More

    ಮನರಂಜನೆ ಜತೆ ಸಂದೇಶ ನೀಡುವ ವೇದ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಹೇಳಿಕೆ

    ಹುಬ್ಬಳ್ಳಿ: ವೇದ ಎಂದರೆ ಗ್ರಂಥ, ಈ ಸಿನೆಮಾದಲ್ಲಿ ಮನರಂಜನೆಯ ಜತೆಗೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವೂ ಇದೆ ಎಂದು ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ ತಿಳಿಸಿದರು.

    ತಮ್ಮ 125ನೇ ಚಿತ್ರ ವೇದ ಪ್ರೀ ರಿಲೀಸ್ ಇವೆಂಟ್ ಹಿನ್ನೆಲೆಯಲ್ಲಿ ಬುಧವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ವೇದದಲ್ಲಿ ಪ್ರೀತಿ, ಬಾಳು, ಸಂತೋಷ ಹಾಗೂ ನಂಬಿಕೆ ಮುಂತಾದ ವಿಷಯಗಳು ಇವೆ. ಚಿತ್ರದ ಪ್ರೀ ರಿಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ ಮಾಡುತ್ತಿದ್ದೇವೆ. ಹುಬ್ಬಳ್ಳಿ ನಮಗೆ ಲಕ್ಕಿ ಪ್ಲೇಸ್. ಕನ್ನಡ ಸಿನೆಮಾಗಳು ಪ್ಯಾನ್ ಇಂಡಿಯಾ ಮೂವಿಗಳಾಗುತ್ತಿರುವುದು ಸಂತೋಷದ ಸಂಗತಿ ಎಂದರು.

    ಕಾಂತಾರಾ ಹಾಗೂ ಕೆಜಿಎಫ್ ಇಷ್ಟೊಂದು ಹಿಟ್ ಆಗುತ್ತವೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆ ರೀತಿ ಸ್ವಲ್ಪ ಡಿಫರೆಂಟ್ ಆಗಿ ಸಿನೆಮಾ ಮಾಡಬೇಕು. ಅಂತಹ ಪ್ರಯತ್ನಗಳು ದೊಡ್ಡ ಪ್ರಮಾಣದಲ್ಲಿ ಈಗ ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಮಹದಾಯಿ ಯೋಜನೆಗೆ ನಮ್ಮ ಬೆಂಬಲ ಯಾವತ್ತೂ ಇದ್ದೇ ಇದೆ. ಈ ಯೋಜನೆಯನ್ನು ಈಗಿರುವ ವ್ಯವಸ್ಥೆಯಲ್ಲಿ ಸರ್ಕಾರ ಜಾರಿಗೆ ತರಬೇಕು. ಆದಷ್ಟು ಬೇಗ ಯೋಜನೆ ಜಾರಿ ಮಾಡಬೇಕು ಎಂಬುದು ನಮ್ಮ ಆಶಯ ಎಂದು ಶಿವರಾಜಕುಮಾರ ಹೇಳಿದರು.

    ನಾನು ರಾಜಕೀಯಕ್ಕೆ ಬರುವುದಿಲ್ಲ. ಪತ್ನಿ ಗೀತಾ ಕೂಡ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಜತೆಗೆ ಸಿನೆಮಾ ಮಾಡುವುದು ಮುಂದುವರಿಯಲಿದೆ. ನನ್ನ ಮುಂದಿನ ಸಿನೆಮಾ ‘ಕೇಡಿ’ ಎಂದು ಉತ್ತರಿಸಿದರು.

    ಸಿದ್ಧಾರೂಢರ ದರ್ಶನ: ವೇದ ಚಿತ್ರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರು ಪತ್ನಿ ಸಮೇತರಾಗಿ ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಪತ್ನಿ ಗೀತಾ ಅವರೊಂದಿಗೆ ಸಿದ್ಧಾರೂಢ ಮಠಕ್ಕೆ ಆಗಮಿಸಿದ ಅವರು ಶ್ರೀಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts