More

    ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

    ನರಗುಂದ: ಪಟ್ಟಣ ಸೇರಿ ತಾಲೂಕಿನಾದ್ಯಂತ ಭಾನುವಾರ ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದ್ದು, ಕೆಲ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಎದುರಿಸುವಂತಾಯಿತು.

    ಸಂಜೆ 5 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆಗೆ ಪಟ್ಟಣದ ವಿದ್ಯಾಗಿರಿ ಕಾಲನಿಯ ಪ್ರಮುಖ ಚರಂಡಿಗಳು ತುಂಬಿ ಹರಿದವು. ಪಟ್ಟಣದ ಜನತಾ ಪ್ಲಾಟ್, ಆಶ್ರಯ ಕಾಲನಿ, ಗುಡ್ಡದ ಮೇಲ್ಮೈ ಪ್ರದೇಶದಿಂದ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ವಿದ್ಯಾಗಿರಿ ಕಾಲನಿಯ ಹಲವಾರು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಹೀಗಾಗಿ ಮನೆಯಲ್ಲಿಟ್ಟಿದ್ದ ವಸ್ತುಗಳಿಗೆ ಹಾನಿ ಉಂಟಾಗಿದೆ. ಮನೆಗೆ ನುಗ್ಗಿದ ಚರಂಡಿ ನೀರನ್ನು ಹೊರ ಹಾಕಲು ಕುಟುಂಬಸ್ಥರು ಹರಸಾಹಸ ಪಡಬೇಕಾಯಿತು. ಪಟ್ಟಣದ ಸಿದ್ದನಭಾವಿ ಬಡಾವಣೆಯ ಹಲವಾರು ಮನೆಗಳ ಮಣ್ಣಿನ ಗೋಡೆಗಳು ತೋಯ್ದಿದ್ದರಿಂದ ಕುಟುಂಬಸ್ಥರು ಆತಂಕಕ್ಕೀಡಾಗಿದ್ದರು. ಗೋಡೆ ಕುಸಿಯುವ ಆತಂಕ ಮನೆಮಾಡಿದೆ.

    ಸರಸ್ವತಿನಗರ, ವಿನಾಯಕನಗರ, ವಿವೇಕಾನಂದನಗರ ಸೇರಿ ಪಟ್ಟಣದ ವಿವಿಧ ಬಡಾವಣೆಗಳ ಕೆಲವು ಪ್ರಮುಖ ರಸ್ತೆಗಳು ಕೆಸರು ಗದ್ದೆಯಂತಾಗಿದ್ದವು.

    ಅಲ್ಲಲ್ಲಿ ಜಿಟಿಜಿಟಿ ಮಳೆ: ಮುಂಡರಗಿ, ನರೇಗಲ್ಲ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹಾಗೂ ಮುಳಗುಂದ ಪಟ್ಟಣದಲ್ಲೂ ಕೆಲಕಾಲ ಜಿಟಿಜಿಟಿ ಮಳೆಯಾಗಿದೆ. ಗಜೇಂದ್ರಗಡ, ಶಿರಹಟ್ಟಿ, ಇತರೆಡೆ ಮೋಡ ಕವಿದ ವಾತಾವರಣವಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts