More

    ಮದ್ದೂರು ಕ್ಷೇತ್ರದಲ್ಲಿ 2,13,706 ಮತದಾರರು

    ಮದ್ದೂರು: ಬುಧವಾರ ನಡೆಯಲಿರುವ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಆರ್.ನಾಗರಾಜು ತಿಳಿಸಿದರು.
    ಪಟ್ಟಣ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಮಂಗಳವಾರ ಮಸ್ಟರಿಂಗ್ ಸಿದ್ಧತೆ ಮತ್ತು ವ್ಯವಸ್ಥೆ ಪರಿಶೀಲಿಸಿ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದಲ್ಲಿ 1,03,863 ಪುರುಷರು, 1,09,823 ಮಹಿಳೆಯರು ಹಾಗೂ 20 ಇತರ ಮತದಾರರು ಸೇರಿದಂತೆ ಒಟ್ಟು 2,13,706 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
    80 ವರ್ಷದ ಮೇಲ್ಪಟ್ಟ 5,142 ಮತದಾರರಿದ್ದು, 464 ಜನರಿಗೆ ಅಂಚೆ ಮತಪತ್ರ ವಿತರಿಸಲಾಗಿದೆ. ಇದರಲ್ಲಿ 445 ಜನರು ಮತದಾನ ಮಾಡಿದ್ದಾರೆ. 2,707 ಅಂಗವಿಕಲ ಮತದಾರರಿದ್ದು, 153 ಜನರಿಗೆ ಅಂಚೆ ಪತ್ರಗಳನ್ನು ವಿತರಿಸಲಾಗಿತ್ತು. ಇದರಲ್ಲಿ 152 ಜನರು ಅಂಚೆ ಮತಗಳಲ್ಲಿ ಮತದಾನ ಮಾಡಿದ್ದಾರೆ ಎಂದರು.
    ಮತಗಟ್ಟೆಗಳು: ನಗರ ವ್ಯಾಪ್ತಿಯಲ್ಲಿ 24 ಮತಗಟ್ಟೆಗಳು, ಗ್ರಾಮಾಂತರ ಪ್ರದೇಶದಲ್ಲಿ 254 ಮತಗಟ್ಟೆಗಳನ್ನು ತೆರೆಯಲಾಗಿದೆ. ಅದರಲ್ಲಿ 2 ಪಿಂಕ್ , 5 ಸಾಂಪ್ರದಾಯಿಕ, 2 ಯುವ ಮತಗಟ್ಟೆಗಳು, 1 ಅಂಗವಿಕಲ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
    ಪ್ರತಿ ಮತಗಟ್ಟೆಗಳಲ್ಲೂ ವೋಟರ್ ಅಸಿಸೆಟೆನ್ಸ್ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಬಿ.ಎಲ್.ಒ.ಗಳು ಹಾಗೂ ಎನ್‌ಎನ್‌ಸಿ, ಸ್ವಯಂ ಸೇವಕರು, ಗ್ರಾಪಂ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
    ಬಸ್ ವ್ಯವಸ್ಥೆ: ಒಟ್ಟು 56 ಮಾರ್ಗಗಳನ್ನು ಮಾಡಲಾಗಿದೆ. ಇದರಲ್ಲಿ 37 ಬಸ್ ಮಾರ್ಗಗಳು, 6 ಟೆಂಪೋ ಮಾರ್ಗಗಳು, 4 ಜೀಪು ಮಾರ್ಗಗಳು, 2 ಮಿನಿ ಬಸ್ ಮಾರ್ಗಗಳು ಮಾಡಲಾಗಿದೆ ಎಂದರು.
    ತಮಿಳುನಾಡು, ತೆಲಂಗಾಣ, ಹಿಮಾಚಲ ಪ್ರದೇಶ, ಚಂಡೀಗಢ ರಾಜ್ಯದಿಂದ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು 121 ಗೃಹ ರಕ್ಷಕ ದಳದ ಸಿಬ್ಬಂದಿ, ಸಿಐಎಸ್‌ಎಫ್ 1 ತುಕ್ಕಡಿ, 90 ಮಂದಿ ಪೊಲಿಸರು. ಡಿವೈಎಸ್ಪಿ 1, ಸಿಪಿಐ 3, ಪಿಎಸ್‌ಐ 10 ಅಧಿಕಾರಿಗಳನ್ನು ನೇಮಿಸಲಾಗಿದ್ದು, ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
    ಸಹಾಯಕ ಚುನಾವಣಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ವೃತ್ತ ನಿರೀಕ್ಷಕರಾದ ಸಂತೋಷ್, ಮನೋಜ್, ಬಿಇಒ ಸಿ.ಎಚ್.ಕಾಳೀರಯ್ಯ, ಶಿರಸ್ತೇದಾರ್ ರೂಪಾ ಇದ್ದರು.

    09ಎಂಡಿಆರ್1
    ಮದ್ದೂರು ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಿಂದ ಮತಗಟ್ಟೆಗೆ ತೆರಳುತ್ತಿರುವ ಚುನಾವಣಾಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts