More

    ಮತಕ್ಕಾಗಿ ಹಿಜಾಬ್ ವಿವಾದ ಸೃಷ್ಟಿ

    ಕೋಲಾರ: ಹಿಜಾಬ್ ವಿವಾದವನ್ನು ಬಿಜೆಪಿ ಅಜೆಂಡಾವಾಗಿ ರೂಪಿಸಿಕೊಂಡು ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಕೇಂದ್ರ ವಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

    ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಉಪಚುನಾವಣೆ ಫಲಿತಾಂಶದಿಂದ ವಿಚಲಿತವಾಗಿರುವ ಬಿಜೆಪಿ ನಾಯಕರು ಆರ್‌ಎಸ್‌ಎಸ್, ಬಜರಂಗದಳ ಬಳಸಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸ ವಾಡುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಗಳಲ್ಲಿ ಹಿನ್ನಡೆಯಾದ್ದರಿಂದ ಮುಂದಿನ ಚುನಾವಣೆಗಳಲ್ಲಿ ಮತಬ್ಯಾಂಕ್ ಗಟ್ಟಿ ವಾಡಿಕೊಳ್ಳಲು ಇಂತಹ ಪ್ರಯತ್ನ ವಾಡುತ್ತಿದ್ದಾರೆ ಎಂದರು.

    ವಿವಿಧತೆಯಲ್ಲಿ ಏಕತೆ ಕಂಡುಕೊಂಡಿರುವ ರಾಷ್ಟ್ರದಲ್ಲಿ ಎಲ್ಲ ಧರ್ಮೀಯರು ಬದುಕಲು ಸವಾನತೆಯ ಹಕ್ಕು ಕಲ್ಪಿಸಲಾಗಿದೆ. ತಮ್ಮದೇ ಆದ ತತ್ವ-ಸಿದ್ಧಾಂತ, ಸಂಸ್ಕ ೃತಿಯನ್ನು ಆಚರಿಸಿಕೊಂಡು ಬರುತ್ತಿರುವುದು ನಾಗರಿಕತೆಯ ಪ್ರತಿರೂಪವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಅವರವರ ಧರ್ಮ, ಸಂಸ್ಕ ೃತಿಗಳಲ್ಲಿ ತಮ್ಮದೇ ಆದ ವಸ್ತ್ರಗಳನ್ನು ಅಳವಡಿಸಿಕೊಳ್ಳುವ ಪರಂಪರೆ ಕಾಣಬಹುದಾಗಿದೆ. ಅಂದಿನಿಂದ ಅವರವರ ಸಂಪ್ರದಾಯಕ್ಕೆ ಯಾರೂ ಅಡ್ಡಿ ಪಡೆಸಿದ ಇತಿಹಾಸವಿಲ್ಲ. ಎಲ್ಲರಿಗೂ ತಮ್ಮದೇ ಧಾರ್ಮಿಕ ಪರಂಪರೆಯನ್ನು ಮುಕ್ತವಾಗಿ ಆಚರಿಸಿಕೊಳ್ಳುವ ಸ್ವಾತಂತ್ರ್ತ್ಯ ನೀಡಲಾಗಿದೆ ಎಂದರು.

    ಜಾತ್ಯತೀತ ತತ್ವಾಧಾರದ ದೇಶದಲ್ಲಿ ಧಾರ್ಮಿಕ ಪರಂಪರೆಗೆ ಚ್ಯುತಿ ಬರುವಂತೆ ಇದುವರೆಗೆ ಆಡಳಿತ ಮಾಡಿದ ಸರ್ಕಾರಗಳು ನಡೆದುಕೊಂಡಿಲ್ಲ. ಆದರೆ ಪ್ರಸ್ತುತ ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ದುರದೃಷ್ಟಕರ ಬೆಳವಣಿಗೆ ಕಂಡುಬರುತ್ತಿವೆ. ಶಾಲಾ, ಕಾಲೇಜು ಅಭಿವೃದ್ಧಿ ಸಮಿತಿಗಳು ಅಭಿವೃದ್ಧಿಗೆ ವಾತ್ರ ಒತ್ತು ನೀಡಬೇಕಿದ್ದು, ಧಾರ್ಮಿಕ ವಿಚಾರಗಳಲ್ಲಿ ಮೂಗು ತೂರಿಸುವ ನೈತಿಕತೆ ಇಲ್ಲ ಎಂದರು.

    ಸಚಿವ ಈಶ್ವರಪ್ಪ ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿರುವುದು ಸರಿಯಲ್ಲ. ಇದು ಭಾರತದ ಸಂವಿಧಾನಕ್ಕೆ ವಾಡಿದ ಅಪವಾನ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗಳ ಹಿಂದೆ ಬಿಜೆಪಿ ಅಜೆಂಡಾ ಇದೆ. ಪಕ್ಷದ ರಾಜಕೀಯ ಲಾಭಕ್ಕಾಗಿ ವಾಡುತ್ತಿರುವ ಹುನ್ನಾರ ಇದಾಗಿದೆ. ದೇಶದಲ್ಲಿ ಅರಾಜಕತೆ ಸಷ್ಟಿಸಿ ಚುನಾವಣೆಗಳಲ್ಲಿ ಮತದಾರರ ದಿಕ್ಕು ತಪ್ಪಿಸಿ ಲಾಭ ಪಡೆಯುವುದಾಗಿದೆ. ಜನ ಈ ವಿಚಾರವಾಗಿ ಎಚ್ಚೆತ್ತುಕೊಳ್ಳಬೇಕು. ಎಲ್ಲ ಧರ್ಮೀಯ ಹೆಣ್ಣುಮಕ್ಕಳು ಒಂದೇ, ಅವರೆಲ್ಲ ಭಾರತೀಯರು ಎಂಬ ಅರ್ಥದಲ್ಲಿ ಶಾಸಕ ಜಾಮೀರ್ ಆಹಮದ್ ಹೇಳಲು ಪ್ರಯತ್ನಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮುಖಂಡ ಪ್ರಸಾದ್ ಬಾಬು, ಮಹಿಳಾ ಟಕದ ಜಿಲ್ಲಾಧ್ಯಕ್ಷೆ ರತ್ಮಮ್ಮ, ಕೆಯುಡಿಎ ವಾಜಿ ಅಧ್ಯಕ್ಷ ಅಥಾವುಲ್ಲಾ ಖಾನ್, ಅಲ್ಪಸಂಖ್ಯಾತ ಟಕದ ಅಧ್ಯಕ್ಷ ಯಕ್ಬಾಲ್ ಆಹಮದ್, ಎಸ್.ಸಿ.ಟಕದ ಅಧ್ಯಕ್ಷ ಜಯದೇವ್, ಹಿಂದುಳಿ ವರ್ಗಗಳ ಟಕದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.

    ರಾಯಚೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ನ್ಯಾಯಾಧೀಶರು ಅವವಾನಿಸಿರುವ ಪ್ರಕರಣವು ತುಂಬಾ ನೋವಿನ ಸಂಗತಿ. ದೇಶ ಹಾಗೂ ಸಂವಿಧಾನ ಶಿಲ್ಪಿಗೆ ವಾಡಿದ ಅವವಾನ. ಇಂತಹ ಪ್ರಕರಣ ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು.
    ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts