More

    ಮರಾಠ ಅಭಿವೃದ್ಧಿ ನಿಗಮ ಕಾರ್ಯಾರಂಭ

    ಬೀದರ್: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಬೆಂಗಳೂರಿನಲ್ಲಿ ಮಂಗಳವಾರ ಕಾರ್ಯಾರಂಭ ಮಾಡಿತು.

    ನಿಗಮದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಜಿಲ್ಲೆಯವರೇ ಆದ ನಿಗಮದ ಅಧ್ಯಕ್ಷ ಎಂ.ಜಿ. ಮುಳೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

    ರಾಜ್ಯ ಸರ್ಕಾರ ನಿಗಮ ರಚಿಸಿ ಮರಾಠ ಸಮಾಜದವರ ಬಹು ದಿನಗಳ ಬೇಡಿಕೆ ಈಡೇರಿಸಿದೆ. ನಿಗಮದ ಅಧ್ಯಕ್ಷ ಎಂ.ಜಿ. ಮುಳೆ ಅವರು ವಿವಿಧ ಯೋಜನೆಗಳ ಮೂಲಕ ಮರಾಠರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಮರಾಠ ಸಮಾಜದ ಮುಖಂಡರಾದ ಬಾಲಾಜಿ ಚವ್ಹಾಣ್, ವೆಂಕಟೇಶರಾವ ಮಾಯಿಂದೆ, ಗೋವೀಂದರಾವ ಪಾಟೀಲ್, ಸುರೇಶ ಟಿ, ವಿದ್ಯಾವಾನ್ ಪಾಟೀಲ್, ಬಾಲಾಜಿ ವಾಡೇಕರ್, ಆಕಾಶ ಬಿರಾದಾರ್, ಚಂದ್ರಕಾಂತ ಹಾಲಹಳ್ಳೆ, ಪರಮೇಶ್ವರ ಬಿರಾದಾರ್, ಮಲ್ಲಿಕಾರ್ಜುನ ಬಂಬಳಗೆ, ರಾಜಕುಮಾರ ಗಾದಗೆ, ಆನಂದ ಜಾಧವ್, ಸಂಜಯ್ ಪಾಟೀಲ್ ಇದ್ದರು.

    ಮರಾಠರಿಗೆ ಸ್ವಾಗತ: ಮರಾಠ ನಿಗಮದ ಉದ್ಘಾಟನೆಗಾಗಿ ಬೀದರ್ ಜಿಲ್ಲೆಯ ಮರಾಠರಿಗೆ ಬೆಂಗಳೂರಿಗೆ ತೆರಳಲು ಸೂರ್ಯಕಾಂತ ನಾಗಮಾರಪಳ್ಳಿ ಅವರು ಎರಡು ಬಸ್ಗಳ ವ್ಯವಸ್ಥೆ ಮಾಡಿದ್ದರು. ಬೆಂಗಳೂರಿನಲ್ಲಿ ಬಸ್ ಗಳಲ್ಲಿ ಬಂದ ಮರಾಠ ಸಮಾಜದವರನ್ನು ಅವರು ಸ್ವಾಗತಿಸಿ ಬರಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts