More

    ಮಣ್ಣು ಕುಸಿದು ಕಾರ್ವಿುಕ ಸಾವು

    ಹುಬ್ಬಳ್ಳಿ: ಕೊಯಿನ್ ರಸ್ತೆಯಲ್ಲಿ ಒಳಚರಂಡಿ (ಯುಜಿಡಿ) ಪೈಪ್​ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ವಿುಕನ ಮೇಲೆ ಬಿದ್ದ ಪರಿಣಾಮ ಆತ ಉಸಿರುಗಟ್ಟಿ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

    ಕುಂದಗೋಳ ತಾಲೂಕು ಯಲಿವಾಳ ಗ್ರಾಮದ ರವಿ ವಿವೇಕಿ (25) ಮೃತಪಟ್ಟ ಕಾರ್ವಿುಕ. ರವಿ ತಾಳಿಕೋಟೆ ಎಂಬ ಗುತ್ತಿಗೆದಾರ ನಡೆಸುತ್ತಿರುವ ಕಾಮಗಾರಿಯಲ್ಲಿ ರವಿ ಯಲಿವಾಳ ಕಾರ್ಯ ನಿರ್ವಹಿಸುತ್ತಿದ್ದರು. ಒಳಚರಂಡಿ ಪೈಪ್​ಲೈನ್​ಗಾಗಿ ಸುಮಾರು 8 ಅಡಿ ಆಳದಲ್ಲಿ ಇಳಿದು ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದಿದೆ. ಕೂಡಲೇ ಎಚ್ಚೆತ್ತ ಸಹ ಕಾರ್ವಿುಕರು ಹಾಗೂ ಸ್ಥಳೀಯರು ಕಾರ್ವಿುಕನ ರಕ್ಷಣೆಗೆ ಮುಂದಾದರು. ಮಣ್ಣಿನಿಂದ ಆತನನ್ನು ಹೊರತೆಗೆದು ಪಕ್ಕದ ಅಂಜುಮನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಲಾಗಿತ್ತಾದರೂ ಆತ ಬದುಕುಳಿಯಲಿಲ್ಲ. ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

    ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು
    ಗುತ್ತಿಗೆದಾರನ ನಿರ್ಲಕ್ಷ್ಯಂದ ದುರ್ಘಟನೆ ಸಂಭವಿಸಿದೆ ಎಂದು ಗುತ್ತಿಗೆದಾರ ರವಿ ತಾಳಿಕೋಟೆ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ವಿುಕರಿಗೆ ಹೆಲ್ಮೆಟ್ ಮತ್ತಿತರ ರಕ್ಷಣಾ ಪರಿಕರಗಳನ್ನು ನೀಡಿದ್ದರೆ ಬಡಪಾಯಿ ಕಾರ್ವಿುಕ ಬದುಕುಳಿಯುತ್ತಿದ್ದನೆಂಬ ಮಾತು ಕೇಳಿ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts