More

    ಮಳೆ ಹಾನಿ ಸಮೀಕ್ಷೆ ನಡೆಸಿ

    ಔರಾದ್: ಅತಿವೃಷ್ಟಿಯಿಂದಾಗಿ ಔರಾದ್ ಮತ್ತು ಕಮಲನಗರ ತಾಲೂಕುಗಳಲ್ಲಿ ಉಂಟಾಗಿರುವ ರಸ್ತೆ, ಸೇತುವೆ, ಶಾಲಾ-ಕಾಲೇಜು, ಅಂಗನವಾಡಿ ಕಟ್ಟಡ ಇತರ ಆಸ್ತಿ-ಪಾಸ್ತಿ ಹಾನಿ ಬಗ್ಗೆ ಇಲಾಖಾವಾರು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ನಿದರ್ೇಶನ ನೀಡಿದ್ದಾರೆ.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಎರಡೂ ತಾಲೂಕಿನ ಹಲವೆಡೆ ಸಂಚರಿಸಿ ಹಾನಿಯ ಬಗ್ಗೆ ಕಣ್ಣಾರೆ ವೀಕ್ಷಿಸಿದ್ದೇನೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿಧಾನಸಭೆ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಹೀಗಾಗಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಅಚ್ಚುಕಟ್ಟಾಗಿ ಹಾನಿ ಸಮೀಕ್ಷೆ ನಡೆಸಬೇಕು ಎಂದರು.

    ಅನೇಕ ಕಡೆ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಬೆಳೆಗಳು ಹೆಚ್ಚು ಹಾನಿಯಾಗದಂತೆ ರೈತರಿಗೆ ಸೂಕ್ತ ತರಬೇತಿ ಜತೆಗೆ ಜಾಗೃತಿ ಮೂಡಿಸುವಂಥ ಕಾರ್ಯಕ್ರಮ ನಡೆಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ನಿದರ್ೇಶಿಸಿದರು.

    ಕ್ಷೇತ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ನದಿ ಮತ್ತು ಹಳ್ಳದ ಪ್ರದೇಶದಲ್ಲಿ ಹೆಚ್ಚಿನ ಬೆಳೆ ಹಾನಿಯಾಗಿದೆ. ಸೋಯಾಗಿಂತ ಹೆಸರು, ಉದ್ದು, ತೊಗರಿ ಹೆಚ್ಚು ನಷ್ಟಕ್ಕೀಡಾಗಿವೆ. ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದ್ದು, ವರುಣಾರ್ಭಟ ನಿಂತ ನಂತರ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಸಕರ್ಾರಕ್ಕೆ ವರದಿ ಸಲ್ಲಿಸುವುದಾಗಿ ಸಹಾಯಕ ಕೃಷಿ ನಿದರ್ೇಶಕ ಎಂ.ಎ.ಕೆ. ಅನ್ಸಾರಿ ಮಾಹಿತಿ ನೀಡಿದರು.

    ಬಸವನಹುಳು ಕಾಟದಿಂದ ಬೆಳೆ ಸಂರಕ್ಷಿಸುವ ನಿಟ್ಟಿನಲ್ಲಿ ಎರಡೂ ತಾಲೂಕಿನ 70 ಹಳ್ಳಿಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ. ಕಾಲಕಾಲಕ್ಕೆ ಬೆಳೆಗಳಿಗೆ ಅಗತ್ಯವಿರುವ ಔಷಧ ಸಿಗುವಂತೆ ನೋಡಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಬೆಳೆವಿಮೆ ಮಾಡಿಸಿದ ಎಲ್ಲರಿಗೂ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಮುತುವಜರ್ಿ ವಹಿಸಬೇಕು. ಯಾವೊಬ್ಬ ರೈತನಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಮಳೆಯಿಂದ ಹಾನಿ ಅನುಭವಿಸಿದ ಬಹುತೇಕ ಸಂತ್ರಸ್ತರಿಗೆ ಪರಿಹಾರಧನ ನೀಡಲಾಗಿದೆ. ಬಾಕಿ ಇರುವವರಿಗೂ ಮೊದಲ ಹಂತದ ಪರಿಹಾರ ತುತರ್ಾಗಿ ಕೊಡಬೇಕು. ಅತಿವೃಷ್ಟಿಯಿಂದ ಹಾನಿಗೀಡಾದ ಶಾಲೆಗಳಿಗೆ ಆಟದ ಮೈದಾನ ಮತ್ತು ಕಾಂಪೌಂಡ್ ನಿಮರ್ಿಸಿಕೊಡುವ ಉದ್ದೇಶವಿದ್ದು, ಅವಶ್ಯಕ ಪಟ್ಟಿ ನೀಡುವುದರ ಜತೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಟ್ಟಿಸಿಕೊಡಲು ಕ್ರಮ ವಹಿಸುವಂತೆ ತಾಪಂ ಅಧಿಕಾರಿಗಳಿಗೆ ಸೂಚಿಸಿದರು.

    ಮಳೆಗಾಲ ಅಂತ್ಯದವರೆಗೆ ಎರಡೂ ತಾಲೂಕಿನ ಎಲ್ಲ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಸಸಿಗಳನ್ನು ನೆಡಬೇಕು ಎಂದ ಸಚಿವ ಚವ್ಹಾಣ್, ಜೆಸ್ಕಾಂ, ತೋಟಗಾರಿಕೆ, ಸಣ್ಣ ನೀರಾವರಿ, ಲೋಕೋಪಯೋಗಿ, ಪಶು ಸಂಗೋಪನೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

    ಕಮಲನಗರ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒಗಳಾದ ಬಿರೇಂದ್ರಸಿಂಗ್ ಠಾಕೂರ್, ಸೈಯದ್ ಫಜಲ್ ಮಹ್ಮದ್, ಗ್ರೇಡ್-2 ತಹಸೀಲ್ದಾರ್ ಮಾಶೆಟ್ಟಿ ಚಿದ್ರಿ ಇತರರಿದ್ದರು.

    ಸ್ವಚ್ಛತೆ ಕಡೆ ಗಮನ ಕೊಡಿ: ಸಾಕಷ್ಟು ಮಳೆಯಾಗಿದ್ದರಿಂದ ಗ್ರಾಮಗಳಲ್ಲಿ ನೀರು ನಿಂತು ಮಲೇರಿಯಾ, ಡೆಂಘಿ ಸೇರಿ ನಾನಾ ರೀತಿಯ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲ ಊರುಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಚರಂಡಿಗಳನ್ನು ಶುಚಿಗೊಳಿಸಬೇಕು. ಫಾಗಿಂಗ್ ಮಾಡಿಸಬೇಕು. ಈ ದಿಶೆಯಲ್ಲಿ ಎಲ್ಲ ಪಿಡಿಒಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ತಾಪಂ ಇಒಗಳಿಗೆ ಸಚಿವ ಚವ್ಹಾಣ್ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts