More

    ಮತಪಟ್ಟಿಯಲ್ಲಿ ಹೆಸರಿಲ್ಲದೆ ಬೇಸರಗೊಂಡ ಮತದಾರರು

    ಹಗರೆ: ತಾಲೂಕಿನ ಬಹುತೇಕ ಭಾಗಗಳಲ್ಲಿ ಚುನಾವಣಾಧಿಕಾರಿಗಳ ಎಡವಟ್ಟಿನಿಂದಾಗಿ ಮತಪಟ್ಟಿಯಲ್ಲಿ ಹೆಸರಿಲ್ಲದೆ ಮತದಾರರು ಬೇಸರಗೊಂಡಿದ್ದು, ಆಕ್ರೋಶ ಕೂಡ ವ್ಯಕ್ತವಾಯಿತು.

    ಬಿಕ್ಕೊಡು ಹೋಬಳಿ ಪಡುವಳಲು ಮತಗಟ್ಟೆ 195ರಲ್ಲಿ ಹೊಸದಾಗಿ ಸೇರ್ಪಡೆಗೊಂಡಿದ್ದ ಯುವ ಮತದಾರ ಡನಾಯ್ಕನಹಳ್ಳಿ ಗ್ರಾಮದ ಶ್ರವಣ್ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ್ದಕ್ಕೆ ಮತದಾನ ಮಾಡಲಾಗದೆ ಹಿಂದಿರುಗಬೇಕಾಯಿತು. ಬಿ.ಕಾಂ ಓದುತ್ತಿರುವ ಶ್ರವಣ್ ಉಡುಪಿಯಿಂದ ತಮ್ಮ ಹಕ್ಕನ್ನು ಚಲಾಯಿಸಲು ಊರಿಗೆ ಬಂದಿದ್ದರು. ಕಳೆದ ವರ್ಷವೇ ತನ್ನ ಹೆಸರನ್ನು ನೋಂದಾಯಿಸಿಕೊಂಡು ಐಡಿ ಕಾರ್ಡ್ ಪಡೆದಿದ್ದರು. ಆದರೆ ಇಂದು ಮತಗಟ್ಟೆಗೆ ಆಗಮಿಸಿ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದನ್ನು ಪ್ರಶ್ನಿಸಿ ನಿರಾಸೆ ಅನುಭವಿಸಬೇಕಾಯಿತು.

    ಇದಲ್ಲದೆ ಮಲ್ಲರಹೊಸಳ್ಳಿ ಗ್ರಾಮದ ಹತ್ತಕ್ಕೂ ಹೆಚ್ಚು ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದರಿಂದ ಮತದಾನದ ಅವಕಾಶ ಕೈ ತಪ್ಪಿದ್ದು ಆಕ್ರೋಶಕ್ಕೆ ಕಾರಣವಾಯಿತು.

    ಅಂಗವಿಕಲರು ಹಾಗೂ 80ಕ್ಕಿಂತ ಹೆಚ್ಚು ವಯಸ್ಸಾದ ಅಜ್ಜಿಯಂದಿರು, ಅನಾರೋಗ್ಯಪೀಡಿತರು ಸಹ ತಮ್ಮ ಕುಟುಂಬದವರ ಸಹಾಯ ಪಡೆದು ಬಂದು ಮತ ಚಲಾಯಿಸಿದರು. ಹಿರಿಯ ವಯಸ್ಸಿನವರಿಗೆ ಹಾಗೂ ಅಂಗವಿಕಲರಿಗೆ ಮನೆಯಲ್ಲೆ ಕೂತು ಮತದಾನ ಮಾಡುವ ಅವಕಾಶ ಸರ್ಕಾರ ಕಲ್ಪಿಸಿಕೊಟ್ಟಿದ್ದರೂ ಎಡೆಹಳ್ಳಿ ಗ್ರಾಮದ ದೊಡ್ಡಮ್ಮ ಹಾಗೂ ಪಡುವಳಲು ಗ್ರಾಮದ ಅಂಗವಿಕಲರಾದ ಬಸವೇಗೌಡ ಆಟೋದಲ್ಲಿ ಬಂದು ಕುಟುಂಬದವರ ಸಹಾಯ ಪಡೆದು ಮತ ಚಲಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts