More

    ಮಲ್ಲಮ್ಮ ಉತ್ಸವ ಅದ್ದೂರಿ ಆಚರಣೆಗೆ ಒತ್ತಾಯ

    ಬೈಲಹೊಂಗಲ: ತಾಲೂಕಿನ ಬೆಳವಡಿ ಗ್ರಾಮದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಬಂದ್ ಆಚರಿಸುವ ಮೂಲಕ ಪ್ರತಿಭಟಿಸಿದರು.

    ಪ್ರತಿ ವರ್ಷ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೆ.28, ಮಾ.1 ರಂದು ಉತ್ಸವ ಆಚರಣೆ ಮಾಡಲಾಗುತ್ತಿದೆ. ಆದರೆ, ಪ್ರಸಕ್ತ ವರ್ಷದ ಉತ್ಸವವನ್ನು ಸಾಂಕೇತಿಕವಾಗಿ ಕೇವಲ ಒಂದು ದಿನಕ್ಕೆ ಸಿಮೀತಗೊಳಿಸಲಾಗಿದೆ. ಉತ್ಸವವನ್ನು ಎಂದಿನಂತೆ ಅದ್ದೂರಿಯಾಗಿ ಆಚರಿಸಬೇಕು ಎಂದು ಆಗ್ರಹಿಸಿದರು. ಮಲ್ಲಮ್ಮಳ ವೃತ್ತದಲ್ಲಿ ಧರಣಿ ಕುಳಿತು ಭಜನೆ ಮಾಡುತ್ತ ಅಲ್ಲೇ ಅಡುಗೆ ತಯಾರಿಸಿ, ಊಟ ಮಾಡಿ ಪ್ರತಿಭಟನೆ ಮುಂದುವರಿಸಿದರು. ಖುದ್ದು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು. ಅಲ್ಲಿವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಕರೊನಾ ಕುಂಟು ನೆಪ ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಧರಣಿಗೆ ಬೆಂಬಲ ನೀಡಿ, ಎರಡು ದಿನ ಉತ್ಸವ ಆಚರಣೆಗೆ ಸರ್ಕಾರದಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಒತ್ತಾಯಿಸಲಾಗುವುದು ಎಂದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರೈತ ಹೋರಾಟಗಾರ್ತಿ ಮಂಜುಳಾ ಪೂಜೇರ, ಪ್ರಕಾಶ ಹುಂಬಿ ಮಾತನಾಡಿದರು. ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಡಾ.ಶಶಿಧರ ಬಗಲಿ, ಜಿಲ್ಲಾಧಿಕಾರಿ ಜತೆ ಚರ್ಚಿಸಿ ನಿರ್ಧಾರ ಕೈಕೊಳ್ಳುವ ಭರವಸೆ ನೀಡಿದರು. ಉತ್ಸವ ಆಚರಣೆಗೆ ಹಿಂದೇಟು ಹಾಕಿದರೆ ತಾವೇ ಹಣ ಸಂಗ್ರಹಿಸಿ ಉತ್ಸವ ಆಚರಿಸುವುದಾಗಿ ಪ್ರತಿಭಟನಾಕಾರರು ಹೇಳಿದರು. ಉತ್ಸವದ ಆಚರಣೆಗೆ ಬಿಡುಗಡೆಯಾದ 20 ಲಕ್ಷ ರೂ. ಉತ್ಸವ ವೇದಿಕೆಗೆ ಜಾಗ ಖರೀದಿಸಲು ಉಪಯೋಗಿಸಬೇಕು. ಮಲ್ಲಮ್ಮಳ ಅಭಿವದ್ದಿ ಪ್ರಾಧಿಕಾರ ರಚಿಸಬೇಕು. ಬೆಳವಡಿ ಹೋಬಳಿಯಾಗಿ ಪರಿವರ್ತಿಸಬೇಕು. ಮಲ್ಲಮ್ಮಳ ಮೂರ್ತಿಯನ್ನು ಸುವರ್ಣಸೌಧದ ಎದುರು ಪ್ರತಿಷ್ಠಾಪಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಮಲ್ಲಮ್ಮಳ ಭಾವಚಿತ್ರ ಅಳವಡಿಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

    ಡಾ.ಆರ್.ಬಿ.ಪಾಟೀಲ, ಮಹಾರುದ್ರಪ್ಪ ನೆಲ್ಲಿಗಣಿ, ದಾನಪ್ಪಗೌಡ ಕುಸಲಾಪುರ, ನಿಂಗಪ್ಪ ಕರೀಕಟ್ಟಿ, ಕೀರಪ್ಪ ಕಡಕೋಳ, ಅಮೀರ್ ಹಾದಿಮನಿ, ವೀರೇಶ ಪಾಟೀಲ, ನಾಗರಾಜ ಕಿರಕಸಾಲಿ, ಸುನೀಲ ವರ್ಣೇಕರ, ಸಂತೋಷ ಕಾರಿಮನಿ, ಬಸವರಾಜ ಬಳಿಗಾರ, ಮಡ್ಡೆಪ್ಪ ಹುಂಬಿ, ಶಿವಾನಂದ ವಾಲಿ, ನಾಗರಾಜ ಬಳಿಗಾರ, ಈರಣ್ಣ ತುರಾಯಿ, ವಿಠ್ಠಲ ಪಿಶೆ, ಬಸವರಾಜ ನರೆಗಲ್ಲ, ಗಜಾನನ ರಾನೋಜಿ, ಸಚಿನ ಹುಂಬಿ ಇದ್ದರು.

    ಧರಣಿ ಹಿಂದಕ್ಕೆ: ಉತ್ಸವವನ್ನು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಎಸಿ ಡಾ.ಶಶಿಧರ ಬಗಲಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಸುನೀಲಕುಮಾರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಿದಾಗ ಅವರು ಅನುಮತಿ ನೀಡಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts