More

    ಮಕ್ಕಳ ಮೂಲಕ ಪಾಲಕರಿಗೆ ಪ್ರೇರಣೆ

    ಹುಬ್ಬಳ್ಳಿ: ಹು-ಧಾ ಸ್ಮಾರ್ಟ್​ಸಿಟಿ ಸಂಸ್ಥೆ ನಾಗರಿಕ ಸೌಲಭ್ಯಗಳು ಹಾಗೂ ನಗರ ಪ್ರದೇಶದಲ್ಲಿ ಜೀವನದ ಕ್ಷಮತೆ ಕುರಿತು ಸಮೀಕ್ಷಣಾ ಅಭಿಯಾನ ಕೈಗೊಂಡಿದೆ. ಇದರಲ್ಲಿ ನಾಗರಿಕರು ಪಾಲ್ಗೊಳ್ಳುವಂತೆ ಮಾಡಲು ಶಾಲಾ ಮಕ್ಕಳ ಮೂಲಕ ಪಾಲಕರನ್ನು ಪ್ರೇರೇಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

    ಸೋಮವಾರ ಲ್ಯಾಮಿಂಗ್ಟನ್ ಶಾಲೆಯಲ್ಲಿ ಅಭಿಯಾನದ ಕುರಿತು ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ‘ಆನ್​ಲೈನ್ ಮೂಲಕ ನಾಗರಿಕ ಸೌಲಭ್ಯಗಳ ಕುರಿತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಿಮ್ಮ ಪಾಲಕರಿಗೆ ತಿಳಿಸಿ. ರಾತ್ರಿ ಊಟದ ನಂತರ ಪಾಲಕರೊಂದಿಗೆ ಕುಳಿತುಕೊಂಡು Eol2019.org/citizenfeedback ವೆಬ್​ಸೈಟ್ ಮೂಲಕ ನಾಗರಿಕ ಸೌಲಭ್ಯಗಳು ಹಾಗೂ ನಗರ ಪ್ರದೇಶದಲ್ಲಿ ಜೀವನದ ಕ್ಷಮತೆ ಕುರಿತು ನಾಗರಿಕ ಸಮೀಕ್ಷಣಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿ. ಇದೇ ನಿಮಗೆ ಮನೆಪಾಠ’ ಎಂದು ಹೇಳಿದರು.

    ಹು-ಧಾ ಸ್ಮಾರ್ಟ್​ಸಿಟಿ ಸಂಸ್ಥೆಯಿಂದ ಕೈಗೊಂಡ ಸಮೀಕ್ಷಣಾ ಅಭಿಯಾನದಲ್ಲಿ ಈವೆರೆಗೆ 6,965 ನಾಗರಿಕರು ಆನ್​ಲೈನ್ ಮೂಲಕ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿ, ನಗರ ಮಾಪನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ 7 ಸ್ಮಾರ್ಟ್​ಸಿಟಿ ನಗರಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪ್ರಥಮ ಸ್ಥಾನದಲ್ಲಿದೆ ಎಂದು ಸ್ಮಾರ್ಟ್​ಸಿಟಿ ಸಂಸ್ಥೆಯ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts