More

    ಮತ್ತೆ ಬಂತು ಕಾರ್ಗಿಲ್ ಮೀನು

    ಕಾರವಾರ: ಮತ್ತೆ ಜಿಲ್ಲೆಯ ಕಾರವಾರ ಕರಾವಳಿಯಲ್ಲಿ ಕಾರ್ಗಿಲ್ ಮೀನುಗಳು ಕಂಡುಬಂದಿದ್ದು, ಮೀನುಗಾರರ ಆತಂಕ ಹೆಚ್ಚಿದೆ.

    ಬುಧವಾರ ಮಾಜಾಳಿ ಕಡಲ ತೀರದಲ್ಲಿ ಕೆಲವು ಮೀನುಗಳು ಬಂದು ಬಿದ್ದಿದ್ದು, ಬೈತಖೋಲ್ ಮೀನುಗಾರರ ಬಲೆಗೂ ಮೀನುಗಳು ಬಿದ್ದಿವೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಸಾಕಷ್ಟು ಕಾರ್ಗಿಲ್ ಮೀನುಗಳು ಮೀನುಗಾರರ ಬಲೆಗೆ ಬಿದ್ದಿದ್ದವು.

    ಬಲೆಗೆ ಈ ಮೀನುಗಳು ಬಿದ್ದರೆ ಸಮುದ್ರದಲ್ಲಿ ಮತ್ಸ್ಯ ಕ್ಷಾಮ ಎದುರಾಗಲಿವೆ ಎಂಬುದು ಮೀನುಗಾರರ ನಂಬಿಕೆ. ಇದರಿಂದ ಬಲೆ ಹಾಕಿದಾಗ ಈ ಮೀನು ಬಂತು ಎಂದರೆ ಮೀನುಗಾರರು ಎಲ್ಲಿಲ್ಲದ ಆತಂಕಪಡುತ್ತಾರೆ. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

    ಕಾರ್ಗಿಲ್ ಹೆಸರೇಕೆ..?: ಈ ಮೀನುಗಳ ಮೇಲ್ಮೈ ಸೈನಿಕರ ಬಟ್ಟೆಯಂತೆ ಇರುತ್ತವೆ. ಅಲ್ಲದೆ, ಈ ಹಿಂದೆ ಭಾರತ-ಪಾಕಿಸ್ತಾನ ನಡುವೆ ಕಾರ್ಗಿಲ್ ಯುದ್ಧ ನಡೆದ ಸಮಯದಲ್ಲಿ ಕರಾವಳಿಯಲ್ಲಿ ಈ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿದ್ದವು. ಇದರಿಂದ ಆಡು ಭಾಷೆಯಲ್ಲಿ ಕಾರ್ಗಿಲ್ ಎಂಬ ಹೆಸರು ಬಂತು ಎಂದು ಸ್ಥಳೀಯ ಮೀನುಗಾರರು ನೆನಪಿಸಿಕೊಳ್ಳುತ್ತಾರೆ.

    ದ್ವೀಪಗಳ ಸಮೀಪ ವಾಸಿಸುವ ಇವು ಸಮುದ್ರದ ವಾತಾವರಣ ಹಾಗೂ ಅಲೆಗಳ ಸಂಚಾರದ ದಿಕ್ಕಿಗೆ ಅನುಗುಣವಾಗಿ ಆಹಾರ ಹುಡುಕಿಕೊಂಡು ಹೋಗುತ್ತವೆ. ಬಾಂಗುಡೆ, ತಾರ್ಲೆಯಂತಹ ಸೇವನೆ ಯೋಗ್ಯ ಮೀನುಗಳು ಸಿಗುವ ಪ್ರಮಾಣ ಕಡಿಮೆಯಾಗಿದ್ದರಿಂದ ಇವುಗಳು ಬಲೆಗೆ ಬೀಳುತ್ತಿವೆ. | ಡಾ.ಶಿವಕುಮಾರ ಹರಗಿ ಕಡಲ ವಿಜ್ಞಾನಿ

    ವಿಶೇಷವೇನು..? ಟ್ರಿಗರ್ ಫಿಶ್ ಅಥವಾ ಓಡನಸ್ ನೈಜರ್ ಎಂಬ ಹೆಸರಿನ ಈ ಮೀನುಗಳನ್ನು ಸ್ಥಳೀಯವಾಗಿ ಕಡುಬು ಎಂದು ಕರೆಯುವುದಿದೆ. ಭಾರತದ ಲಕ್ಷದ್ವೀಪ, ಅಂಡ ಮಾನ್, ನಿಕೋಬಾರ್ ಮುಂತಾದೆಡೆ ಇವುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಮನುಷ್ಯರಂತೆ ದೊಡ್ಡ ಹಲ್ಲು ಹೊಂದಿರುತ್ತವೆ. ಗುಂಪಾಗಿ ವಾಸಿಸುವ ಇವು ಇತರ ಮೀನುಗಳನ್ನು ತಿಂದು ಬದುಕುತ್ತವೆ. ಮಾನವ ಸೇವನೆಗೆ ಯೋಗ್ಯವಲ್ಲ. ಮೀನೆಣ್ಣೆ ಘಟಕಗಳಿಗೆ ಕಳಿಸಬಹುದಾಗಿದ್ದು, ಕೆಜಿಗೆ 13 ರಿಂದ 14 ರೂ. ದರವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts