More

    ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ನೀಡಿ

    ಗಜೇಂದ್ರಗಡ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ಕ್ಷತ್ರಿಯ ಮರಾಠಾ ಸಮಾಜವನ್ನು 3ಬಿಯಿಂದ 2ಎಗೆ ಸೇರ್ಪಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ ಅವರು ಆಧಿಕಾರ ಸ್ವೀಕರಿಸಿ 9 ತಿಂಗಳಾಗುತ್ತ ಬಂದರೂ ಭರವಸೆ ಈಡೇರಿಸದೆ ವಚನ ಭ್ರಷ್ಟರಾಗಿದ್ದಾರೆ ಎಂದು ಮರಾಠಾ ಸಮಾಜದ ಅಧ್ಯಕ್ಷ ರೇಣಪ್ಪ ಇಂಗಳೆ ಆರೋಪಿಸಿದರು.

    ಬುಧವಾರ ಪಟ್ಟಣದ ಶಿವಾಜಿಪೇಟೆಯಿಂದ ಕಾಲಕಾಲೇಶ್ವರ ವೃತ್ತದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

    ಗೋಗೇರಿಯ ಮರಾಠಾ ಸಮಾಜದ ಕಾರ್ಯದರ್ಶಿ ಶಿವಾಜಿ ಹೊರಪೇಟೆ ಮಾತನಾಡಿ, ಕ್ಷತ್ರಿಯ ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪಬಾರದು. ನಮ್ಮ ಸಮಾಜ ರಾಜಕೀಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದರೂ ಸಮಾಜಕ್ಕೆ ಮೀಸಲಾತಿ ನೀಡದಿರುವುದು ನಮ್ಮ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

    ಭೀಮಣ್ಣ, ಇಂಗಳೆ, ಲಕ್ಷ್ಮಣ ರಾಮಜಿ ಮಾತನಾಡಿದರು. ತಹಸೀಲ್ದಾರ್ ಜಿ.ಬಿ. ಜಕ್ಕನಗೌಡ್ರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

    ಪ್ರತಿಭಟನಾ ರ್ಯಾಲಿಯು ಶಿವಾಜಿಪೇಟೆಯಿಂದ ಆರಂಭವಾಗಿ ಕೊಳ್ಳಿಯವರ ಕತ್ರಿ, ಬಜರಂಗದಳ ಸರ್ಕಲ್, ದುರ್ಗಾ ಸರ್ಕಲ್, ಶಿವಾಜಿ ಸರ್ಕಲ್ ಮೂಲಕ ಸಾಗಿ ಕೆಕೆ ವೃತ್ತದಲ್ಲಿ ಸಮಾವೇಶಗೊಂಡಿತು.

    ಗೋಗೇರಿ, ಪುರ್ತಗೇರಿ, ಕೊಡಗಾನೂರು ಹಾಗೂ ಸುತ್ತಲಿನ ಗ್ರಾಮಗಳ ಮರಾಠಾ ಸಮಾಜದವರು ಪಾಲ್ಗೊಂಡಿದ್ದರು.

    ಪುರಸಭೆ ಸದಸ್ಯ ಯಮನೂರ ತಿರಕೋಜಿ, ಜಗದೀಶ ಕಲ್ಗುಡಿ, ಕಲ್ಲಪ್ಪ ರಾಮಜಿ, ಚಂದ್ರು ಜಾನಾಯಿ, ಬಾಳು ಪಿ. ಪವಾರ, ಬಾಳಪ್ಪ ಬಿ. ಪವಾರ, ಕೃಷ್ಣಾಜಿ ಸೂರ್ಯವಂಶಿ, ಮಲ್ಲಿಕಾರ್ಜುನ ಗಾರಗಿ, ಮುತ್ತು ಸ್ವಾಮಿ, ಕಳಕೇಶ ಕಾಸಾಯಿ, ದುರಗಪ್ಪ ತಿರಕೋಜಿ, ಸಂತೋಷ ಸ್ವಾಮಿ, ಬಾಳು ಭೋಸಲೆ, ಪ್ರವೀಣ ಕಿಲ್ಲೇದಾರ, ಸುರೇಶ ಘೊರ್ಪಡೆ, ಇತರರು ಇದ್ದರು.

    ಪಲ್ಲಕ್ಕಿಯಲ್ಲಿ ಕೂರುವವರಾಗಿ: ಚುನಾವಣೆ ಬಂದಾಗ ನಮ್ಮನ್ನು ಬಳಸಿಕೊಳ್ಳುವ ಪಕ್ಷಗಳು. ನಂತರದಲ್ಲಿ ನಮ್ಮನ್ನು ಬೀಸಾಡುತ್ತಿದ್ದಾರೆ. ನಾವು ಪಲ್ಲಕ್ಕಿಯನ್ನು ಹೊರುವವರಾಗಿದ್ದೇವೆ. ಆದರೆ, ಅದನ್ನು ಬಿಟ್ಟು ಪಲ್ಲಕ್ಕಿಯಲ್ಲಿ ಕೂರುವವರಾಗಬೇಕು. ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮೀಸಲಾತಿ ಅನುಕೂಲವಾಗಲಿದೆ ಎಂದು ಸಮಾಜದ ಮುಖಂಡ ಯಲ್ಲಪ್ಪ ಕಲ್ಗುಡಿ ಹೇಳಿದರು.

    ಬೀದರ ಮರಾಠಾ ಸಮಾವೇಶದಲ್ಲಿ ಮಾತು ಕೊಟ್ಟ ಮುಖ್ಯಮಂತ್ರಿಗಳು ಅದನ್ನು ಮರೆತಿದ್ದಾರೆ. ಮರಾಠರನ್ನು ಕಡೆಗಣಿಸಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ.
    | ಮಾರುತಿ ಚಿಟಗಿ, ಸಮಾಜದ ಮುಖಂಡ

    ಜಿಲ್ಲಾಧಿಕಾರಿ ಪರಿಶೀಲನೆಗೆ ಮನವಿ

    ಗದಗ: ತಾಲೂಕಿನ ಕಣಗಿನಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಮಾಡಿರುವ ಕಾಮಗಾರಿ ಬಿಲ್ ತಡೆಹಿಡಿಯಬೇಕೆಂದು ಜಯಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಶಿವಾನಂದ ನೀರಲಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

    ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು ಹಾಳಾಗಿದ್ದು, ಈ ಕಟ್ಟಡಗಳನ್ನು ನೆಲಸಮ ಮಾಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಆದರೆ, ನೆಲಸಮ ಮಾಡದೆ ಶಾಲಾ ಕಟ್ಟಡ ದುರಸ್ತಿಗೊಳಿಸಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲ. ಗ್ರಾಮದಲ್ಲಿ ರಸ್ತೆಗಳು ಹಾಳಾಗಿವೆ. ಶುದ್ಧ ನೀರಿನ ಘಟಕ ಇಲ್ಲ. ಕೂಡಲೆ ಸೌಲಭ್ಯ ಒದಗಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ಸೌಲಭ್ಯ ಒದಗಿಸಿ

    ಶಿರಹಟ್ಟಿ: ಮುಂಬರುವ ಎಸ್ಸೆಸ್ಸೆಲ್ಸಿ ಹಾಗೂ ಸದ್ಯ ನಡೆದಿರುವ ದ್ವಿತೀಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೆಳಗಿನ ಸಮಯ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚನೆ ನೀಡಲು ಆಗ್ರಹಿಸಿ ಕರವೇ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಸಾರಿಗೆ ಸಚಿವರಿಗೆ ಬುಧವಾರ ಮನವಿ ಸಲ್ಲಿಸಿದರು.

    ಕರವೇ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ಮಾ. 9ರಂದು ಲಕ್ಷೆ್ಮೕಶ್ವರದಿಂದ ಗೊಡಚಿಗೆ ಬೆಳಗ್ಗೆ 7.30ಕ್ಕೆ ಹೋಗುವ ಬಸ್ ಸಕಾಲಕ್ಕೆ ಬಾರದ ಕಾರಣ ಶಿರಹಟ್ಟಿಯಿಂದ ಗದುಗಿಗೆ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಕಣ್ಣೀರು ಹಾಕುವಂತಾಯಿತು. ಮಕ್ಕಳ ಈ ದೃಶ್ಯ ಕಂಡು ಕನಿಕರಿಸಿದ ಸಾರ್ವಜನಿಕರು ಸಾರಿಗೆ ಅಧಿಕಾರಿಗೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದಿಂದ ಲಕ್ಷೆ್ಮೕಶ್ವರಗೆ ಹೋಗುವ ವಿದ್ಯಾರ್ಥಿಗಳು ಸಕಾಲಕ್ಕೆ ಬಸ್ ಸೌಲಭ್ಯ ಇಲ್ಲದ್ದರಿಂದ ಹಣ ಕೊಟ್ಟು ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು. ಈ ಬಗ್ಗೆ ಸ್ಥಳೀಯ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ವಿಚಾರಿಸಿದಾಗ ಅವರು ಡಿಪೊ ವ್ಯವಸ್ಥಾಪಕರ ಗಮನ ಸೆಳೆಯಲು ಹೇಳಿ ನುಣಚಿಕೊಂಡರು ಎಂದು ದೂರಿದರು.

    ಲಕ್ಷೆ್ಮೕಶ್ವರ ಘಟಕದ ವ್ಯವಸ್ಥಾಪಕರ ಮೇಲೆ ಶಿಸ್ತು ಕ್ರಮ ಜರುಗಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ದೇವೆಂದ್ರ ಶಿಂಧೆ, ಮಾಬುಸಾಬ್ ಢಾಲಾಯತ್, ಆನಂದ ಘಂಟಿ, ಚೆನ್ನು ನಡುವಿನಕೆರಿ ಉಮೇಶ ಶೇಳಕೆ, ಪ್ರಕಾಶ ಬಡೆಣ್ಣವರ, ಜಾಕೀರ ಖತೀಬ, ಕಿರಣ ಶಿಂಧೆ, ಅನಿಲ ಬಾರಕೇರ, ನೂರಅಹ್ಮದ್ ಮುಳಗುಂದ, ಅಭಿಷೇಕ್ ದಶಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts