More

    ಜಾಳಿಯಲ್ಲಿ ಮೀನು ವ್ಯಾಪಾರಕ್ಕೆ ಮಳಿಗೆ ನಿರ್ಮಾಣ

    ಕಾರವಾರ: ಮಾಜಾಳಿಯಲ್ಲಿ ರಸ್ತೆ ಪಕ್ಕದಲ್ಲಿ ಕುಳಿತು ಮೀನು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಲು ಮಳಿಗೆ ನಿರ್ವಿುಸುವ ಯೋಚನೆ ಇದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

    ಮಾಜಾಳಿಯ ರಾಷ್ಟ್ರೀಯ ಹೆದ್ದಾರಿ 66ರಿಂದ ಪೇಡ್​ಗೆ ತೆರಳುವ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಳಿಗೆ ನಿರ್ವಣದ ಬಗ್ಗೆ ಜಾಗದ ಲಭ್ಯತೆ ಕುರಿತು ಸಂಬಂಧಪಟ್ಟ ಇಲಾಖೆಯವರಿಗೆ ತಕ್ಷಣ ಮಾಹಿತಿ ಒದಗಿಸಬೇಕು ಎಂದರು.

    ವ್ಯವಸ್ಥಿತ ರಸ್ತೆ ಈ ಪ್ರದೇಶದ ಜನತೆಯ ಹಲವು ವರ್ಷದ ಬೇಡಿಕೆಯಾಗಿದೆ. ಈ ಹಿಂದೆ ಯಾವ ಜನಪ್ರತಿನಿಧಿಯೂ ಈ ರಸ್ತೆ ನಿರ್ವಣದ ಬಗ್ಗೆ ಆಸಕ್ತಿ ವಹಿಸಿರಲಿಲ್ಲ. ಸದ್ಯ 24 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಪೂರ್ಣಗೊಳಿಸಲು ಇನ್ನೂ ಬೇಕಿರುವ 20 ಲಕ್ಷ ರೂಪಾಯಿಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಜನರ ಬೇಡಿಕೆಗಳಾದ ಬೀದಿ ದೀಪ ಅಳವಡಿಕೆ, ಚರಂಡಿ ನಿರ್ಮಾಣ ಇವೆಲ್ಲವೂ ಗಮನಕ್ಕಿದೆ. ಶೀಘ್ರದಲ್ಲಿ ಸಾರ್ವಜನಿಕರ ಸಮಸ್ಯೆ ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗವುದು ಎಂದರು.

    ಬಿಜೆಪಿ ಮುಖಂಡ ರವೀಂದ್ರ ಪವಾರ, ಗ್ರಾಪಂ ಅಧ್ಯಕ್ಷ ಕೃಷ್ಣಾ ಮಾಳ್ಸೇಕರ್, ಉಪಾಧ್ಯಕ್ಷೆ ಲೀನಾ ಕೊಠಾರಕರ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts