More

    ಮನಸೆಳೆದ ಪಕ್ಷಿ ವೀಕ್ಷಣೆ ಕಾರ್ಯಕ್ರಮ

    ಜೊಯಿಡಾ: ಜೊಯಿಡಾ ಕಾಳಿ ಪ್ರವಾಸೋದ್ಯಮ ಸಂಸ್ಥೆ, ಜೊಯಿಡಾ ಪ್ರೆಸ್ ಮತ್ತು ಕೈಗಾ ಬರ್ಡರ್ಸ್ ನೇತೃತ್ವದಲ್ಲಿ ಜೊಯಿಡಾದಲ್ಲಿ ಭಾನುವಾರ ಪಕ್ಷಿ ವೀಕ್ಷಣೆ ಕಾರ್ಯಕ್ರಮ ನಡೆಯಿತು.
    ಕೈಗಾ ಬರ್ಡರ್ಸ್ ತಂಡದ ದಿನೇಶ ಗಾಂವಕರ ಅವರು ಪಕ್ಷಿ ವೀಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಪಕ್ಷಿಗಳನ್ನು ಉಳಿಸುವುದರ ಬಗ್ಗೆ ನಾವು ಯೋಚಿಸುವ ಮೊದಲು ನಮ್ಮ ಸುತ್ತ ಎಷ್ಟು ಪಕ್ಷಿಗಳು ಇವೆ. ಎಂದು ತಿಳಿಯುವ ಪ್ರಯತ್ನ ಮಾಡೋಣ. ನಮ್ಮಲ್ಲಿ 500ಕ್ಕಿಂತ ಹೆಚ್ಚು ಜಾತಿಯ ಪಕ್ಷಿಗಳು ಇದ್ದು, ಅದರಲ್ಲಿ 100ಕ್ಕಿಂತ ಹೆಚ್ಚು ಪಕ್ಷಿಗಳನ್ನು ಗುರುತಿಸಬಹುದು ಎಂದರು.
    ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ ಮಾತನಾಡಿ, ನಾವು ಪಕ್ಷಿ ತಜ್ಞರನ್ನು ಮತ್ತು ಅದರಲ್ಲಿ ಆಸಕ್ತಿಯಿರುವ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಪಕ್ಷಿ ವೀಕ್ಷಣೆ ಮತ್ತು ಅವುಗಳ ಜೀವನ ಕ್ರಮದ ಬಗ್ಗೆ ಅರಿವು ಮೂಡಿಸುವ ಜೊತೆಗೆ ಮಕ್ಕಳಲ್ಲಿ, ಯುವಕರಲ್ಲಿ ಈ ಬಗ್ಗೆ ಆಸಕ್ತಿ ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂದರು.
    ಜೊಯಿಡಾ ಶಿವಾಜಿ ಸರ್ಕಲ್​ನಿಂದ ಪ್ರಾರಂಭವಾಗಿ ಗಾವಡೆವಾಡಾ ಕೆರೆಯತನಕ ನಡೆದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಕೈಗಾ ಬರ್ಡರ್ಸ್ ತಂಡದ ದಿನೇಶ ಗಾಂವಕರ, ಸೂರಜ ಬಾನಳಿಕರ, ಪ್ರಶಾಂತ ಕೈಗಾ ಅವರು ಪಕ್ಷಿಗಳ ಗುರುತಿಸುವಿಕೆ, ಅವುಗಳ ವಿಧ, ವೀಕ್ಷಣೆ ರೀತಿ, ಅವುಗಳ ಕೂಗು ಹೀಗೆ ವಿವಿಧ ಮಾಹಿತಿ ನೀಡಿದರು. ಈ ಪಕ್ಷಿ ವೀಕ್ಷಣೆಯಲ್ಲಿ 60 ವಿವಿಧ ಜಾತಿಯ ಪಕ್ಷಿಗಳು ಕಾಣಸಿಕ್ಕವು.
    ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ಸುನಿಲ ದೇಸಾಯಿ, ಜೊಯಿಡಾ ಪ್ರೆಸ್ ಸದಸ್ಯರು, ಶಾಲೆ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts