂದ ಅಧಿಕ ಲಾಭ

    ಇಂಡಿ: ಮಸಾಲೆ ಬೆಳೆಗಳ ಬೇಸಾಯ ಕ್ರಮಗಳು, ಮಾರುಕಟ್ಟೆ ಮತ್ತು ರಫ್ತಿಗೆ ಇರುವ ಅವಕಾಶಗಳು ಈ ಭಾಗಕ್ಕೆ ಸೂಕ್ತವಾಗಿರುತ್ತವೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥ ಡಾ.ಶಿವಶಂಕರಮೂರ್ತಿ ಎಂ. ಹೇಳಿದರು.

    ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಐ.ಸಿ.ಎ.ಆರ್., ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ತೋಟಗಾರಿಕೆ ಸಮಗ್ರ ಅಭಿವೃದ್ಧಿ ಯೋಜನೆ, ಮಸಾಲೆ ಬೆಳೆಗಳ ಉತ್ಪಾದನೆ ತಾಂತ್ರಿಕತೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಸಾಲೆ ಬೆಳೆಗಳಾದ ಒಣ ಶುಂಠಿ, ಅರಿಷಿಣ, ದಾಲ್ಚಿನಿ, ಲವಂಗ, ಹುಣಸೆ ಮತ್ತು ಒಣ ಮೆಣಸಿನಕಾಯಿ ಬೆಳೆಗಳಿಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಮಸಾಲೆ ಬೆಳೆಗಳನ್ನು ಕಟಾವಿನ ನಂತರ ಬಹಳ ದಿನದವರೆಗೆ ಸಂಗ್ರಹಿಸಿಟ್ಟುಕೊಂಡು ಮಾರುಕಟ್ಟೆ ದರ ಇದ್ದಾಗ ಮಾರಾಟ ಮಾಡಬಹುದು. ಮಸಾಲೆ ಬೆಳೆಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದು ಅವುಗಳನ್ನು ಕಡಿಮೆ ಖರ್ಚಿನಲ್ಲಿ ಉತ್ಪಾದಿಸಿ ಅಧಿಕ ಲಾಭಗಳಿಸಬಹುದು ಎಂದರು.

    ರೈತರಿಗೆ ವಿವಿಧ ಕೃಷಿ ತಾಂತ್ರಿಕತೆಗಳ ಕುರಿತು ವಸ್ತು ಪ್ರದರ್ಶನವನ್ನು ತಾಂತ್ರಿಕ ಅಧಿಕಾರಿ ಮಜೀದ ಜಿ. ಹಾಗೂ ಪ್ರಯೋಗಶಾಲಾ ಸಹಾಯಕ ಚಂದ್ರಕಾಂತ.ಡಿ ಆಯೋಜಿಸಿದ್ದರು.

    ರೈತರಿಗೆ ಏರ್ಪಡಿಸಿದ್ದ ತಾಂತ್ರಿಕ ಗೋಷ್ಠಿಯಲ್ಲಿ ಮಸಾಲೆ ಬೆಳೆಗಳ ಬೇಸಾಯ ಕ್ರಮಗಳು, ಮಾರುಕಟ್ಟೆ ಬಗ್ಗೆ ರೈತರಿಗೆ ತಿಳಿಸಲಾಯಿತು.
    ವಿಜ್ಞಾನಿ ಡಾ.ಪ್ರಕಾಶ ಜಿ. ಅವರು- ಅಜೈವನ್ ಬೆಳೆಯ ಬೇಸಾಯ ಕ್ರಮಗಳು, ಡಾ.ಹೀನಾ ಎಂ.ಎಸ್ ಅವರು- ಒಣ ಮೆಣಸಿನಕಾಯಿ, ಜೀರಿಗೆ ಮತ್ತು ನಿಂಬೆ ಬೆಳೆಯ ಆಧುನಿಕ ಬೇಸಾಯ ಕ್ರಮಗಳ ಕುರಿತು ರೈತರ ಜತೆ ಸಂವಾದ ನಡೆಸಿದರು.

    ತಾಪಂ ಮಾಜಿ ಸದಸ್ಯ ಜಿತ್ತಪ್ಪ ಕಲ್ಯಾಣಿ, ಶಿವರಾಜ ಪರಗೊಂಡ, ಟೊಪಣ್ಣ ಈರಕಾರ, ಡಿ.ಜಿ. ಹ್ಯಾಲದ, ಶಿವಯೋಗಿಪ್ಪ ಅವಟಿ, ಸಿದ್ದಣ್ಣ ಗೊರನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts