More

    ಮನುಷ್ಯರಿಗೆ ಲಿಂಪಿಸ್ಕಿನ್ ಬರಲ್ಲ

    ರಮೇಶ ಮೇಳಕುಂದಾ ಕಲಬುರಗಿ
    ಜಾನುವಾರುಗಳಿಗೆ ಚರ್ಮಗಂಟು (ಲಿಂಪಿಸ್ಕಿನ್) ರೋಗ ಕುತ್ತು ತರುತ್ತ ಸಾಗಿದೆ. ವಿವಿಧೆಡೆ ಕ್ರಮೇಣ ರೋಗ ವ್ಯಾಪಿಸಿಕೊಳ್ಳುತ್ತಿದೆ. ಈ ಮಧ್ಯೆ ರೋಗಪೀಡಿತ ಜಾನುವಾರುಗಳ ಹಾಲು ಕುಡಿದರೆ ಮನುಷ್ಯರಿಗೂ ಇದು ಅಂಟಿಕೊಳ್ಳುತ್ತದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
    ರಾಜ್ಯಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಆರಂಭದಲ್ಲಿ ಕಾಣಿಸಿಕೊಂಡ ಲಿಂಪಿಸ್ಕಿನ್ ಕ್ರಮೇಣ ಮಹಾರಾಷ್ಟçಕ್ಕೆ ವ್ಯಾಪಿಸಿ, ಈಗ ಜಿಲ್ಲೆಗೂ ಕಾಲಿಟ್ಟಿದೆ. ಈ ರೋಗದಿಂದ ಜಾನುವಾರುಗಳು ತತ್ತರಿಸುತ್ತಿದ್ದು, ಹಾಲು ಉತ್ಪಾದನೆಗೂ ಹೊಡೆತ ಬಿದ್ದಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹಸುವಿನ ಹಾಲು ಕುಡಿದವರಿಗೂ ಲಿಂಪಿಸ್ಕಿನ್ ರೋಗ ಹರಡುತ್ತದೆ ಎಂಬ ಚಿತ್ರ ಸಹಿತ ಮಾಹಿತಿಗಳು ಹರಿದಾಡುತ್ತಿದ್ದು, ಗೊಂದಲ ಸೃಷ್ಟಿಸಿದೆ.
    ಲಿಂಪಿಸ್ಕಿನ್ ರೋಗಬಾಧಿತ ಜಾನುವಾರು, ಹಸುವಿನ ಹಾಲು ಬಳಸಿದರೆ ಮನುಷ್ಯರಿಗೂ ಇದು ಹರಡಿ ಸಾವು ಸಂಭವಿಸುತ್ತದೆ ಎಂಬ ಸುಳ್ಳು ಮಾಹಿತಿಯನ್ನು ಕೆಲವರು ಹಂಚಿಕೊಳ್ಳುತ್ತಿದ್ದಾರೆ. ಇದು ಜಾನುವಾರುಗಳಿಂದ ಮನುಷ್ಯರಿಗೆ ಅಂಟಿಕೊಳ್ಳುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಈ ಬಗ್ಗೆ ಬರುತ್ತಿರುವ ಸುಳ್ಳು ವಿಷಯ ಇಲ್ಲದ ಸಮಸ್ಯೆಗೆ ಕಾರಣವಾಗಿದೆ.
    ಈ ರೋಗ ಹಸುಗಳ ನಂತರ ಮಾನವರಲ್ಲಿ ಬೆಂಕಿಯAತೆ ಹರಡಲು ಪ್ರಾರಂಭಿಸಿದೆ. ಸ್ವಲ್ಪ ಸಮಯ ಮಾರುಕಟ್ಟೆಯಿಂದ ಹಾಲು ಖರೀದಿಸುವುದನ್ನು ತಪ್ಪಿಸಬೇಕು ಎಂಬ ಕುರಿತು ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಸಹಿತ ಹರಡಲಾಗುತ್ತಿದೆ. ಇದರಿಂದ ಸಹಜವೇ ಜನರಲ್ಲಿ ಆತಂಕ ಮೂಡಿದೆ. ಆದರೆ ವಾಸ್ತವವಾಗಿ ಜಾನುವಾರುಗಳಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ. ಈ ಬಗ್ಗೆ ಒಂದೂ ಉದಾಹರಣೆ ಇಲ್ಲ. ಚರ್ಮಗಂಟು ರೋಗ ಬಂದ ಹಸು ಹಾಲು ಕೊಡುವುದಿಲ್ಲ ಎಂಬುದು ನಿಜ. ಆದರೆ ಯಾರೋ ಈ ಸಂಬAಧ ಸುಳ್ಳು ಸುದ್ದಿ ಹರಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಜನರು ಇದಕ್ಕೆ ಕಿವಿಗೊಡಬಾರದೆಂದು ಪಶು ವೈದ್ಯರು ಮನವಿ ಮಾಡಿದ್ದಾರೆ. ಲಿಂಪಿಸ್ಕಿನ್ ರೋಗಕ್ಕೆಂದೇ ನಿರ್ದಿಷ್ಟ ಔಷಧವಿಲ್ಲ. ಆಡು ಸಿಡುಬು ರೋಗಕ್ಕೆ ಬಳಸುವ `ಗೋಟ್ ಬಾಕ್ಸ್’ ಲಸಿಕೆ ಬಳಸಲಾಗುತ್ತಿದೆ. ಇದು ಪರಿಣಾಮಕಾರಿಯೂ ಎನಿಸಿದೆ. ಜಿಲ್ಲೆಯ ಎಲ್ಲೆಡೆ ಲಸಿಕೆ ಹಾಗೂ ಔಷಧ ನೀಡುವ ಕೆಲಸ ಭರದಿಂದ ಸಾಗಿದೆ. ಪಶು ಆಸ್ಪತ್ರೆ ತಂಡ ಹಳ್ಳಿಗಳಿಗೆ ತೆರಳಿ ವ್ಯಾಕ್ಸಿನೇಷನ್ ಆರಂಭಿಸಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ ೧೨ ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.

    ಪ್ರಗತಿಯಲ್ಲಿ ವ್ಯಾಕ್ಸಿನೇಷನ್: ಕಲಬುರಗಿ ಜಿಲ್ಲೆಯಲ್ಲಿ ರೋಗದ ಹರಡುವಿಕೆ ಪ್ರಮಾಣ ಕಡಿಮೆ ಇದೆ. ಇದುವರೆಗೆ ೧೦೭ ಗ್ರಾಮಗಳ ೨೧೯ ಜಾನುವಾರುಗಳಲ್ಲಿ ಈ ರೋಗ ಕಂಡುಬAದಿದೆ. ಚಿಕಿತ್ಸೆ ಮತ್ತು ಲಸಿಕೆ ನೀಡಿದ್ದು, ೧೨೫ ಜಾನುವಾರು ಗುಣಮುಖವಾಗಿವೆ. ರೋಗ ಕಂಡು ಬಂದ ೧೦೭ ಹಳ್ಳಿಗಳ ಸುತ್ತಲಿನ ೬ ಕಿಮೀ ದೂರದ ಗ್ರಾಮಗಳಲ್ಲಿ ಲಸಿಕೆಗೆ ಆದ್ಯತೆ ಮೇಲೆ ನೀಡಲಾಗುತ್ತಿದೆ. ಜಿಲ್ಲಾದ್ಯಂತ ಲಸಿಕೆಗೆ ವೇಗ ನೀಡಿದ್ದು, ಈವರೆಗೆ ೧೨ ಸಾವಿರ ಜಾನುವಾರುಗಳಿಗೆ ಲಸಿಕೆ ನೀಡಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ಪಶು ಸಂಗೋಪನಾ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಡಾ.ಸುಭಾಶ ಟಕ್ಕಳಕಿ ಹೇಳಿದ್ದಾರೆ.

    ಏನಿದು ಚರ್ಮಗಂಟು ಕಾಯಿಲೆ?: ಇದು ವೈರಸ್ ರೋಗ. ಸಿಡುಬು ರೋಗ ವೈರಸ್ ಕುಟುಂಬದ ಮೇಕೆ ಸಿಡುಬು ಜಾತಿಗೆ ಸೇರಿದೆ. ಹಸುಗಳ ಮೈಮೇಲೆ ಪ್ರಾರಂಭಿಕ ಒಂದೆರಡು ಕಡೆ ಗಂಟುಗಳು ಕಾಣಿಸಿಕೊಳ್ಳುತ್ತವೆ. ಕೆಲವೇ ದಿನಗಳಲ್ಲಿ ಮೈತುಂಬ ಆವರಿಸಿಕೊಳ್ಳುತ್ತವೆ. ನಂತರ ತೀವ್ರ ಜ್ವರ ಬಂದು ಮೇವು ತಿನ್ನುವುದಿಲ್ಲ. ತೀವ್ರ ಅಸ್ವಸ್ಥವಾಗುತ್ತವೆ. ಹಾಲು ಕೊಡುವ ರಾಸುಗಳು ಹಾಲು ಕೊಡಲ್ಲ. ಬಾಯಿ, ಮೂಗಿನಿಂದ ದ್ರವ ಸುರಿಯುತ್ತದೆ. ತಿನ್ನುವ ಆಹಾರ, ಕುಡಿಯುವ ನೀರಿನಲ್ಲಿ ರೋಗಪೀಡಿತ ಹಸುವಿನ ಜೊಲ್ಲು, ಇತರ ದ್ರವ ಸೇರಿದಾಗ ಮತ್ತೊಂದಕ್ಕೂ ಹರಡುತ್ತದೆ. ಹಸು ಸಂಪರ್ಕದ ಕೀಟ, ನೊಣ, ಸೊಳ್ಳೆಗಳಿಂದಲೂ ಸೋಂಕು ಹರಡುತ್ತದೆ. ರೋಗ ಲP್ಷÀಣದ ರಾಸುಗಳನ್ನು ಹಿಂಡಿನಿAದ ದೂರ ಇರಿಸಬೇಕು. ಸೂಕ್ತ ಚಿಕಿತ್ಸೆ ಸಿಕ್ಕರೆ ಚೇತರಿಸಿಕೊಳ್ಳಬಹುದು. ಜಾಸ್ತಿ ಸಮಸ್ಯೆಗೊಳಗಾದರೆ ಸಾವನ್ನಪ್ಪುತ್ತವೆ.

    ಲಿಂಪಿಸ್ಕಿನ್ ರೋಗ ಜಾನುವಾರುಗಳಿಂದ ಮನುಷ್ಯರಿಗೆ ಹರಡುವುದಿಲ್ಲ. ಹಾಲು ಸೇವನೆ ಬಗ್ಗೆ ಅನಗತ್ಯ ಆತಂಕ ಬೇಡ. ಹಾಲನ್ನು ಕಾಯಿಸಿ ಕುಡಿಯಬೇಕು. ಕಲಬುರಗಿ ಜಿಲ್ಲೆಯಲ್ಲಿ ಲಿಂಪಿಸ್ಕಿನ್ ರೋಗ ವ್ಯಾಪಕ ನಿಯಂತ್ರಣದಲ್ಲಿದೆ. ವ್ಯಾಕ್ಸಿನೇಷನ್ ಭರದಿಂದ ಸಾಗಿದೆ.
    | ಡಾ.ಸುಭಾಶ ಟಕ್ಕಳಕಿ
    ಪ್ರಭಾರಿ ಉಪ ನಿರ್ದೇಶಕ ಪಶು ಸಂಗೋಪನಾ ಇಲಾಖೆ

    ಜಾನುವಾರುಗಳಿಂದ ಮನುಷ್ಯರಿಗೆ ಈ ರೋಗ ಹರಡುವುದಿಲ್ಲ. ಹಸಿ ಹಾಲು ಕುಡಿದರೆ ಕೆಲವೊಂದು ಕಾರಣಗಳಿಂದ ರೋಗಗಳು ಬರಬಹುದು. ಹೀಗಾಗಿ ಹಾಲನ್ನು ಕಾಯಿಸಿಯೇ ಕುಡಿಯಬೇಕು.
    |ಡಾ. ರಾಜಶೇಖರ ಮಾಲಿ,
    ಜಿಲ್ಲಾ ಆರೋಗ್ಯಾಧಿಕಾರಿ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts