More

    ಮಳವೂರು ಬಳಿಕ ಕೂಳೂರಲ್ಲೂ ಸುರಕ್ಷತೆ ಆತಂಕ

    ಲೋಕೇಶ್ ಸುರತ್ಕಲ್
    ಮಳವೂರು ಸೇತುವೆ ಕುಸಿದ ಘಟನೆ ಬಳಿಕ ಫಲ್ಗುಣಿ ನದಿಗೆ ಅಡ್ಡಲಾಗಿರುವ ಕೂಳೂರು ಸೇತುವೆ ಭವಿಷ್ಯದ ಬಗ್ಗೆಯೂ ಕಳವಳ ವ್ಯಕ್ತಗೊಂಡಿದೆ.
    ಮರವೂರಿನಂತೆ ಹಳೇ ಸೇತುವೆ ಬಳಿ ನಿರ್ಮಿಸಲಾಗುತ್ತಿರುವ ಹೊಸ ಸೇತುವೆಗಾಗಿ ಕೂಳೂರಿನಲ್ಲಿಯೂ ನದಿಗೆ ಮಣ್ಣು ತುಂಬಿಸಲಾಗುತ್ತಿದೆ. ಮರವೂರು ಬಳಿ ನಿರ್ಮಾಣವಾಗುತ್ತಿರುವ ಹೊಸಸೇತುವೆಗಾಗಿ ಮಣ್ಣು ತುಂಬಿಸಿದ ಪರಿಣಾಮ ನದಿಯಲ್ಲಿ ನೀರು ಹರಿವಿಗೆ ತಡೆಯಾಗಿದೆ. ಇದರಿಂದ ಕುಸಿತಕ್ಕೆ ಒಳಗಾಗಿರುವ ಪಿಲ್ಲರ್ ಕಂಬದ ಬಳಿಯೇ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದಿದ್ದು, ಇದಿಂದ ಒತ್ತಡ ಏರ್ಪಟ್ಟು ಸೇತುವೆ ಕುಸಿದಿದೆ ಎಂಬ ಮಾತುಗಳು ಕೇಳಿಬಂದಿದೆ.

    ಕರಾವಳಿಯ ಜೀವನಾಡಿ: ಕೂಳೂರಿನಲ್ಲಿ ಚತುಷ್ಪಥ ಹೆದ್ದಾರಿ ಅಂಗವಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಸಾಗಿದೆ. ಇದಕ್ಕಾಗಿ ಹಳೇ ಸೇತುವೆಯ 6 ಸ್ಪಾನ್‌ಗಳ ಪೈಕಿ ಎರಡಷ್ಟು ಭಾಗಕ್ಕೆ ಫಿಲ್ಲಿಂಗ್ ನಡೆಸಲಾಗಿದೆ. ಪೈಲ್ ಫೌಂಡೇಶನ್ ಮಾದರಿಯಲ್ಲಿ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದೆ. ಕೂಳೂರಿನ ಚತುಷ್ಪಥ ಹೆದ್ದಾರಿಯಲ್ಲಿರುವ ಹೊಸಸೇತುವೆ ಮತ್ತು ಹಳೇ ಕಮಾನು ಸೇತುವೆಗಳು ಕರಾವಳಿ ಸಂಚಾರ ವ್ಯವಸ್ಥೆಯ ಜೀವನಾಡಿಯಂತಿವೆ. ಹೊಸ ಸೇತುವೆ ನಿರ್ಮಾಣ ಸಂದರ್ಭ ಗರಿಷ್ಠ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು. ತಜ್ಞರ ಸಲಹೆ ಪಡೆದುಕೊಳ್ಳುವುದು ಅಗತ್ಯ ಎಂದು ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ವಿ.ಜಿ.ಗುರುಚಂದ್ರ ಹೆಗ್ಡೆ ಆಗ್ರಹಿಸಿದ್ದಾರೆ.

    ನಾವು ಸುರಕ್ಷಿತವಾಗಿ ಸುಸಜ್ಜಿತ ಸೇತುವೆ ನಿರ್ಮಿಸುತ್ತಿದ್ದೇವೆ. ಈಗಿರುವ ಎರಡೂ ಸೇತುವೆಗಳ ಸುರಕ್ಷೆ ಬಗ್ಗೆ ಯಾವುದೇ ಸಂದೇಹ ಬೇಡ.
    ಶಿಶು ಮೋಹನ್, ಎನ್‌ಎಚ್‌ಎಐ ಯೋಜನಾ ನಿರ್ದೇಶಕ

    ಹೊಸ ಸೇತುವೆ ಕಾಮಗಾರಿ ಮತ್ತು ಹಳೇ ಸೇತುವೆ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗುವುದು.
    ಡಾ.ವೈ.ಭರತ್ ಶೆಟ್ಟಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts