More

    ಕ್ಷತ್ರಿಯ ಮರಾಠ ಸಮಾಜವನ್ನು 2ಎಗೆ ಸೇರಿಸಿ

    ಚಿಕ್ಕಮಗಳೂರು: ಕ್ಷತ್ರಿಯ ಮರಾಠ ಸಮುದಾಯವನ್ನು ಪ್ರವರ್ಗ 3ಬಿಯಿಂದ ಪ್ರವರ್ಗ 2ಎಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

    ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮರಾಠ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಸಮುದಾಯದಲ್ಲಿ 33 ಪಂಗಡಗಳಿದ್ದು, ಈ ಪೈಕಿ 27 ಪಂಗಡಗಳನ್ನು ಈಗಾಗಲೇ 2ಎಗೆ ಸೇರಿಸಲಾಗಿದೆ. ಇದರಲ್ಲಿ ಕ್ಷತ್ರಿ ಮರಾಠ ಸಮಾಜವನ್ನು ಸೇರಿಸಿಲ್ಲ ಎಂದು ದೂರಿದರು.

    ಕ್ಷತ್ರಿಯ ಮರಾಠ ಸಮಾಜದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಮೀಸಲಾತಿ ಇಲ್ಲದಿರುವುದರಿಂದ ಆರ್ಥಿಕ, ಶೈಕ್ಷಣಿಕ ರಾಜಕೀಯವಾಗಿ ಸಮಾಜ ಬಹಳ ಹಿಂದುಳಿದಿದೆ. 40 ಲಕ್ಷ ಜನಸಂಖ್ಯೆ ಹೊಂದಿದ್ದರೂ ವೈದ್ಯಕೀಯ, ಇಂಜಿನಿಯರಿಂಗ್, ಇತರ ಕೆಲಸಗಳಲ್ಲಿ ಮೀಸಲಾತಿ ಇಲ್ಲದಿರುವುದು ಸಮಾಜದ ಅಭಿವೃದ್ಧಿಗೆ ತೊಡಕಾಗಿದೆ. ರಾಜ್ಯ ಸರ್ಕಾರ ಮಹಾಜನ್ ವರದಿ ಪ್ರಕಾರ ಎಲ್ಲೆಡೆ ಮೀಸಲಾತಿ ನೀಡಿದ್ದು ಅದರಂತೆ ಕ್ಷತ್ರಿಯ ಮರಾಠ ಸಮುದಾಯಕ್ಕೂ ನೀಡಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಗಿರೀಶ್ ಚವ್ಹಾಣ್, ರಾಮಚಂದ್ರ ರಾವ್, ಲೋಕೇಶ್ ರಾವ್, ತಾನೋಜಿ ರಾವ್, ಲೋಹಿತ್​ರಾವ್ ಪವಾರ್, ವೀಣಾ ಜಾಧವ್, ಪಾರ್ವತಿಬಾಯಿ, ಸಿದ್ದೋಜಿ ರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts