More

    ಮರಳು ಗಣಿಗಾರಿಕೆಗೆ ಬ್ರೇಕ್

    ಶಿವಮೊಗ್ಗ: ಮುಂಗಾರು ಮಳೆ ಆರಂಭದೊಂದಿಗೆ ಈ ವರ್ಷದ ಮರಳು ಗಣಿಗಾರಿಕೆಗೂ ಬ್ರೇಕ್ ಬಿದ್ದಿದೆ. ಮುಂಗಾರು ಮುಗಿದು ನದಿಗಳಲ್ಲಿ ನೀರಿನ ಮಟ್ಟದ ಇಳಿಯುವವರೆಗೂ ಮರಳು ಗಣಿಗಾರಿಕೆ ಸ್ಥಗಿತಗೊಳಿಸಿ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಮಂಗಳವಾರ ಜಿಲ್ಲಾ ಮರಳು ಸಮಿತಿ ಸಭೆ ನಡೆಸಿದ ಅವರು, ಸ್ಟಾಕ್​ಯಾರ್ಡ್​ಗಳಲ್ಲಿರುವ ಮರಳನ್ನು ಕಾಲಮಿತಿಯೊಳಗೆ ಸಾಗಣೆ ಮಾಡಲು ಅವಕಾಶ ನೀಡಲಾಗುವುದು. ಮುಂಗಾರು ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು. ಈ ಬಗ್ಗೆ ತಾಲೂಕು ಮಟ್ಟದ ಸಮಿತಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

    24 ಲಕ್ಷ ರಾಜಸ್ವ-ಒಂದು ಲಕ್ಷ ದಂಡ: ಈ ವರ್ಷದ ಮರಳು ಗಣಿಗಾರಿಕೆಯಲ್ಲಿ ಮೇ ಅಂತ್ಯದವರೆಗೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ 16 ವಾಹನಗಳನ್ನು ಜಪ್ತಿ ಮಾಡಿ, 1.48 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಮರಳು ಸಾಗಣೆಯಿಂದ 24.23 ಲಕ್ಷ ರೂ. ರಾಜಧನ ಸಂಗ್ರಹಿಸಲಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ಸಿ.ಆರ್.ರಶ್ಮಿ ಸಭೆಗೆ ಮಾಹಿತಿ ನೀಡಿದರು.

    ಹೆಚ್ಚುವರಿ ನಿಯತಕಾಲಿಕ ಪಾವತಿ ಮೊತ್ತ 2.61 ಕೋಟಿ ರೂ. ಸಂಗ್ರಹಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆಗೆ 8 ಲಕ್ಷ ರೂ. ರಾಜಧನ ಪಡೆಯಲಾಗಿದೆ. ಕಟ್ಟಡ ಕಲ್ಲು ಗಣಿಗಾರಿಕೆಯಿಂದ 8.78 ಲಕ್ಷ ರೂ. ರಾಜಧನ ಸಂಗ್ರಹವಾಗಿದೆ. ಕಟ್ಟಡ ಕಲ್ಲು ಅಕ್ರಮ ಗಣಿಗಾರಿಕೆ ಮತ್ತು ಸಾಗಣೆಯಿಂದ 3.96 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಹೇಳಿದರು.

    ಎಸ್ಪಿ ಕೆ.ಎಂ.ಶಾಂತರಾಜು, ಶಿವಮೊಗ್ಗ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಯೋಜನಾ ನಿರ್ದೇಶಕ ಕೆ.ಬಿ.ವೀರಾಪುರ ಇತರರಿದ್ದರು.

    ಗ್ರಾಮೀಣ ಭಾಗದ ಹಳ್ಳಗಳಲ್ಲಿ ಮರಳು ಬ್ಲಾಕ್ ಗುರುತಿಸಲು ತಾಲೂಕು ಮಟ್ಟದಿಂದ ಪ್ರಸ್ತಾವನೆ ಬಂದರೆ ಪರಿಶೀಲಿಸಲಾಗುವುದು. ಅನಧಿಕೃತ ಮರಳು ಗಣಿಗಾರಿಕೆ ತಡೆಯಲು ತಪಾಸಣೆ ತೀವ್ರಗೊಳಿಸಬೇಕು. ಅಕ್ರಮ ಎಸಗುವವರ ವಿರುದ್ಧ ಸರ್ಕಾರಿ ಆಸ್ತಿ ಕಳ್ಳತನದ ಮೊಕದ್ದಮೆ ದಾಖಲಿಸಬೇಕು.

    ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts