More

    ಮತ್ತೊಮ್ಮೆ ಆರೋಗ್ಯ ಸಮೀಕ್ಷೆ

    ಕಾರವಾರ: ಹೊರ ದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಸಾಕಷ್ಟು ಜನ ಆಗಮಿಸಿದ್ದರಿಂದ ಮತ್ತೊಮ್ಮೆ ಮನೆ ಮನೆ ಸಮೀಕ್ಷೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಅವರು ಈ ಕುರಿತು ಆದೇಶ ಹೊರಡಿಸಿದ್ದು, ಜೂನ್ 5ರವರೆಗೆ ಸಮೀಕ್ಷೆ ನಡೆಯಲಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಮಾಹಿತಿ ಕಲೆ ಹಾಕುವರು. ಕೇಳುವ ಮಾಹಿತಿ ನೀಡಿ ಜನ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

    ಹೊರಗಿನಿಂದ ಬರುವವರ ನಿರೀಕ್ಷೆ: ಮಹಾರಾಷ್ಟ್ರದಿಂದ ಆಗಮಿಸಲು ಇನ್ನೂ ಅಂದಾಜು 4 ಸಾವಿರ ಜನರು ಸೇವಾ ಸಿಂಧು ಆಪ್​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದ ನಿಯಮಾವಳಿಯಂತೆ 7 ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರೈಸಬೇಕಿದೆ. ನೋಂದಣಿ ಮಾಡಿಕೊಂಡಿದ್ದರೂ ಸದ್ಯ ಹೆಚ್ಚಿನ ಜನರು ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಪ್ರಯೋಗಾಲಯಕ್ಕೆ ಮಾನ್ಯತೆ: ಇಲ್ಲಿನ ಕ್ರಿಮ್್ಸ ಆಸ್ಪತ್ರೆಯ ವೈರಾಲಜಿ ಲ್ಯಾಬ್ ಅನ್ನು ಆರ್​ಟಿಪಿಸಿಆರ್ ಕೋವಿಡ್ -19 ಅಧಿಕೃತ ಪ್ರಯೋಗಾಲಯವೆಂದು ರಾಜ್ಯ ಸರ್ಕಾರ ಮಾನ್ಯತೆ ನೀಡಿದೆ ಎಂದು ಹರೀಶ ಕುಮಾರ ತಿಳಿಸಿದ್ದಾರೆ.

    9 ಗಂಟೆಯವರೆಗೆ ಅವಕಾಶ
    ರಾಜ್ಯ ಸರ್ಕಾರದ ಹೊಸ ನಿಯಮಾವಳಿಯಂತೆ ಸೋಮವಾರದಿಂದ ಬೆಳಗ್ಗೆ 7ರಿಂದ ರಾತ್ರಿ 9ರವರೆಗೂ ಆರ್ಥಿಕ ಚಟುವಟಿಕೆಗೆ ಅವಕಾಶ ಮಾಡಿಕೊಡಲಾಗಿದೆ. ರಾತ್ರಿ 9ರ ನಂತರ ಜನರು ವೈದ್ಯಕೀಯ ಕಾರಣ ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಅನಗತ್ಯವಾಗಿ ಹೊರ ಬರುವಂತಿಲ್ಲ. 65 ವರ್ಷದ ಮೇಲಿನವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ರಾತ್ರಿ ಕಡ್ಡಾಯವಾಗಿ ಮನೆಯಿಂದ ಹೊರಗೆ ಓಡಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

    6 ಜನರ ಬಿಡುಗಡೆ
    ಕರೊನಾದಿಂದ ಗುಣಮುಖರಾದ 6 ಜನರುನ್ನು ಸೋಮವಾರ ಕಾರವಾರ ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಎಲ್ಲರಿಗೂ ಶುಭ ಹಾರೈಸಿ ಬೀಳ್ಕೊಟ್ಟರು. ಬಿಡುಗಡೆಯಾದವರಲ್ಲಿ ಹೊನ್ನಾವರದ 28 ವರ್ಷ ಹಾಗೂ 36 ವರ್ಷದ ಇಬ್ಬರು ಮಹಿಳೆಯರು. 40 ವರ್ಷದ ಪುರುಷ. ಕಾರವಾರ ಮಾಜಾಳಿಯ 37 ವರ್ಷದ ಪುರುಷ. ಕುಮಟಾದ 27 ವರ್ಷ, ಭಟ್ಕಳದ 27 ವರ್ಷದ ಯುವಕರು ಸೇರಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಯಾವುದೇ ಕರೊನಾ ಹೊಸ ಪ್ರಕರಣಗಳಿಲ್ಲ. ಒಟ್ಟಾರೆ ಜಿಲ್ಲೆಯ ಸೋಂಕಿತರ ಸಂಖ್ಯೆ 82 ಇದ್ದು, 32 ಜನ ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    29 ಜನರ ಪರೀಕ್ಷೆ ವರದಿ ಬಾಕಿ
    ಕುಮಟಾ:
    ತಾಲೂಕಿನಲ್ಲಿ 4 ಕರೊನಾ ಪ್ರಕರಣಗಳು ದೃಢಪಟ್ಟಿದ್ದು, ಕ್ವಾರಂಟೈನ್​ನಲ್ಲಿರುವ 29 ಜನರ ಗಂಟಲ ದ್ರವದ ಪರೀಕ್ಷೆ ವರದಿ ಬರಬೇಕಿದೆ ಎಂದು ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 19 ಮಂದಿ ಹಾಗೂ ಎರಡನೇ ಹಂತದ ಸಂಪರ್ಕಕ್ಕೆ ಬಂದ 25 ಮಂದಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ಅನುಕೂಲವಾಗಲೆಂದು ತಾಲೂಕಾಸ್ಪತ್ರೆಯಲ್ಲಿ 35 ಹಾಸಿಗೆಯ ಸುಸಜ್ಜಿತ ಪ್ರತ್ಯೇಕ ಕರೊನಾ ವಾರ್ಡ್ ಸಿದ್ಧವಾಗಿದೆ. ಇದರಿಂದ ಆಸ್ಪತ್ರೆಗೆ ಇತರ ಚಿಕಿತ್ಸೆಗೆ ಬರುವವರು ಆತಂಕಪಡುವ ಅಗತ್ಯವಿಲ್ಲ ಎಂದರು. ಸರ್ಕಾರದ ಮುಂದಿನ ಆದೇಶದವರೆಗೆ ಸಾರ್ವಜನಿಕರು ಜಾಗೃತರಾಗಿ ಕರೊನಾ ವಿರುದ್ಧದ ಹೋರಾಟದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು. ಹೊರ ರಾಜ್ಯಗಳಿಂದ ಕಳ್ಳದಾರಿಯಲ್ಲಿ ಊರಿಗೆ ಬಂದವರ ಬಗ್ಗೆ ಸ್ಥಳೀಯರೇ ಮಾಹಿತಿ ನೀಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts