More

    ಮಣ್ಣಿನ ಜೀವವೈವಿಧ್ಯ ರಕ್ಷಿಸಬೇಕಿದೆ

    ಶಿರಸಿ: ಮಣ್ಣಿನ ಆರೋಗ್ಯ ಸರಿಯಿದ್ದರೆ ಮಾತ್ರ ಮಾನವನ ಆರೋಗ್ಯ ಸರಿಯಿರಲು ಸಾಧ್ಯ. ಹಾಗಾಗಿ ಮಣ್ಣಿನ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಶಿರಸಿ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಎನ್.ಕೆ. ಹೆಗಡೆ ಹೇಳಿದರು.

    ವಿಶ್ವ ಮಣ್ಣು ದಿನಾಚರಣೆ ಸಪ್ತಾಹದ ಅಂಗವಾಗಿ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ಮಾನವ ಸಂಕುಲ ಹೆಚ್ಚು ಕಾಳಜಿ ವಹಿಸುತ್ತಿರುವುದು ಆರೋಗ್ಯದ ಕಡೆಗೆ. ನಾವು ಆರೋಗ್ಯವಿದ್ದರೆ ಏನು ಬೇಕಾದರು ಸಾಧಿಸಬಹುದು. ಆರೋಗ್ಯ ಚೆನ್ನಾಗಿರಲು ಪೌಷ್ಟಿಕ ಆಹಾರ ಸೇವಿಸಬೇಕು. ಗುಣಮಟ್ಟದ ಆಹಾರ ಉತ್ಪತ್ತಿಗೆ ಆರೋಗ್ಯಯುಕ್ತ ಹಣ್ಣು, ತರಕಾರಿ, ಹೂವು, ದವಸ ಧಾನ್ಯಗಳನ್ನು ಬೆಳೆಯಬೇಕು. ಇವನ್ನು ಬೆಳೆಯಲು ಮಣ್ಣು ಮುಖ್ಯ. ಈ ಮಣ್ಣನ್ನು ನಾವು ಆರೋಗ್ಯದಿಂದ ನೋಡಿಕೊಳ್ಳಬೇಕು ಎಂದರು.

    ಡಾ. ಶಿವಕುಮಾರ ಕೆ.ಎಂ. ಮಾತನಾಡಿ, ಮಣ್ಣಿನ ಫಲವತ್ತತೆಯನ್ನು ಸಾವಯವ ಗೊಬ್ಬರಗಳ ಬಳಕೆಯಿಂದ ಹೆಚ್ಚಿಗೆ ಮಾಡಬಹುದು, ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಪೋಷಕಾಂಶ ಬಳಸಬೇಕು. ಮಣ್ಣಿನ ಆರೋಗ್ಯ ಹೆಚ್ಚಿಸಲು ಹಸಿರೆಲೆ ಗೊಬ್ಬರ, ಸೂಕ್ಷ್ಮ ಜೀವಿಗಳ ಬಳಕೆ, ಮಿಶ್ರ ಬೆಳೆ ಬೆಳೆಯಬೇಕು ಎಂದರು.

    ಡಾ. ಶಂಕರ ಮೇಟಿ ಮಾತನಾಡಿ, ಆಧುನಿಕ ಕೃಷಿ ಮತ್ತು ಕೈಗಾರಿಕೀಕರಣದಿಂದ ಮಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ನಾವು ಆರೋಗ್ಯಕರ ಆಹಾರ ಸೇವಿಸುವುದು ಕಷ್ಟವಾಗುತ್ತದೆ. ಮಣ್ಣಿನಲ್ಲಿ ಸಾವಿರಾರು ಸೂಕ್ಷ್ಮಜೀವಿಗಳಿವೆ. ಈ ಜೀವಿಗಳನ್ನು ರಾಸಾಯನಿಕ ಗೊಬ್ಬರ ಬಳಕೆಯಿಂದ ನಾಶ ಮಾಡುತ್ತಿದ್ದೇವೆ. ಸಾವಯವ ಗೊಬ್ಬರ ಬಳಕೆಯಿಂದ ಈ ಜೀವಿಗಳನ್ನು ಕಾಪಾಡಬಹುದು. ಮಣ್ಣಿನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಈ ಸೂಕ್ಷ್ಮ ಜೀವಿಗಳಿಂದ ಹೆಚ್ಚಿಸಬಹುದು ಎಂದರು.

    ತಾಂತ್ರಿಕ ಸಲಹೆಗಾರ ಪ್ರವೀಣಕುಮಾರ ಯಲಗೂರ ಇದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಪ್ರೀತಮ್ ಎಸ್.ಪಿ., ನಿರ್ವಹಿಸಿದರು. ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts